ಮಡಿಕೇರಿ, ಜ. ೧೧ : ಗ್ರಾಮಾಭಿವೃದ್ಧಿ ಚಿಂತನೆಯನ್ನು ಗುರಿಯಾಗಿರಿಸಿಕೊಂಡು ಗ್ರಾಮ ಪಂಚಾಯಿತಿ ನೂತನ ಚುನಾಯಿತ ಸದಸ್ಯರು ಕೆಲಸ ಮಾಡಬೇಕೆಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಈಶ್ವರಪ್ಪ ಕರೆ ನೀಡಿದರು. ನಗರದ ಕ್ರಿಸ್ಟಲ್ ಕೋರ್ಟ್ ಹೊಟೇಲ್ ಸಭಾಂಗಣದಲ್ಲಿ ನಡೆದ ಜನಸೇವಕ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾ.ಪಂ. ಚುನಾವಣೆಯಲ್ಲಿ ಈ ಬಾರಿ ಮಹಿಳಾ ಅಭ್ಯರ್ಥಿಗಳು ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಮನೆಯನ್ನು ಸಮರ್ಥವಾಗಿ ನಿರ್ವಹಿಸುವ ಮಹಿಳೆಯರು ಸಮಾಜವನ್ನು ಉತ್ತಮವಾಗಿ ಮುನ್ನಡೆಸುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಇದೆ ಎಂದ ಅವರು, ಮೂಲಭೂತ ಸೌಕರ್ಯ ಒದಗಿಸುವುದರ ಜೊತೆಗೆ ಸಾಮಾನ್ಯ ಜನರ ಭಾವನೆಗೆ ನೂತನ ಸದಸ್ಯರು ಸ್ಪಂದಿಸಬೇಕು. ರಾಷ್ಟç, ರಾಜ್ಯದ ವಿಚಾರಗಳನ್ನು ಜನರಿಗೆ ಅರ್ಥ ಮಾಡಿಸಬೇಕು. ಅಧಿಕಾರ ವಿಕೇಂದ್ರೀಕರಣದ ಮೂಲ ಅರಿತು ಕಾರ್ಯೋನ್ಮುಖಗೊಂಡು. ರಾಷ್ಟಿçÃಯತೆ ಮೌಲ್ಯವನ್ನು ತಿಳಿಸುವ ಕೆಲಸವನ್ನು ಚುನಾಯಿತ ಪ್ರತಿನಿಧಿಗಳು ಮಾಡಬೇಕೆಂದು ಕರೆ ನೀಡಿದರು. ಗ್ರಾಮೀಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿ ಹಣವನ್ನು ವಿನಿಯೋಗಿಸುತ್ತಿದ್ದು, ಗ್ರಾ.ಪಂ ಸದಸ್ಯರುಗಳು ಸಮರ್ಪಕವಾಗಿ ಅನುದಾನ ಬಳಸಿಕೊಂಡು ಗ್ರಾಮದ ಅಭಿವೃದ್ಧಿಗೆ ಕೆಲಸ ಮಾಡಿ ಮಾದರಿ ಗ್ರಾಮ ನಿರ್ಮಿಸಬೇಕು. ಗ್ರಾಮಾಭಿವೃದ್ಧಿಯ ಅಪೇಕ್ಷೆಯಂತೆ ಜನಸಂಖ್ಯೆ ಆಧಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ಹಂಚಿಕೆ ಮಾಡುತ್ತಿದೆ. ಕೇಂದ್ರ ಸರ್ಕಾರ ನೀಡಿದ ೧ ರೂಪಾಯಿ ಗ್ರಾಮಕ್ಕೆ ಬರುವಷ್ಟರಲ್ಲಿ ೧೦ ಪೈಸೆ ಆಗುತಿತ್ತು, ಆದರೆ, ಇದೀಗ ಕಾಲ ಬದಲಾಗಿದೆ. ಸರ್ಕಾರದ ಅನುದಾನ ಸಮರ್ಪಕವಾಗಿ ಗ್ರಾ.ಪಂಗಳಿಗೆ ತಲುಪುತ್ತಿದೆ. ಗ್ರಾ.ಪಂಗೆ ಸೋಲಾರ್ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಹಣ ಬಂದಿದೆ. ಗ್ರಾ.