ವೀರಾಜಪೇಟೆ, ಜ. ೧೨: ವೀರಾಜಪೇಟೆ ಸಿದ್ದಾಪುರ ರಸ್ತೆಯ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಾಲಯದಲ್ಲಿ ಕೋವಿಡ್-೧೯ ನಿಬಂಧನೆಗಳ ಮಾರ್ಗಸೂಚಿಯಂತೆ ತಾ. ೧೪ ರಂದು ಸಂಜೆ ೬.೪೫ ಗಂಟೆಗೆ ಮಕರ ಜ್ಯೋತಿ ಪೂಜೆ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಮಕರ ಸಂಕ್ರಾತಿ ಪ್ರಯುಕ್ತ ದೇವಾಲಯದಲ್ಲಿ ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳು ಜರುಗಲಿದೆ. ಮಹಾಪೂಜಾ ಸೇವೆಯ ನಂತರ ರಾತ್ರಿ ೭ ಗಂಟೆಗೆ ದೇವಾಲಯದ ಸುತ್ತ ಉತ್ಸವ ಮೂರ್ತಿಯ ನೃತ್ಯ ಪ್ರದಕ್ಷಿಣೆ ನಡೆಯಲಿದೆ.