ಮಡಿಕೇರಿ, ಜ. ೧೧: ಜಿಲ್ಲೆಯಲ್ಲಿ ತಾ.೧೧ ರಂದು ಹೊಸದಾಗಿ ೧೪ ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ೧,೨೯,೬೫೨ ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, ೫,೮೮೦ ಮಂದಿಗೆ ಸೋಂಕು ತಗುಲಿದೆ. ಈ ಪೈಕಿ ೫,೭೩೯ ಮಂದಿ ಗುಣಮುಖರಾಗಿದ್ದಾರೆ. ಒಟ್ಟು ೮೦ ಮಂದಿ ಸಾವನ್ನಪ್ಪಿದ್ದು ೬೧ ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ ೧೬ ಮಂದಿ ಕೋವಿಡ್ ಆಸ್ಪತ್ರೆಯಲ್ಲಿ , ೪೫ ಮಂದಿ ಹೋಮ್ ಐಸೋಲೇಷನ್ ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ ೪೯ ನಿಯಂತ್ರಿತ ವಲಯಗಳಿವೆ.