ಸೋಮವಾರಪೇಟೆ, ಜ.೧೧: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಕೈಗೊಳ್ಳಲು ಉದ್ದೇಶಿಸಲಾಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ತಾ. ೧೨ರಂದು (ಇಂದು) ತಾಲೂಕಿನ ವಿವಿಧೆಡೆ ನೆರವೇರಿಸಲಿದ್ದಾರೆ.

ಬೆಳಿಗ್ಗೆ ೧೦ ಗಂಟೆಗೆ ಬೇಳೂರು ರಸ್ತೆ ಉದ್ಘಾಟನೆ, ೧೦.೩೦ಕ್ಕೆ ದೊಡ್ಡಮಳ್ತೆ ಗ್ರಾ.ಪಂ. ವ್ಯಾಪ್ತಿಯಲ್ಲಿ ೮ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುವ ಗೆಜ್ಜೆಹಣಕೋಡು ಪ.ಜಾ. ಕಾಲೋನಿಯಿಂದ ದೇವಸ್ಥಾನ ರಸ್ತೆ ಹಾಗೂ ೮.೩೦ಲಕ್ಷ ವೆಚ್ಚದ ಅಂಬೇಡ್ಕರ್ ನಗರದ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.

೧೧.೩೦ಕ್ಕೆ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಸುಳಿಗಳಲೆ ಪ.ಜಾ. ಕಾಲೋನಿಯ ಪಾಪಣ್ಣ ಮಾಸ್ಟುç ಮನೆ ಕಡೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ- ೯ ಲಕ್ಷ, ೧೨ ಗಂಟೆಗೆ ಹಂಡ್ಲಿ ಗ್ರಾ.ಪಂ.ನ ಕಿತ್ತೂರು ಪ.ಜಾ. ಕಾಲೋನಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ೮.೫೦ಲಕ್ಷ, ೧೨.೩೦ಕ್ಕೆ ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯ ಮಲ್ಲಳ್ಳಿ, ಊರುಗುತ್ತಿ, ನಂದಿಪುರ ರಸ್ತೆ ಅಭಿವೃದ್ಧಿ- ೯೯ ಲಕ್ಷ, ರಾಜ್ಯ ಹೆದ್ದಾರಿ ಸಂಪರ್ಕಿಸುವ ನೀರುಗುಂದ-ಬ್ಯಾಡಗೊಟ್ಟ ಗ್ರಾಮದ ಸೋಮವಾರಪೇಟೆ, ಜ.೧೧: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಕೈಗೊಳ್ಳಲು ಉದ್ದೇಶಿಸಲಾಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ತಾ. ೧೨ರಂದು (ಇಂದು) ತಾಲೂಕಿನ ವಿವಿಧೆಡೆ ನೆರವೇರಿಸಲಿದ್ದಾರೆ.

ಬೆಳಿಗ್ಗೆ ೧೦ ಗಂಟೆಗೆ ಬೇಳೂರು ರಸ್ತೆ ಉದ್ಘಾಟನೆ, ೧೦.೩೦ಕ್ಕೆ ದೊಡ್ಡಮಳ್ತೆ ಗ್ರಾ.ಪಂ. ವ್ಯಾಪ್ತಿಯಲ್ಲಿ ೮ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುವ ಗೆಜ್ಜೆಹಣಕೋಡು ಪ.ಜಾ. ಕಾಲೋನಿಯಿಂದ ದೇವಸ್ಥಾನ ರಸ್ತೆ ಹಾಗೂ ೮.೩೦ಲಕ್ಷ ವೆಚ್ಚದ ಅಂಬೇಡ್ಕರ್ ನಗರದ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.

೧೧.೩೦ಕ್ಕೆ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಸುಳಿಗಳಲೆ ಪ.ಜಾ. ಕಾಲೋನಿಯ ಪಾಪಣ್ಣ ಮಾಸ್ಟುç ಮನೆ ಕಡೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ- ೯ ಲಕ್ಷ, ೧೨ ಗಂಟೆಗೆ ಹಂಡ್ಲಿ ಗ್ರಾ.ಪಂ.ನ ಕಿತ್ತೂರು ಪ.ಜಾ. ಕಾಲೋನಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ೮.೫೦ಲಕ್ಷ, ೧೨.೩೦ಕ್ಕೆ ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯ ಮಲ್ಲಳ್ಳಿ, ಊರುಗುತ್ತಿ, ನಂದಿಪುರ ರಸ್ತೆ ಅಭಿವೃದ್ಧಿ- ೯೯ ಲಕ್ಷ, ರಾಜ್ಯ ಹೆದ್ದಾರಿ ಸಂಪರ್ಕಿಸುವ ನೀರುಗುಂದ-ಬ್ಯಾಡಗೊಟ್ಟ ಗ್ರಾಮದ ಅಪರಾಹ್ನ ೩.೩೦ಕ್ಕೆ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮನೆ ಪ.ಜಾ. ಕಾಲೋನಿ ರಸ್ತೆ ಅಭಿವೃದ್ಧಿ-೧೦.೫೦ಲಕ್ಷ, ಚಿಕ್ಕಭಂಡಾರ ಲಿಂಕ್ ರಸ್ತೆ ಕಾಂಕ್ರೀಟೀಕರಣ-೯೮ಲಕ್ಷ, ಕೆಳಕೊಡ್ಲಿ-ಕಾಡುಬಸವೇಶ್ವರ ದೇವಾಲಯ ರಸ್ತೆ ಕಾಂಕ್ರಿಟೀಕರಣ-೯೫ ಲಕ್ಷ, ಕೂರಗಲ್ಲು-ಹೆಮ್ಮನೆ ರಸ್ತೆ ಅಭಿವೃದ್ಧಿ-೯೦ಲಕ್ಷ, ಮಲ್ಲೇಶ್ವರ ದೇವಾಲಯ ಮೂಲಕ ನೀರುಗುಂದ-ಜನಾರ್ಧನಹಳ್ಳಿ ರಸ್ತೆ ಅಭಿವೃದ್ಧಿ ೯೫ ಲಕ್ಷ, ಆಗಳಿ ರಸ್ತೆ ಹಾಗೂ ಬೆಸೂರು-ಚಿಕ್ಕಭಂಡಾರ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ-೯೮ ಲಕ್ಷ, ಬೆಸೂರು ಬಸವೇಶ್ವರ ದೇವಾಲಯ ನಿರ್ಮಾಣ, ಕಾಂಕ್ರೀಟ್ ರಸ್ತೆ ಅಭಿವೃದ್ಧಿ, ತಡೆಗೋಡೆ ನಿರ್ಮಾಣಕ್ಕೆ ೯೫ ಲಕ್ಷ, ಮನುಗನಹಳ್ಳಿ-ಜನಾರ್ಧನ ಹಳ್ಳಿ ರಸ್ತೆ ಅಭಿವೃದ್ಧಿ ೮೬.೫೦ಲಕ್ಷದ ಕಾಮಗಾರಿಗೆ ಚಾಲನೆ ದೊರೆಯಲಿದೆ.