ಪಂ ಕಟ್ಟಡಕ್ಕೆ ಸೋಲಾರ್ ಲೈಟ್ ಅಳವಡಿಸಿಕೊಳ್ಳಿ ಈ ನಿಟ್ಟಿನಲ್ಲಿ ಸರ್ಕಾರ ರೂ ೩೦೦ ಕೋಟಿ ವಿನಿಯೋಗಿಸುತ್ತಿದೆ. ಸ್ವಚ್ಛ ಭಾರತ ನಿರ್ಮಾಣ ಮೊದಲ ಪುಟದಿಂದ) ಜನಪ್ರತಿ ನಿಧಿಗಳ ಗುರಿಯಾಗಲಿ, ಪ್ರತಿ ಗ್ರಾ.ಪಂಗೆ ತಲಾ ರೂ ೨೦ ಲಕ್ಷ ಸ್ವಚ್ಛ ಭಾರತ ಯೋಜನೆ ಮೂಲಕ ನೀಡಲಾಗುತ್ತಿದೆ. ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಮೂಲಕ ಭೂಮಿ ಖರೀದಿ, ಸಿಬ್ಬಂದಿ ಹಾಗೂ ವಾಹನ ವ್ಯವಸ್ಥೆ ಮಾಡಲಾಗಿದೆ. ಆದರೆ, ರಾಜ್ಯದಲ್ಲಿ ಕೇವಲ ೧ ಸಾವಿರ ಪಂಚಾಯಿತಿ ಮಾತ್ರ ಇದನ್ನು ಬಳಸಿಕೊಂಡಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಈ ಬಗ್ಗೆ ಆಸಕ್ತಿ ವಹಿಸಿ ಸ್ವಚ್ಛ ಭಾರತ್ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದರು. ೧೫ನೇ ಹಣಕಾಸು ಹಂಚಿಕೆ ಬಗ್ಗೆ ಗ್ರಾ.ಪಂ ಮಟ್ಟದಲಿ ಚರ್ಚೆ ಮಾಡಿ ಸಮರ್ಪಕವಾಗಿ ಅನುದಾನ ಸದ್ಭಳಕೆಯಾಗುವಂತೆ ಗಮನಹರಿಸ ಬೇಕು. ಗ್ರಾಮದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿ, ಉತ್ತಮ ಸೇವೆ ಮಾಡಿದರೆ ಪ್ರಧಾನಿ ಮೋದಿ ಅವರು ನಿಮ್ಮನ್ನು ಆಹ್ವಾನಿಸಿ ಸನ್ಮಾನ ಮಾಡುತ್ತಾರೆ ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು. ಅಧಿಕಾರ ಇಲ್ಲದ ಗ್ರಾ.ಪಂಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಆಯ್ಕೆ ಸಂದರ್ಭ ವೈಚಾರಿಕತೆ ದಿಕ್ಕಿನಲ್ಲಿ ಬೆಂಬಲಿಸಬೇಕು ಎಂದರು. ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಶೇ ೮೦ ರಷ್ಟು ಸ್ಥಾನ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಈ ನಿಟ್ಟಿನಲ್ಲಿ ನೂತನ ಗ್ರಾ.ಪಂ ಸದಸ್ಯರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ಹೋರಾಟಗಾರರ ಆತ್ಮಕ್ಕೆ ಶಾಂತಿ ದೊರೆತಿದೆ
