ಶನಿವಾರಸಂತೆ, ಜ. ೧೧: ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಪತಿ ವಿರುದ್ಧ ೨ನೇ ಪತ್ನಿ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಾಲಂಬಿ ಗ್ರಾಮದ ರವೀಂದ್ರ ಅದೇ ಗ್ರಾಮದ ಯುವತಿಯನ್ನು ೫ ವರ್ಷದ ಹಿಂದೆ ಮದುವೆಯಾಗಿದ್ದ. ಬಳಿಕ ಮದುವೆಯಾಗದಿದ್ದರೆ ನಿನ್ನ ಅಕ್ಕ ಮತ್ತು ಮಗುವನ್ನು ಸಾಯಿಸುತ್ತೇನೆ ಎಂದು ಹೆದರಿಸಿ ಮೊದಲ ಪತ್ನಿಯ ತಂಗಿಯನ್ನು ಮದುವೆಯಾಗಿದ್ದಾರೆ. ಆ ನಂತರ ನಿತ್ಯ ಮದ್ಯ ಸೇವಿಸಿ ನೀಡುತ್ತಿದ್ದ ಮಾನಸಿಕ ಹಾಗೂ ದೈಹಿಕ ಹಿಂಸೆ ತಾಳಲಾರದೆ ೨ನೇ ಪತ್ನಿ ದೂರು ನೀಡಿದ್ದು, ಪೊಲೀಸರು ಸೆಕ್ಷನ್ ೪೯೮ (ಎ), ೫೦೬ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.