ಸಂಜೆ ೪.೩೦ಕ್ಕೆ ನಿಡ್ತ ಗ್ರಾ.ಪಂ. ವ್ಯಾಪ್ತಿಯ ಮುಳ್ಳೂರು ಕಲ್ಲುಕೋರೆ ಪ.ಪಂ.ಕಾಲೋನಿಯಲ್ಲಿ ಕಾಂಕಿಟ್ ರಸ್ತೆ-೧೪.೨೫, ಸಂಜೆ ೫ ಗಂಟೆಗೆ ಆಲೂರುಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಅಂಕನಳ್ಳಿ ಮುಖ್ಯರಸ್ತೆಯಿಂದ ಪ.ಜಾ. ಕಾಲೋನಿ ಮೂಲಕ ಸೋಮೇಶ್ವರ ದೇವಾಲಯವರೆಗೆ ಕಾಂಕ್ರೀಟ್ ರಸ್ತೆ- ೧೦.೦೫ಲಕ್ಷ, ಅಂಕನಳ್ಳಿಯ ಪ.ಜಾ. ಕಾಲೋನಿಯ ಹೂವಮ್ಮ ಮನೆ ಎದುರು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ-೯.೬೫ಲಕ್ಷ ಬಿಡುಗಡೆಯಾಗಿದ್ದು, ಇಂದು ಕಾಮಗಾರಿಗೆ ರಂಜನ್ ಚಾಲನೆ ನೀಡಲಿದ್ದಾರೆ.

ತಾ. ೧೩ರಂದು (ನಾಳೆ) ಬೆಳಿಗ್ಗೆ ೯.೩೦ಕ್ಕೆ ಮಾದಾಪುರ ಗ್ರಾ.ಪಂ.ವ್ಯಾಪ್ತಿಯ ಇಗ್ಗೋಡ್ಲು ಪ.ಪಂ. ಕಾಲೋನಿಗೆ ರಸ್ತೆ ನಿರ್ಮಾಣ- ೧೮.೫೦ ಲಕ್ಷ, ೧೦ ಗಂಟೆಗೆ ಹರದೂರು ಗ್ರಾ.ಪಂ. ವ್ಯಾಪ್ತಿಯ ಗರಗಂದೂರು ಅಂಬೇಡ್ಕರ್ ಪ.ಜಾ. ಕಾಲೋನಿಗೆ ಕಾಂಕ್ರೀಟ್ ರಸ್ತೆ ೧೦.೦೫ಲಕ್ಷ, ೧೧.೩೦ಕ್ಕೆ ಚೆಟ್ಟಳ್ಳಿ ಗ್ರಾ.ಪಂ.ವ್ಯಾಪ್ತಿಯ ವಾಲ್ನೂರು ಮುಖ್ಯರಸ್ತೆಯಿಂದ ಕೂಡ್ಲೂರುಚೆಟ್ಟಳ್ಳಿ ಪ.ಪಂ. ಕಾಲೋನಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣ-೧೦ಲಕ್ಷ, ೧೨ ಗಂಟೆಗೆ ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಬೆಟ್ಟದಕಾಡು ಪ.ಜಾತಿ ಕಾಲೋನಿಯ ಬಾಬು ಮನೆಯಿಂದ ರಾಜು ಮನೆವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ- ೧೮ಲಕ್ಷ, ಮಧ್ಯಾಹ್ನ ೧ ಗಂಟೆಗೆ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಅಭ್ಯತ್‌ಮಂಗಲ ಪೈಸಾರಿ ಪ.ಜಾ. ಕಾಲೋನಿಯ ಉಮೇಶ್‌ಮನೆಯಿಂದ ಹರೀಶ್ ಮನೆವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ-೧೪ಲಕ್ಷದ ಕಾಮಗಾರಿಗೆ ಶಾಸಕ ರಂಜನ್ ಚಾಲನೆ ನೀಡಲಿದ್ದಾರೆ ಎಂದು ಶಾಸಕರ ಆಪ್ತ ಸಹಾಯಕ ಆರ್.ಡಿ. ರವಿ ತಿಳಿಸಿದ್ದಾರೆ.