ತಾ. ೧೬ ರಿಂದ ದೇಶದಲ್ಲಿ ಕೊರೊನಾ ಲಸಿಕೆ ನೀಡಿಕೆ ನವದೆಹಲಿ, ಜ. ೯: ಭಾರತ ಮಹಾಮಾರಿ ಕೊರೊನಾ ವೈರಸ್‌ಗೆ ದೇಶಿಯವಾಗಿ ಎರಡು ಕೊರೊನಾ ಲಸಿಕೆ ತಯಾರಿಕೆ ಮಾಡಿದ್ದು, ತಾ. ೧೬ ರಿಂದ ದೇಶಾದ್ಯಂತ ವ್ಯಾಕ್ಸಿನೇಷನ್ ಡ್ರೆöÊವ್ (ಲಸಿಕೆ ಹಾಕುವುದು) ಆರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ವೈರಸ್ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಆರೋಗ್ಯ ಸಚಿವಾಲಯ ಈ ಪ್ರಕಟಣೆ ನೀಡಿದ್ದು, ಮೊದಲು ಸುಮಾರು ೩ ಕೋಟಿ ಮುಂಚೂಣಿ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದೆ. ನಂತರ ೫೦ ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹಾಗೂ ೫೦ ವರ್ಷದೊಳಗಿನ ಸುಮಾರು ೨೭ ಕೋಟಿ ಜನರಿಗೆ ಕೋವಿಡ್-೧೯ ಲಸಿಕೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಪೂರ್ವ ಲಡಾಕ್‌ನಲ್ಲಿ ಚೀನಾ ಸೈನಿಕನನ್ನು ಸೆರೆ ಹಿಡಿದ ಭಾರತೀಯ ಸೇನೆನವದೆಹಲಿ, ಜ. ೯: ತಾ. ೮ ರಂದು ಪೂರ್ವ ಲಡಾಖ್‌ನ ಪಾಂಗೊAಗ್ ಸರೋವರದ ದಕ್ಷಿಣ ಭಾಗದಲ್ಲಿ ಚೀನಾದ ಸೈನಿಕನನ್ನು ಭಾರತೀಯ ಸೈನಿಕರು ಬಂಧಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಭಾರತದ ಭಾಗಕ್ಕೆ ಅತಿಕ್ರಮಣ ಮಾಡಿದ್ದ ಪೀಪಲ್ಸ್ ಲಿಬರೇಶನ್ ಆರ್ಮಿ ಸೈನಿಕನನ್ನು ಆ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಭಾರತೀಯ ಸೈನಿಕರು ವಶಕ್ಕೆ ತೆಗೆದುಕೊಂಡಿದ್ದಾರೆ. ಭಾರತ ಮತ್ತು ಚೀನಾ ನಡುವೆ ಸುಮಾರು ಎಂಟು ತಿಂಗಳ ಕಾಲ ನಡೆದ ಗಡಿ ಸಂಘರ್ಷದ ಬೆನ್ನಲ್ಲೇ ಚೀನಾ ಸೈನಿಕನನ್ನು ಸೆರೆ ಹಿಡಿಯಲಾಗಿದೆ. ಎಲ್‌ಎಸಿ ದಾಟಿ ಬಂದ ಚೀನಾ ಸೈನಿಕನ ವಿರುದ್ಧ ಕಾರ್ಯವಿಧಾನಗಳು ಮತ್ತು ಸನ್ನಿವೇಶಗಳ ಪ್ರಕಾರ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಭಾರತದೊಂದಿಗಿನ ಸುದೀರ್ಘ ಲಡಾಖ್ ಸಂಘರ್ಷದಲ್ಲಿ ನಿರತವಾಗಿರುವ ಚೀನಾ, ಗಡಿಯಿಂದ ಇನ್ನೂ ಕಾಲ್ಕಿಳಲು ಸಿದ್ಧವಿಲ್ಲ. ಲಡಾಖ್‌ನ ಪೂರ್ವ ಗಡಿಯಲ್ಲಿ ಇನ್ನೂ ಚೀನಿ ಸೈನಿಕರು ಭಾರೀ ಸಂಖ್ಯೆಯಲ್ಲಿ ಬೀಡು ಬಿಟ್ಟಿದ್ದಾರೆ ಎಂಬುದು ಈಗ ಮತ್ತೊಮ್ಮೆ ಸಾಭೀತಾಗಿದೆ.

