ಸುಂಟಿಕೊಪ್ಪ, ಜ. ೧೧: ನಗರದ ಮಾಚಿಮುತ್ತು ಎಂಬವರಿಗೆ ಸೇರಿದ ಎಲೆಕ್ಟಾçನಿಕ್ ವಸ್ತುಗಳ ರಿಪೇರಿ ಅಂಗಡಿ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿಗೆ ಆಹುತಿಯಾಗಿದೆ.

ಅಗ್ನಿ ಅವಘಡದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸ್ಥಳೀಯರು ಎಚ್ಚೆತ್ತು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.