ಕೂಡಿಗೆ, ಜ. ೧೧ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ- ಕಣಿವೆ ವ್ಯಾಪ್ತಿಯಲ್ಲಿ ಕಳೆದ ಎರಡೂ ದಿನಗಳಿಂದ ಬಾಣವಾರ ಮೀಸಲು ಅರಣ್ಯ ಪ್ರದೇಶದಿಂದ ಬಂದಿರುವ ನಾಲ್ಕು ಕಾಡಾನೆಗಳ ಹಾವಳಿ ಹೆಚ್ಚಾಗಿ ಈ ವ್ಯಾಪ್ತಿಯ ಅನೇಕ ರೈತರ ಬೆಳೆ ಹಾಳು ಮಾಡುವುದರ ಜೊತೆಗೆ ಜನರು ಜೀವಭಯ ಎದುರಿಸುವಂತಾಗಿದೆ. ಕಳೆದ ಮೂರು ದಿನಗಳ ಹಿಂದೆ ಬಾಣವಾರ ಮೀಸಲು ಅರಣ್ಯ ಪ್ರದೇಶದಿಂದ ಬಂದ ಕಾಡಾನೆಗಳು ಹಗಲು ಕಣಿವೆ, ಭುವನಗಿರಿ, ಸೀಗೆಹೊಸೂರು, ಹುಣಸೇಪಾರೆ, ಹಕ್ಕೆಮಂಟಿ ಗ್ರಾಮ ಗಳಲ್ಲಿ ದಾಳಿ ಮಾಡಿ ಭಾರೀ ನಷ್ಟ ಪಡಿಸುತ್ತಿದೆ.

ಕಳೆದ ಎರಡು ದಿನಗಳ ಹಿಂದೆ ನಾಡಿಗೆ ಹಗಲು ಬಂದ ಕಾಡಾನೆಗಳನ್ನು ಕಾಡಿಗೆ ಓಡಿಸಲು ಇಲ್ಲಿನ ಅರಣ್ಯ ಸಿಬ್ಬಂದಿಗಳು ಯತ್ನಿಸಿದರೂ ಸಹ ಕಾಡಾನೆ ಗಳು ಬಾಣವಾರದ ಮೀಸಲು ಅರಣ್ಯವನ್ನು ದಾಟಿಲ್ಲ. ಇದರಿಂದಾಗಿ ಮತ್ತೆ ಪುನಃ ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಾಳಿ ಹೆಚ್ಚಾಗಿ ಹಗಲು ಓಡಾಟ ಪ್ರಾರಂಭವಾಗಿದೆ. ಇದರಿಂದ ಈ ವ್ಯಾಪ್ತಿಯ ಗ್ರಾಮಸ್ಥರು ಭಯಭೀತ ರಾಗಿದ್ದಾರೆ. ಶನಿವಾರ ಭುವನಗಿರಿ ಹತ್ತಿರವಿರುವ ಕಸ ವಿಲೇವಾರಿ ಘಟಕ ಹತ್ತಿರ ಕಾಣಿಸಿಕೊಂಡ ನಾಲ್ಕು ಕಾಡಾನೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಟಾಕಿ ಸಿಡಿಸಿ ಸೀಗೆಹೊಸೂರು ಅರಣ್ಯದತ್ತ ಅಟ್ಟಿದ್ದಾರೆ.

ಕುಶಾಲನಗರ ಹೋಬಳಿ ವ್ಯಾಪ್ತಿಯ ಹುದುಗೂರು, ಹೆಬ್ಬಾಲೆ, ಬಾಣವಾರ ವ್ಯಾಪ್ತಿಯ ಮೂರು ಉಪವಲಯ ಅರಣ್ಯ ಕಚೇರಿಗೆ ಹೊಸದಾಗಿ ಅಧಿಕಾರಿಗಳ ನೇಮಕ ಮಾಡಲಾಗಿದೆ. ಈ ಅಧಿಕಾರಿಗಳು ಕಳೆದ ಆರು ತಿಂಗಳಲ್ಲಿ ತರಬೇತಿಯನ್ನು ಪಡೆದು ಈ ಕೇಂದ್ರಗಳಿಗೆ ನೇಮಕಗೊಂಡು ಬಂದಿರುವ ಇವರುಗಳಿಗೆ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಅನುಭವದ ಕೊರೆತೆಯು ಇರುವುದು ಕಂಡುಬರುತ್ತದೆ. ಇದರಿಂದಾಗಿ ಅಕಸ್ಮಾತ್ತಾಗಿ ಬಂದ ಕಾಡಾನೆಗಳನ್ನು ಕಾಡಿಗೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಇದರ ಜೊತೆಯಲ್ಲಿ ತಾಲೂಕು ಮಟ್ಟದ ಅರಣ್ಯ ಅಧಿಕಾರಿಗಳು ಸಹ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಆಯ್ಕೆಗೊಂಡು ತರಬೇತಿಯ ಅವಧಿಯ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬರುತ್ತದೆ. ಇದರಿಂದಾಗಿ ಜಿಲ್ಲಾಮಟ್ಟದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಗಳ ಹಾವಾಳಿ ತಪ್ಪಿಸಲು ಬೇಕಾಗುವ, ಮತ್ತು ಕಾಡಿಗೆ ಅಟ್ಡುವ ಕಾರ್ಯಕ್ಕೆ ಅನುಭವಿ ಅಧಿಕಾರಿಗಳನ್ನು ನೇಮಕ ಮಾಡಿ ಗ್ರಾಮಸ್ಥರಿಗೆ ಕಾಡಾನೆಗಳಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಮುಂದಾಗಬೇಕೆAದು ಈ ವ್ಯಾಪ್ತಿಯ ಗ್ರಾಮಸ್ಥರುಗಳಾದ ಕೆ.ಸಿ. ನಂಜುAಡಸ್ವಾಮಿ, ಪಾಪು, ದೇವರಾಜು, ಗಿರೀಶ, ರಾಜಣ್ಣ, ಕುಮಾರ್, ಧನಂಜಯ ಸೇರಿದಂತೆ ರೈತರು ಒತ್ತಾಯಿಸಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