ನದಿ ತಟಗಳ ಒತ್ತುವರಿಯೊಂದಿಗೆ ತೀರಗಳಲ್ಲಿ ಅವ್ಯಾಹತ ಮರಗಳ ಹನನ, ಅಕ್ರಮ ಮರಳುಗಾರಿಕೆ, ಗ್ರಾಮ, ಹಳ್ಳಿಗಳು ಸೇರಿದಂತೆ ಪಟ್ಟಣಗಳ ಕಲುಷಿತ ತ್ಯಾಜ್ಯಗಳು ನೇರವಾಗಿ ನದಿಯ ಒಡಲು ಸೇರುವುದು, ನದಿ ತಟದ ಪ್ರವಾಸಿ ತಾಣಗಳಿಂದ ಪ್ಲಾಸ್ಟಿಕ್ ಕಲ್ಮಶ ಇದು ಜೀವನದಿ ಕಾವೇರಿ ಸಂಪೂರ್ಣ ಕಲುಷಿತಗೊಂಡು ಹರಿಯುವ ಪ್ರಸಕ್ತ ಪರಿಸ್ಥಿತಿ. ೨೦೧೬ ರಲ್ಲಿ ಕಾವೇರಿ ನದಿ ಬಚಾವೋ ಆಂದೋಲನದ ಅಂಗವಾಗಿ ತಲಕಾವೇರಿಯಿಂದ ಚಾಲನೆಗೊಂಡು ತಮಿಳುನಾಡು ಪೂಂಪ್‌ಹಾರ್‌ನಲ್ಲಿ ಅಂತ್ಯಗೊAಡ ಸಾಧು ಸಂತರ ಪಾದಯಾತ್ರೆ ತಂಡಕ್ಕೆ ಕಂಡುಬAದ ನೈಜ ಚಿತ್ರಣ ಇದಾಗಿದೆ. ಕಾವೇರಿ ನದಿ ತಟದ ಜನತೆಯಲ್ಲಿ ಅರಿವಿನ ಕೊರತೆಯಿಂದ ಒಂದಲ್ಲ ಒಂದು ರೀತಿಯಲ್ಲಿ ಕಾವೇರಿ ಕಂಟಕದೊAದಿಗೆ ಹರಿಯುವ ದುಸ್ಥಿತಿಗೆ ಒಳಗಾಗಿದ್ದಾಳೆ ಎನ್ನುವುದು ವಾಸ್ತವ ಅಂಶವಾಗಿದೆ. ಮೂಲ ಕಾವೇರಿಯ ಸ್ಥಾನದಲ್ಲಿಯೇ ಸಮಸ್ಯೆಗೆ ಒಳಗಾಗುತ್ತಿರುವ ಜೀವಜಲ ಮಾನವನ ಸ್ವಾರ್ಥಕ್ಕೆ ಒಳಗಾಗಿ ಅತಿಯಾಗಿ ಕಲುಷಿತಗೊಳ್ಳುವುದರೊಂದಿಗೆ ಮಾಲಿನ್ಯ ಸೇರ್ಪಡೆಗೊಂಡು ಹರಿಯುವ ಸ್ಥಿತಿಗೆ ಕಾರಣವಾಗುತ್ತಿದೆ. ತಲಕಾವೇರಿಯಲ್ಲಿ ಭಕ್ತಾದಿಗಳು ತೀರ್ಥವಾಗಿ ಸೇವಿಸುವ ಸ್ಥಿತಿಯಲ್ಲಿರುವ ಜೀವನದಿ ಕಾವೇರಿ ನಂತರ ತನ್ನ ಹರಿಯುವ ಜಾಗಗಳಲ್ಲಿ ಮಾತ್ರ ಬಳಕೆಗೆ ಯೋಗ್ಯವಾಗಿಲ್ಲದಿರುವುದು ನಿಜಕ್ಕೂ ಆತಂಕದ ಸಂಗತಿ. ಈ ಮೂಲಕ ಶುದ್ಧವಾಗಿ ಹರಿಯುವ ಕಾವೇರಿ ತನ್ನ ಒಡಲಲ್ಲಿ ಕಲುಷಿಕೆಯೊಂದಿಗೆ ಬಹುತೇಕ ಜಲಚರಗಳು ನಶಿಸುವುದರೊಂದಿಗೆ ಶತಶತಮಾನಗಳ ಕಾಲ ದಿಂದಲೂ ತನ್ನ ಪಾವಿತ್ರö್ಯತೆಗೆ ಹೆಸರಾದ ನದಿ ಇತ್ತೀಚಿನ ದಿನಗಳಲ್ಲಿ ಮಲಿನಗೊಳ್ಳುತ್ತಿದೆ.