೬೨ ಪ್ರಯಾಣಿಕರಿದ್ದ ಇಂಡೋನೇಷ್ಯಾ ವಿಮಾನ ನಾಪತ್ತೆ

ಜಕಾರ್ತ, ಜ. ೯: ಜಕಾರ್ತನಿಂದ ಟೇಕ್‌ಆಫ್ ಆದ ಇಂಡೋನೇಷ್ಯಾದ ದೇಶಿಯ ವಿಮಾನವೊಂದು ನಾಪತ್ತೆಯಾಗಿದ್ದು, ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಡಿದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೋಯಿಂಗ್ ೭೩೭-೫೦೦ ವಿಮಾನವು ಜಕಾರ್ತಾದಿಂದ ಮಧ್ಯಾಹ್ನ ೧.೫೬ಕ್ಕೆ ಟೇಕ್‌ಆಫ್ ಆಯಿತು ಮತ್ತು ಮಧ್ಯಾಹ್ನ ೨.೪೦ಕ್ಕೆ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿತು ಎಂದು ಇಂಡೋನೇಷ್ಯಾದ ಸಾರಿಗೆ ಸಚಿವಾಲಯದ ವಕ್ತಾರ ಅದಿತಾ ಐರಾವತಿ ಅವರು ಹೇಳಿದ್ದಾರೆ. ವಿಮಾನ ಸುಮಾರು ೧೦೦೦೦ ಅಡಿ ಮೇಲೆ ಹಾರುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ರಡಾರ್‌ನೊಂದಿಗೆ ಸಂಪರ್ಕ ಕಡಿದುಕೊಂಡಿದೆ. ನಾಪತ್ತೆಯಾದ ವಿಮಾನದಲ್ಲಿ ಸುಮಾರು ೬೨ ಪ್ರಯಾಣಿಕರಿದ್ದು, ಜಕಾರ್ತದಿಂದ ಟೇಕ್‌ಆಫ್ ಆಗಿದ್ದ ವಿಮಾನ ಪಶ್ಚಿಮ ಕಲಿಮಾಂಟನ್‌ನ ಪೊಂಟಿಯಾನನಕ್‌ನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ರಡಾರ್‌ನಿಂದ ಸಂಪರ್ಕ ಕಡಿದುಕೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ರಾಷ್ಟಿçÃಯ ಶೋಧ ಮತ್ತು ರಕ್ಷಣಾ ಸಂಸ್ಥೆ ಹಾಗೂ ರಾಷ್ಟಿçÃಯ ಸಾರಿಗೆ ಸುರಕ್ಷತಾ ಸಮಿತಿಯ ಸಹಕಾರದೊಂದಿಗೆ ನಾಪತ್ತೆಯಾದ ವಿಮಾನ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಐರಾವತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವರಾಜ್‌ಗೆ ಹಣ ನೀಡಿದ ನಿವೃತ್ತ ನ್ಯಾಯಾಧೀಶೆ

ಬೆಂಗಳೂರು, ಜ. ೯: ಗವರ್ನರ್ ಆಗಲು ಬಯಸಿದ್ದ ನಿವೃತ್ತ ನ್ಯಾಯಾಧೀಶೆಯೊಬ್ಬರು ಬರೋಬ್ಬರಿ ೮.೮ ಕೋಟಿ ರೂಪಾಯಿಯನ್ನು ಯುವರಾಜ್ ಸ್ವಾಮಿಗೆ ನೀಡಿದ್ದರು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿಸಿಬಿಯ ಸಹಾಯಕ ಪೊಲೀಸ್ ಆಯುಕ್ತ ಹೆಚ್.ಎಂ. ನಾಗರಾಜ್, ಯುವರಾಜ್‌ಗೆ ತಾವು ಹಣ ನೀಡಿರುವುದಾಗಿ ಡಿಸೆಂಬರ್ ೨೧ ರಂದು ನಿವೃತ್ತ ಮಹಿಳಾ ನ್ಯಾಯಾಧೀಶರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಎಂದು ತಿಳಿಸಿದ್ದಾರೆ. ಈ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದ್ದು, ತನಿಖೆ ವೇಳೆ ಸ್ವಾಮಿ ತನ್ನಿಂದ ರೂ. ೮.೮ ಕೋಟಿ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ಸಾಕಷ್ಟು ಸಂಪರ್ಕ ಹೊಂದಿದ್ದರಿAದ ಆಕೆಯನ್ನು ರಾಜ್ಯಪಾಲರನ್ನಾಗಿ ನೇಮಿಸಲು ಸಹಾಯ ಮಾಡುವುದಾಗಿ ಸ್ವಾಮಿ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆತನನ್ನು ನಂಬಿ ಹಲವು ಕಂತುಗಳಲ್ಲಿ ಹಣ ನೀಡಿರುವುದಾಗಿ ನ್ಯಾಯಧೀಶೆ ಸಿಸಿಬಿ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ನಾಗರಬಾವಿ ನಿವಾಸಿ ೫೨ ವರ್ಷದ ಯುವರಾಜ್ ಸ್ವಾಮಿ ಜ್ಯೋತಿಷಿ ಮತ್ತು ವಾಸ್ತು ತಜ್ಞ