ಶ್ಯಾಂ ಪ್ರಕಾಶ್ ಮುಖರ್ಜಿ ಭಾರತೀಯ ಜನಸಂಘ ಕಟ್ಟುವಾಗ ೧೦ ಪ್ರತಿನಿಧಿಗಳಿರಲಿಲ್ಲ. ಇಂದು ಬಿಜೆಪಿ ಎಲ್ಲ ಕಡೆ ಗೆಲುವು ಸಾಧಿಸುತ್ತ್ತಿದೆ. ಮೊದಲು ಕಾಂಗ್ರೆಸ್ ಹಿಡಿತದಲ್ಲಿದ್ದ ರಾಜ್ಯಗಳಲ್ಲಿ ಬಿಜೆಪಿ ಉತ್ತಮ ಅಧಿಕಾರ ನಡೆಸುತ್ತಿದೆ. ವಿಧಿ ೩೭೦ ಮೂಲಕ ಕಾಶ್ಮೀರವನ್ನು ಕಾಂಗ್ರೆಸ್ ಸರ್ಕಾರ ಪ್ರತ್ಯೇಕವಾಗಿರಿಸಿತ್ತು. ಅಂದು ಮುಖರ್ಜಿ ಅವರು ಇದು ಭಾರತದ ಭೂ ಭಾಗ ಎಂದು ಹೋರಾಟ ಮಾಡಿದ್ದರು. ಬಿಜೆಪಿಗೆ ಅಂದು ಬೆಂಬಲ ಸಿಗಲಿಲ್ಲ. ಕಾಂಗ್ರೆಸ್ ಸರ್ಕಾರ ಹೋರಾಟಗಾರರನ್ನು ಬಂಧಿಸಿತು. ಹೋರಾಟದಲ್ಲಿ ಮುಖರ್ಜಿ ಮರಣ ಹೊಂದಿದರು. ಇದೀಗ ೩೭೦ ವಿಧಿಯನ್ನು ಪ್ರಧಾನಿ ಮೋದಿ ರದ್ದು ಮಾಡಿ ಭಾರತ ಭಾಗವನ್ನಾಗಿ ಕಾಶ್ಮೀರವನ್ನು ಸೇರಿಸಿದ್ದಾರೆ. ಈ ಮೂಲಕ ಮುಖರ್ಜಿ ಕನಸು ಈಡೇರಿಸಲಾಗಿದೆ. ಇದರೊಂದಿಗೆ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿದೆ, ಗಡಿ ಸಂಘರ್ಷಗಳು ಪರಿಹಾರ ಕಾಣುತ್ತಿವೆ. ರಾಮ ಮಂದಿರ ನಿರ್ಮಾಣವಾಗುತ್ತಿದೆ; ಈ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ತೃಪ್ತಿ ಸಿಕ್ಕಿದೆ ಎಂದು ಈಶ್ವರಪ್ಪ ಹೇಳಿದರು.
ಕೊಡಗಿನ ಶಾಸಕರ ಎದುರು ಚುನಾವಣೆ ನಿಲ್ಲೋಕೆ ಭಯ ಪಡ್ತಾರೆ ಕೊಡಗಿನ ಶಾಸಕರ ಮುಂದೆ ಇತರ ಪಕ್ಷಗಳ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುವ ಭಯದಲ್ಲಿ ಚುನಾವಣೆ ನಿಲ್ಲಲು ಹೆದರುತ್ತಾರೆ ಎಂದು ಈಶ್ವರಪ್ಪ ಹೇಳಿದರು.
ಜಿಲ್ಲೆಯ ಶಾಸಕರು ಮಂತ್ರಿ ಸ್ಥಾನ ದೊರೆಯದ ಬಗ್ಗೆ ನನಗೆ ತಿಳಿದಿದೆ. ಆದರೆ, ಇತರ ಪಕ್ಷಗಳಿಂದ ಬಂದ ೧೭ ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತವನ್ನು ಬಿಜೆಪಿ ಸಾಧಿಸಲಿದೆ ಎಂದರು.
ಗೌರವಧನ ಹೆಚ್ಚು ಮಾಡಿ : ಕೋಟಾ ಶ್ರೀನಿವಾಸ್ ಮನವಿ
ಗ್ರಾ.ಪಂ. ಸದಸ್ಯರಿಗೆ ಮೊದಲು ಗೌರವಧನ ಇರಲಿಲ್ಲ. ೨೦೦೮ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ರೂ. ೬೦ ಕೋಟಿ ಹಣವನ್ನು ಗೌರವಧನಕ್ಕಾಗಿ ಮೀಸಲಿಟ್ಟಿತು. ಗ್ರಾಮೀಣಾಭಿವೃದ್ಧಿ ಸಚಿವರು ಗೌರವಧನವನ್ನು ರೂ. ೨ ಸಾವಿರಕ್ಕೆ ಏರಿಸಬೇಕು ಎಂದು ಮುಜರಾಯಿ ಹಾಗೂ ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮನವಿ ಮಾಡಿದರು.