ದಕ್ಷಿಣ ಭಾರತದ ಕೋಟ್ಯಾಂತರ ಜನ ಜಾನುವಾರುಗಳಿಗೆ ಜೀವಜಲವಾಗಿರುವ ಕಾವೇರಿ ನದಿ, ಸಂಸ್ಕೃತಿಯ ಉಗಮಸ್ಥಾನ ವಾಗುವುದರೊಂದಿಗೆ ದೇವತೆಯ ಸ್ಥಾನ ಪಡೆದು ಪೂಜಿಸಲ್ಪಡುವ ನದಿಗಳಲ್ಲಿ ಒಂದಾಗಿದೆ. ಅರಣ್ಯನಾಶ ಹಾಗೂ ಹವಾಮಾನ ವೈಪರಿತ್ಯದಿಂದ ಒಂದೆಡೆ ಧರೆಯಲ್ಲಿ ಏರುಪೇರು ಉಂಟಾದರೆ ಇನ್ನೊಂದೆಡೆ ಅಭಿವೃದ್ಧಿ ಹಾಗೂ ನದಿ ತಟಗಳ ಒತ್ತುವರಿಯೊಂದಿಗೆ ತೀರಗಳಲ್ಲಿ ಅವ್ಯಾಹತ ಮರಗಳ ಹನನ, ಅಕ್ರಮ ಮರಳುಗಾರಿಕೆ, ಗ್ರಾಮ, ಹಳ್ಳಿಗಳು ಸೇರಿದಂತೆ ಪಟ್ಟಣಗಳ ಕಲುಷಿತ ತ್ಯಾಜ್ಯಗಳು ನೇರವಾಗಿ ನದಿಯ ಒಡಲು ಸೇರುವುದು, ನದಿ ತಟದ ಪ್ರವಾಸಿ ತಾಣಗಳಿಂದ ಪ್ಲಾಸ್ಟಿಕ್ ಕಲ್ಮಶ ಇದು ಜೀವನದಿ ಕಾವೇರಿ ಸಂಪೂರ್ಣ ಕಲುಷಿತಗೊಂಡು ಹರಿಯುವ ಪ್ರಸಕ್ತ ಪರಿಸ್ಥಿತಿ. ೨೦೧೬ ರಲ್ಲಿ ಕಾವೇರಿ ನದಿ ಬಚಾವೋ ಆಂದೋಲನದ ಅಂಗವಾಗಿ ತಲಕಾವೇರಿಯಿಂದ ಚಾಲನೆಗೊಂಡು ತಮಿಳುನಾಡು ಪೂಂಪ್‌ಹಾರ್‌ನಲ್ಲಿ ಅಂತ್ಯಗೊAಡ ಸಾಧು ಸಂತರ ಪಾದಯಾತ್ರೆ ತಂಡಕ್ಕೆ ಕಂಡುಬAದ ನೈಜ ಚಿತ್ರಣ ಇದಾಗಿದೆ. ಕಾವೇರಿ ನದಿ ತಟದ ಜನತೆಯಲ್ಲಿ ಅರಿವಿನ ಕೊರತೆಯಿಂದ ಒಂದಲ್ಲ ಒಂದು ರೀತಿಯಲ್ಲಿ ಕಾವೇರಿ ಕಂಟಕದೊAದಿಗೆ ಹರಿಯುವ ದುಸ್ಥಿತಿಗೆ ಒಳಗಾಗಿದ್ದಾಳೆ ಎನ್ನುವುದು ವಾಸ್ತವ ಅಂಶವಾಗಿದೆ. ಮೂಲ ಕಾವೇರಿಯ ಸ್ಥಾನದಲ್ಲಿಯೇ ಸಮಸ್ಯೆಗೆ ಒಳಗಾಗುತ್ತಿರುವ ಜೀವಜಲ ಮಾನವನ ಸ್ವಾರ್ಥಕ್ಕೆ ಒಳಗಾಗಿ ಅತಿಯಾಗಿ ಕಲುಷಿತಗೊಳ್ಳುವುದರೊಂದಿಗೆ ಮಾಲಿನ್ಯ ಸೇರ್ಪಡೆಗೊಂಡು ಹರಿಯುವ ಸ್ಥಿತಿಗೆ ಕಾರಣವಾಗುತ್ತಿದೆ. ತಲಕಾವೇರಿಯಲ್ಲಿ ಭಕ್ತಾದಿಗಳು ತೀರ್ಥವಾಗಿ ಸೇವಿಸುವ ಸ್ಥಿತಿಯಲ್ಲಿರುವ ಜೀವನದಿ ಕಾವೇರಿ ನಂತರ ತನ್ನ ಹರಿಯುವ ಜಾಗಗಳಲ್ಲಿ ಮಾತ್ರ ಬಳಕೆಗೆ ಯೋಗ್ಯವಾಗಿಲ್ಲದಿರುವುದು ನಿಜಕ್ಕೂ ಆತಂಕದ ಸಂಗತಿ. ಈ ಮೂಲಕ ಶುದ್ಧವಾಗಿ ಹರಿಯುವ ಕಾವೇರಿ ತನ್ನ ಒಡಲಲ್ಲಿ ಕಲುಷಿಕೆಯೊಂದಿಗೆ ಬಹುತೇಕ ಜಲಚರಗಳು ನಶಿಸುವುದರೊಂದಿಗೆ ಶತಶತಮಾನಗಳ ಕಾಲ ದಿಂದಲೂ ತನ್ನ ಪಾವಿತ್ರö್ಯತೆಗೆ ಹೆಸರಾದ ನದಿ ಇತ್ತೀಚಿನ ದಿನಗಳಲ್ಲಿ ಮಲಿನಗೊಳ್ಳುತ್ತಿದೆ.

