ಮಡಿಕೇರಿ, ಜ. ೯: ಮೈಸೂರಿನಲ್ಲಿ ಮುಡಾದ ಖಾಲಿ ನಿವೇಶನಗಳಿಗೆ ಮೂಲ ದಾಖಲೆಗಳಂತೆಯೇ ಸುಮಾರು ೩೦ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿನಲ್ಲಿ ಭಾರೀ ಮೊತ್ತದ ಸಾಲ ಪಡೆಯಲು ಯತ್ನಿಸುತ್ತಿದ್ದ ವಂಚಕರ ತಂಡವೊAದನ್ನು ಬಂಧಿಸಲಾಗಿದೆ. ವಂಚಕರ ಜಾಲದ ಈ ಪ್ರಯತ್ನವನ್ನು ಬಯಲಿಗೆಳೆದು ಅವರು ಬಂಧನಕ್ಕೆ ಒಳಗಾಗುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಕೊಡಗಿನ ಮೂಲದ ವಕೀಲರಾದ ಬಡುವಂಡ ಸ್ಮಿತಾ ದೇವಯ್ಯ ಅವರಾಗಿದ್ದು, ಇವರಿಗೆ ಇದೀಗ ಮುಡಾ ಸೇರಿದಂತೆ ವಿವಿಧೆಡೆಗಳಿಂದ ಮಡಿಕೇರಿ, ಜ. ೯: ಮೈಸೂರಿನಲ್ಲಿ ಮುಡಾದ ಖಾಲಿ ನಿವೇಶನಗಳಿಗೆ ಮೂಲ ದಾಖಲೆಗಳಂತೆಯೇ ಸುಮಾರು ೩೦ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿನಲ್ಲಿ ಭಾರೀ ಮೊತ್ತದ ಸಾಲ ಪಡೆಯಲು ಯತ್ನಿಸುತ್ತಿದ್ದ ವಂಚಕರ ತಂಡವೊAದನ್ನು ಬಂಧಿಸಲಾಗಿದೆ. ವಂಚಕರ ಜಾಲದ ಈ ಪ್ರಯತ್ನವನ್ನು ಬಯಲಿಗೆಳೆದು ಅವರು ಬಂಧನಕ್ಕೆ ಒಳಗಾಗುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಕೊಡಗಿನ ಮೂಲದ ವಕೀಲರಾದ ಬಡುವಂಡ ಸ್ಮಿತಾ ದೇವಯ್ಯ ಅವರಾಗಿದ್ದು, ಇವರಿಗೆ ಇದೀಗ ಮುಡಾ ಸೇರಿದಂತೆ ವಿವಿಧೆಡೆಗಳಿಂದ ಸೇರಿದಂತೆ ಹಲವರು ಅಭಿನಂದಿಸಿ ಗೌರವಿಸಿದ್ದಾರೆ.

ಅಲ್ಲಿನ ಯಾದಗಿರಿ ಲೇಔಟ್‌ನಲ್ಲಿದ್ದ ಮುಡಾ ಸೈಟ್‌ನ ಸಿಐಬಿಟಿಯ ಮಂಜೂರಾತಿ ನಕಲಿ ದಾಖಲೆ ಸೃಷ್ಟಿಸಿ ಎಸ್.ಬಿ.ಐ. ಬ್ಯಾಂಕ್ ಮೂಲಕ ರೂ. ೬ ಕೋಟಿ ಸಾಲ ಪಡೆಯುವ ಯತ್ನ ನಡೆದಿತ್ತು. ಈ ಬಗ್ಗೆ ಎಸ್.ಬಿ.ಐ. ಪ್ಯಾನಲ್ ವಕೀಲೆಯಾಗಿರುವ ಸ್ಮಿತಾ ದೇವಯ್ಯ ಅವರು ದಾಖಲೆ ಪರಿಶೀಲನೆ ನಡೆಸಿದ ವೇಳೆ ಇದು ಅರಿವಾಗಿದ್ದು, ಈ ಬಗ್ಗೆ ಅವರು ಮುಡಾ ಅಧ್ಯಕ್ಷ ರಾಜೀವ್ ಮತ್ತು ಆಯುಕ್ತರಿಗೆ ಮಾಹಿತಿ ನೀಡಿದ್ದು, ಇದರಂತೆ ನಡೆದ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳು ತಾ. ೭ರಂದು ಸಿಕ್ಕಿಬಿದ್ದಿದ್ದಾರೆ.

ಯಾದಗಿರಿ ಬಡಾವಣೆಯಲ್ಲಿ ೮೦x೧೦೦ ಅಡಿ ಉದ್ದಗಲದ ನಿವೇಶನದ ಮೇಲೆ ಎಸ್.ಬಿ.ಐ.ನಿಂದ ರೂ. ೬ ಕೋಟಿ ಸಾಲ ಪಡೆಯಲು ಯತ್ನ ನಡೆಸಿದ್ದ ವ್ಯಕ್ತಿಗಳು ಸ್ಮಿತಾ ದೇವಯ್ಯ ಅವರನ್ನು ಭೇಟಿ ಮಾಡಿ ದಾಖಲೆಪತ್ರ ನೀಡಿದ್ದಾರೆ. ಆದರೆ ಈ ಪತ್ರಗಳ ನೈಜತೆ ಕುರಿತು ಅವರು ಅನುಮಾನಗೊಂಡಿದ್ದರು. ಇದರ ಸತ್ಯಾಸತ್ಯತೆ ಅರಿಯಲು ಅವರು ಮೈಸೂರು ದಕ್ಷಿಣ ಉಪನೋಂದಣಾಧಿಕಾರಿ ಕಚೇರಿಗೆ ತೆರಳಿ ಪರಿಶೀಲಿಸಿದ್ದು, ದಾಖಲೆ ನಕಲಿ ಎಂಬುದು ತಿಳಿದುಬಂದಿತ್ತು. ಈ ಬಗ್ಗೆ ಅವರು ನೀಡಿದ ಮಾಹಿತಿಯಂತೆ ಮುಡಾ ಮೂಲಕ ಪೊಲೀಸರಿಗೂ ಮಾಹಿತಿ ನೀಡಿ ವಂಚಕರನ್ನು ಬಂಧಿಸಲಾಗಿದೆ. ಬಡುವಂಡ ಸ್ಮಿತಾ ದೇವಯ್ಯ (ತಾಮನೆ - ಬಲ್ಲಚಂಡ) ಅವರು ಮೂಲತಃ ಜಿಲ್ಲೆಯ ಮಾಲ್ದಾರೆಯವರಾಗಿದ್ದಾರೆ.

ಹಲವು ವರ್ಷಗಳ ಹಿಂದೆ ನಿವೇಶನ ಮಂಜೂರಾಗಿ ಖಾಲಿ ಬಿಟ್ಟಿದ್ದರೆ ಈ ಬಗ್ಗೆ ಎಚ್ಚರದಿಂದಿರುವAತೆ ಮುಡಾ ಅಧ್ಯಕ್ಷ ರಾಜೀವ್ ಜನತೆಗೆ ಎಚ್ಚರಿಸಿದ್ದಾರೆ. ಈ ಜಾಲದ ಬಗ್ಗೆ ಬೆಳಕು ಚೆಲ್ಲಿದ ಸ್ಮಿತಾ ಅವರಿಗೆ ಇದೀಗ ಭಾರೀ ಪ್ರಶಂಸೆ ಮೈಸೂರಿನಲ್ಲಿ ವ್ಯಕ್ತವಾಗುತ್ತಿದೆ.