ರಾಜ್ಯದಲ್ಲಿ ೬,೦೨೨ ಗ್ರಾ.ಪಂ.ಗಳಲ್ಲಿ ೯೯,೫೦೦ ಸದಸ್ಯರಿದ್ದು, ಇದರಲ್ಲಿ ೫೫ ಸಾವಿರ ಮಹಿಳೆಯರಿದ್ದಾರೆ. ಇದರಲ್ಲಿ ಬಹುತೇಕರು ಬಿಜೆಪಿ ಬೆಂಬಲಿತರು ಎಂಬುದು ಸಂತಸದ ವಿಚಾರ. ನೂತನ ಸದಸ್ಯರು ಆತ್ಮಸೈರ್ಯದಿಂದ ಕೆಲಸ ಮಾಡಬೇಕು. ಸಂಸದರು, ಶಾಸಕರಿಗೆ ಮತದಾನ ಮಾಡಿದವರು ನಿಮಗೂ ಮತ ಹಾಕಿದ್ದಾರೆ. ನೀವೆ ನಿಮ್ಮ ಗ್ರಾಮದ ಶಾಸಕರು ಎಂದರು.
ಗ್ರಾ.ಪA ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಮೀಸಲಾತಿ ಬಗ್ಗೆ ಒತ್ತಡ ತರಬೇಡಿ. ನಿಯಮಾನುಸಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಆಗುತ್ತದೆ. ಮೀಸಲಾತಿ ಯಾವುದಾದರೂ ಬರಲಿ. ಪರಿಣಾಮಕಾರಿ ಆಡಳಿತ ನೀಡುವ ಗುರಿಯೊಂದಿಗೆ ೫ ವರ್ಷ ಕೆಲಸ ಮಾಡಿ. ಮನೆಯ ಮಗನಾಗಿ ಕುಟುಂಬದ ರೀತಿ ಕೆಲಸ ಮಾಡಿದರೆ ಜನ ನಿರಂತರವಾಗಿ ಬೆಂಬಲಿಸುತ್ತಾರೆ ಎಂದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಪೂರ್ಣ ಬಹುಮತ ದೊರೆಯಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಂಡಿಸಿರುವ ಕೃಷಿ ಮಸೂದೆಗಳು, ಗೋಹತ್ಯೆ ನಿಷೇಧ ಕಾಯ್ದೆ ರೈತಪರ ಕಾನೂನಾಗಿವೆ. ದೇಶದ ಜನಸಂಖ್ಯೆಯಲ್ಲಿ ಶೇ ೪೮ ರಷ್ಟು ಮಂದಿ ಕೃಷಿ ವಲಯದಲ್ಲಿದ್ದಾರೆ. ಅವರು ಸುಧಾರಣೆಯಾದರೆ, ದೇಶ ಅಭಿವೃದ್ಧಿಯಾಗುತ್ತದೆ ಎಂದರಲ್ಲದೆ, ಅನುದಾನದ ಕ್ರಿಯಾ ಯೋಜನೆ ಬಗ್ಗೆ ಚಿಂತಿಸಿ ಯೋಜನೆ ರೂಪಿಸಬೇಕೆಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಮೊದಲು ಗ್ರಾಮೀಣ ಪ್ರದೇಶಗಳಲ್ಲಿ ಅನುಕೂಲತೆ ಕಡಿಮೆ ಇತ್ತು. ದೇಶಗಳ ಹಳ್ಳಿಯ ಪರಿಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿತ್ತು. ಮೂಲ ಸೌಕರ್ಯ ಇರಲಿಲ್ಲ. ಇಂದು ೧೫ನೇ ಹಣಕಾಸು ಯೋಜನೆ ಮೂಲಕ ರೂ ಒಂದು ಕೋಟಿ ಅನುದಾನ ಗ್ರಾ.ಪಂಗೆ ಬರುತ್ತಿದೆ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲು ಅವಕಾಶವಿದೆ. ಹಳ್ಳಿಗಳ ಅಭಿವೃದ್ಧಿಯ ಚಿತ್ರಣ ಮೋದಿ ಅವರಿಗಿದೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ, ವಿಧಾನಸಭಾ, ಲೋಕಸಭಾ, ಸಹಕಾರ ಸಂಘ, ಗ್ರಾ.ಪಂ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಜನತೆ ಆಶೀರ್ವಾದ ಮಾಡಿದ್ದಾರೆ. ಜನಪ್ರತಿನಿಧಿಗಳಿಗೆ ಜವಾಬ್ದಾರಿ ದೊಡ್ಡದಿದೆ. ಜನರ ಪರ ಕೆಲಸ ಮಾಡಬೇಕು. ಜನರ ಪ್ರೀತಿ, ವಿಶ್ವಾಸ ಸಂಪಾದಿಸಬೇಕು. ಚುನಾವಣಾ ಆಯೋಗದ ನಿರ್ದೇಶನ ದಂತೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಆಯ್ಕೆ ಆಗುತ್ತದೆ ಎಂದರು. ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಗ್ರಾ.ಪಂ ಸದಸ್ಯ ಗ್ರಾಮದ ಪ್ರಥಮ ಸೇವಕನಾಗಿರಬೇಕು. ಅಧಿಕಾರ ಚಲಾವಣೆಯ ದಿಮಾಕು ಬಂದರೆ ಪಕ್ಷ ಹಾಗೂ ಸಮಾಜಕ್ಕೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸದಸ್ಯರು ನಿತ್ಯ ಹಸನ್ಮುಖಿಯಾಗಿರಬೇಕು. ಅಭಿವೃದ್ಧಿ ಕಾಮಗಾರಿ ಗುಣಮಟ್ಟದ ಬಗ್ಗೆ ಪರಿಶೀಲಿಸಬೇಕು. ಇಲ್ಲದಿದ್ದರೆ ಬೇರೆ ಪಕ್ಷದವರು ಲಾಭ ತೆಗೆದುಕೊಳ್ಳುತ್ತಾರೆ. ಜಗಜೀವನ್ ರಾಮ್ ಯೋಜನೆ ಮೂಲಕ ರೂ ೫೦ ಕೋಟಿ ಅನುದಾನ ಬಂದಿದೆ. ಇದನ್ನು ಬಳಸಿಕೊಂಡು ಶುದ್ಧ ನೀರು ಪೂರೈಕೆ ಮಾಡಬಹುದು ಎಂದರು. ಫಲಾನುಭವಿಗಳಿಗೆ ಪಿಂಚಣಿ ತಲುಪಿಸಬೇಕು. ಮತದಾರರ ಸೇರ್ಪಡೆ ಮಾಡಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಅತ್ಯಧಿಕ ಸ್ಥಾನಗಳಲ್ಲಿ ಗ್ರಾ.ಪಂ ಚುನಾವಣೆಯಲ್ಲಿ ಗೆಲುವು ದಾಖಲಿಸಿದೆ. ಈ ನಿಟ್ಟಿನಲ್ಲಿ ನೂತನ ಸದಸ್ಯರಿಗಾಗಿ ಜನಸೇವಕ್ ಸಮಾವೇಶ ಆಯೋಜಿಸಲಾಗಿದೆ. ಕಾರ್ಯಕರ್ತರ ಶ್ರಮದಿಂದ ಅತ್ಯಧಿಕ ಸ್ಥಾನ ಗೆದ್ದಿದ್ದೇವೆ. ಚುನಾವಣೆ ಮುನ್ನ ನಡೆದ ಗ್ರಾಮ ಸ್ವರಾಜ್ಯ ಸಮಾವೇಶ ಸಂದರ್ಭ ಶೇ ೮೦ ರಷ್ಟು ಅಧಿಕಾರ ಪಡೆಯುತ್ತೇವೆ ಎಂದು ಹೇಳಿದ್ದೇವು; ಇದೀಗ ಫಲಿತಾಂಶ ಅದೇ ರೀತಿ ಬಂದಿದೆ. ಜಿಲ್ಲೆಯ ೭೪ ಗ್ರಾ.ಪಂ ಅಧಿಕಾರ ಹಿಡಿಯವುದು ನಿಶ್ಚಿತ ಎಂದರು. ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ ದರು. ಪಕ್ಷದ ಕೊಡಗು ಉಸ್ತುವಾರಿ ಉದಯ್ಕುಮಾರ್ ೆಟ್ಟಿ, ಜಿ.ಪಂ ಅಧ್ಯಕ್ಷ ಬಿ.ಎ ಹರೀಶ್, ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಭಾರತೀಶ್ ಇದ್ದರು.