ದಕ್ಷಿಣ ಭಾರತದ ಕೋಟ್ಯಾಂತರ ಜನ ಜಾನುವಾರುಗಳಿಗೆ ಜೀವಜಲವಾಗಿರುವ ಕಾವೇರಿ ನದಿ, ಸಂಸ್ಕೃತಿಯ ಉಗಮಸ್ಥಾನ ವಾಗುವುದರೊಂದಿಗೆ ದೇವತೆಯ ಸ್ಥಾನ ಪಡೆದು ಪೂಜಿಸಲ್ಪಡುವ ನದಿಗಳಲ್ಲಿ ಒಂದಾಗಿದೆ. ಅರಣ್ಯನಾಶ ಹಾಗೂ ಹವಾಮಾನ ವೈಪರಿತ್ಯದಿಂದ ಒಂದೆಡೆ ಧರೆಯಲ್ಲಿ ಏರುಪೇರು ಉಂಟಾದರೆ ಇನ್ನೊಂದೆಡೆ ಅಭಿವೃದ್ಧಿ ಹಾಗೂ ೨೪ ಪಂಚಾಯ್ತಿಯಲ್ಲಿಯೂ ನಿರ್ಲಕ್ಷö್ಯ

ಮೂಲ ಕಾವೇರಿಯಿಂದ ೨೪ ಪಂಚಾಯ್ತಿ ದಾಟಿ ಜಿಲ್ಲೆಯ ಗಡಿ ಶಿರಂಗಾಲ ತನಕ ಎಲ್ಲಿ ನೋಡಿದರೂ ನದಿಯ ಬಗ್ಗೆ ಯಾರೂ ಗಮನಹರಿಸಿ ದಂತಿಲ್ಲ. ಪ್ರಮುಖವಾಗಿ ಭಾಗಮಂಡಲ, ಚೇರಂಬಾಣೆ, ನಾಪೋಕ್ಲು, ನೆಲ್ಲಿಹುದಿಕೇರಿ, ದುಬಾರೆ, ಕುಶಾಲನಗರ ವ್ಯಾಪ್ತಿಯಲ್ಲಿ ಅತಿಯಾದ ಕಲುಷಿತ ತ್ಯಾಜ್ಯಗಳು ನದಿ ಒಡಲನ್ನು ಸೇರುವುದರೊಂದಿಗೆ ನದಿ ನೀರಿನ ಗುಣಮಟ್ಟ ವಿಷಕಾರಿಯಾಗುವುದು ಗಮನಾರ್ಹ ಅಂಶವಾಗಿದೆ. ಇನ್ನುಳಿದಂತೆ ಎಲ್ಲಾ ಗ್ರಾಮಗಳ ತ್ಯಾಜ್ಯಗಳು ನೇರವಾಗಿ ನದಿಗೆ ಹರಿಯುತ್ತಿರುವ ದೃಶ್ಯ ಗೋಚರಿಸುತ್ತಿದೆ. ಕೊಟ್ಟಮುಡಿ, ನೆಲ್ಲಿಹುದಿಕೇರಿ, ಕುಶಾಲನಗರ, ಕೂಡಿಗೆ ವ್ಯಾಪ್ತಿಯಲ್ಲಿ ಮಾಂಸದ ತ್ಯಾಜ್ಯಗಳನ್ನು ನೇರವಾಗಿ ನದಿಗೆ ಹರಿಸುವ ದೃಶ್ಯ ನಿರಂತರವಾಗಿ ನಡೆದು ಬರುತ್ತ್ತಿದೆ. ಬಲಮುರಿ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ ನದಿಯ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ನೀಡುತ್ತಿದೆ.

