ನಾಪೋಕ್ಲು, ಜ. ೧೨: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರ್‌ನಲ್ಲಿದ್ದ ೮ ಮಂದಿಗೆ ಸಣ್ಣಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓರ್ವನಿಗೆ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಟ್ಟಗೇರಿ - ಬಕ್ಕ ಮಾರ್ಗ ಮಧ್ಯೆ ಭಾಗಮಂಡಲದಿAದ ಬರುತ್ತಿದ್ದ ಓಮ್ನಿ ಮತ್ತು ಮಡಿಕೇರಿಯಿಂದ ಚೇರಂಬಾಣೆ ಕಡೆಗೆ ಹೋಗುತ್ತಿದ್ದ ಮಾರುತಿ ೮೦೦ ನಡುವೆ ಅಪಘಾತ ಸಂಭವಿಸಿದೆ.
ಡಿಕ್ಕಿಯಾದ ಪರಿಣಾಮ ಕಾರು ಜಖಂಗೊAಡಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.