ಎಂದು ಹೇಳಿಕೊಂಡಿದ್ದು, ಅನೇಕ ಕನ್ನಡ ಚಲನಚಿತ್ರ ನಟರು ಮತ್ತು ಹಿರಿಯ ರಾಜಕಾರಣಿಗಳೊಂದಿಗೆ ಸಂಬAಧ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಬಸ್ ಅಡ್ಡಗಟ್ಟಿದ ಸಚಿವರು

ತುಮಕೂರು, ಜ. ೯: ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ತೆರಳುತ್ತಿದ್ದ ಸರಕಾರಿ ಬಸ್‌ಅನ್ನು ಅಡ್ಡಗಟ್ಟಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐ.ಕೆ. ಕಾಲೋನಿಯ ರಾಜ್ಯ ಹೆದ್ದಾರಿಯಲ್ಲಿಯೇ ಬಸ್ಸನ್ನು ಅಡ್ಡಗಟ್ಟಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ವಿದ್ಯಾರ್ಥಿಗಳನ್ನು ಬಿಟ್ಟು ಹೋದ ಚಾಲಕ ಮತ್ತು ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಲಾ ವಿದ್ಯಾರ್ಥಿಗಳು ಕೈ ನೀಡಿ ಸ್ಟಾಪ್ ಕೇಳಿದರೂ ಸಹ ಬಸ್ ಚಾಲಕ ಬಸ್ ನಿಲ್ಲಿಸದೇ ಹಾಗೆಯೇ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಅದೇ ಮಾರ್ಗವಾಗಿ ಬೆಂಗಳೂರಿನಿAದ ಮಧುಗಿರಿ ಕಡೆ ಬರುತ್ತಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡಲೇ ಬಸ್ ನಿಲ್ಲಿಸಿದ್ದಾರೆ. ನಂತರ ಕೆಎಸ್‌ಆರ್‌ಟಿಸಿ ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡು ಕಡ್ಡಾಯವಾಗಿ ವಿದ್ಯಾರ್ಥಿಗಳಿಗೆ ಬಸ್ ಸ್ಟಾಪ್ ನೀಡಲು ಸೂಚಿಸಿದರು.

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಚಿವ ಸುಧಾಕರ್ ಭೇಟಿ

ಬೆಂಗಳೂರು, ಜ. ೯: ನಾಳೆ ಬೆಳಿಗ್ಗೆ ೪ ಗಂಟೆಗೆ ಯುಕೆ ಇಂದ ಮೊದಲ ವಿಮಾನ ಬರಲಿದೆ. ಬಹಳ ದಿನಗಳ ನಂತರ ವಿಮಾನ ಆರಂಭವಾಗಿರುವುದರಿAದ ಪ್ರತೀ ವಿಮಾನದಲ್ಲಿ ೩೦೦-೩೫೦ ಪ್ರಯಾಣಿಕರು ಭರ್ತಿಯಾಗಿ ಬರಲಿದ್ದಾರೆ ಎಂದು ಏರ್ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯುಕೆನಿಂದ ಬರುವ ಪ್ರಯಾಣಿಕರು ನೆಗಟಿವ್ ರಿಪೋರ್ಟ್ ತಂದಿದ್ದರೂ ಇಲ್ಲಿ ಪರೀಕ್ಷೆ ಕಡ್ಡಾಯ ಎಂದು ಮಾರ್ಗಸೂಚಿ ಹೊರಡಿಸಲಾಗಿದೆ. ಅವರಿಗೆ ವಿಮಾನ ನಿಲ್ದಾಣದಲ್ಲೇ ಪರೀಕ್ಷೆ ಮಾಡಲಾಗುವುದು. ನೆಗಟಿವ್ ವರದಿ ಬಂದ ನಂತರವೇ ಅವರನ್ನು ಬಿಡಲಾಗುವುದು. ಬೇರೆ ದೇಶಗಳಿಂದ ಬಂದವರಿಗೆ ೭೨ ಗಂಟೆಗಳ ಅಂತರದಲ್ಲಿ ನೆಗಟಿವ್ ರಿಪೋರ್ಟ್ ಇರಬೇಕು. ಇಲ್ಲದಿದ್ದರೆ ಅವರನ್ನು ಪರೀಕ್ಷೆಗೊಳಪಡಿಸಲಾಗುವುದು. ಆರೋಗ್ಯ ಇಲಾಖೆ ಸಹಯೋಗದಲ್ಲಿ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ವ್ಯವಸ್ಥೆ ಮಾಡಲಾಗಿದೆ. ಏರ್‌ಪೋರ್ಟ್ ಸಿಬ್ಬಂದಿ ಸಹ ಸಹಕಾರ ನೀಡಿದ್ದಾರೆ. ಪಾಸಿಟಿವ್ ವರದಿ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು.