ಮಡಿಕೇರಿ, ಜ. ೧೨: ತಾ. ೧೪ ರಂದು ಸಂಜೆ ೬ ಗಂಟೆಯಿAದ ೮.೩೦ ಗಂಟೆಯ ತನಕ ೭ನೇ ಹೊಸಕೋಟೆಯ ಶ್ರೀ ಮಹಾಗಣಪತಿ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಶ್ರೀ ಅಯ್ಯಪ್ಪ ಸನ್ನಿಧಿಯಲ್ಲಿ ಮಕರ ಸಂಕ್ರಮಣ ಪ್ರಯುಕ್ತ ಸತ್ಯನಾರಾಯಣ ಪೂಜೆಯನ್ನು ಏರ್ಪಡಿಸಲಾಗಿದೆ.

ಮಂಗಳಾರತಿ ನಂತರ ಅನ್ನದಾನ ಇರುತ್ತದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ ತಿಳಿಸಿದ್ದಾರೆ.