ಹಕ್ಕುಪತ್ರ-ಮನೆ ಪರಭಾರೆ ಮಾಡಿದರೆ ಕ್ರಮ: ಶಾಸಕ ರಂಜನ್

ಸೋಮವಾರಪೇಟೆ, ಜ. ೯: ಸರ್ಕಾರದ ಯೋಜನೆಯಡಿ ಪಡೆದ ಮನೆ ಹಾಗೂ ನಿವೇಶನದ ಹಕ್ಕುಪತ್ರಗಳನ್ನು ಪರಭಾರೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗವುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಎಚ್ಚರಿಕೆ ನೀಡಿದರು.ಸೋಮವಾರಪೇಟೆ, ಜ. ೯: ಸರ್ಕಾರದ ಯೋಜನೆಯಡಿ ಪಡೆದ ಮನೆ ಹಾಗೂ ನಿವೇಶನದ ಹಕ್ಕುಪತ್ರಗಳನ್ನು ಪರಭಾರೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗವುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಎಚ್ಚರಿಕೆ ನೀಡಿದರು.ಪ್ರಾಕೃತಿಕ ವಿಕೋಪದಿಂದ ನಿರಾಶ್ರಿತರಾದವರಿಗೆ ಸರ್ಕಾರದಿಂದಲೇ ಜಾಗ ಗುರುತಿಸಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಈ ಮನೆಗಳನ್ನು ಫಲಾನುಭವಿಗಳು ಬಾಡಿಗೆಗೆ ನೀಡುವುದಾಗಲಿ, ಪರಭಾರೆ ಮಾಡುವುದಾಗಲಿ ಮಾಡಕೂಡದು. ಒಂದು ವೇಳೆ ಅಂತಹ ಪ್ರಕರಣಗಳು ಕಂಡುಬAದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವದು ಎಂದರು.

ಈಗಾಗಲೇ ಬಡಾವಣೆಯ ನಿವಾಸಿಗಳಿಗೆ ಸಚಿವ ಸೋಮಣ್ಣ ಅವರ ಸಮಕ್ಷಮ ಹಕ್ಕುಪತ್ರ ವಿತರಿಸಿದ್ದು, ಉಳಿಕೆಯಾಗಿದ್ದ ೩೯ ಮಂದಿಗೆ ಜಿಲ್ಲಾ ಉಪ ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳ ಪರಿಶೀಲನೆ ನಂತರ ಹಕ್ಕುಪತ್ರ ವಿತರಿಸಲಾಗುತ್ತಿದೆ. ಸರ್ಕಾರವು ತಮ್ಮ ಜೀವನದ ಭದ್ರತೆ ದೃಷ್ಟಿಯಿಂದ ಮನೆಗಳನ್ನು ನೀಡಿದ್ದು, ತಾವುಗಳು ತಮ್ಮ ಕುಟುಂಬದೊAದಿಗೆ ನೆಲೆಸಬೇಕು. ಯಾವದೇ ಕಾರಣಕ್ಕೂ ಪರಭಾರೆ ಮಾಡಬಾರದು ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ತಹಶೀಲ್ದಾರ್ ಗೋವಿಂದ ರಾಜು, ಕಂದಾಯ ಪರಿವೀಕ್ಷಕ ಶಿವಪ್ಪ ಅವರುಗಳು ಉಪಸ್ಥಿತರಿದ್ದರು.