ನಾಪೋಕ್ಲು ಸಮೀಪ ಕೊಟ್ಟಮುಡಿ ನದಿ ಸೇತುವೆಯಿಂದ ಸಂಪೂರ್ಣ ತ್ಯಾಜ್ಯಗಳನ್ನು ನದಿ ಒಡಲಿಗೆ ಸುರಿಯುವುದು ಸಾಮಾನ್ಯ ವಿಷಯವಾಗಿದೆ. ಈ ಬಗ್ಗೆ ಯಾರೂ ಕೂಡ ತಲೆಕಡಿಸಿಕೊಳ್ಳುತ್ತಿಲ್ಲ ಎನ್ನುವ ದೂರು ಕಳೆದ ಹಲವು ವರ್ಷಗಳಿಂದ ಕೇಳಿಬಂದಿದ್ದರೂ ಈ ಬಗ್ಗೆ ಜಿಲ್ಲಾಡಳಿತ ಕನಿಷ್ಟ ಕಾಳಜಿ ತೋರಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.

ಮೂಲ ಕಾವೇರಿಯಿಂದಲೇ ನದಿ ತಟಗಳು ಸಂಪೂರ್ಣ ಪ್ರದೇಶ ಪ್ರವಾಸಿ ಕೇಂದ್ರವಾಗಿ ಪರಿವರ್ತನೆಯಾದಂತೆ ಕಂಡುಬರುತ್ತಿದ್ದು ತಲಕಾವೇರಿಯಿಂದ ಭಾಗಮಂಡಲ ರಸ್ತೆಯುದ್ದಕ್ಕೂ ಅಡಿಗಡಿಗೆ ಪ್ಲಾಸ್ಟಿಕ್ ಬಾಟಲಿಗಳು ರಾರಾಜಿಸುತ್ತಿರುವುದು ನಿಜಕ್ಕೂ ದುರಂತ ಎನ್ನಬಹುದು. ಇಲ್ಲಿನ ಗ್ರಾಮ ಪಂಚಾಯ್ತಿ ಈ ಬಗ್ಗೆ ಎಷ್ಟೇ ಎಚ್ಚರವಹಿಸಿದರೂ ಶಾಶ್ವತ ಪರಿಹಾರ ಕಾಣಲು ಅಸಾಧ್ಯವಾಗಿದೆ ಎನ್ನುವುದು ಭಾಗಮಂಡಲ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಅಳಲಾಗಿದೆ. ಭಾಗಮಂಡಲದಿAದ ಮುಂದೆ ಹರಿಯುವ ಕಾವೇರಿ ತಟದ ಜನತೆಯ ಗೋಳು ಇನ್ನೊಂದು ರೀತಿಯದ್ದಾಗಿದೆ. ನದಿಯ ಅಗಲ ಕಿರಿದಾಗುವುದರೊಂದಿಗೆ ನೀರಿನ ಪ್ರಮಾಣ ಅಧಿಕಗೊಂಡು ಗ್ರಾಮ ಸಂಪೂರ್ಣ ಜಲಮಯವಾಗುವುದು ಸಾಮಾನ್ಯ. ಈ ನಡುವೆ ಅಯ್ಯಂಗೇರಿ ಗ್ರಾಮವು ವರ್ಷದ ಕೆಲವು ದಿನಗಳ ಕಾಲ ದ್ವೀಪವಾಗಿ ಪರಿವರ್ತನೆ ಗೊಳ್ಳುವುದರೊಂದಿಗೆ ಇಡೀ ಜನಜೀವನ ಸಂಪೂರ್ಣ ಅಸ್ತವ್ಯಸ್ತ ಗೊಳ್ಳುತ್ತಿರುವ ಬಗ್ಗೆ ಅಲ್ಲಿನ ನಾಗರಿಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ತಲಕಾವೇರಿ ಭಾಗಮಂಡಲ ವ್ಯಾಪ್ತಿ ಯಲ್ಲಿ ನದಿ ನಿರ್ವಹಣೆ ಕಾಮಗಾರಿ ನಡೆದಿದ್ದರೂ ಅದು ಸಮರ್ಪಕವಾಗಿ ನಡೆದಿಲ್ಲ ಎನ್ನುವ ದೂರುಗಳು ಕೇಳಿಬಂದಿವೆ. ನದಿ ಮುಂದೆ ಸಾಗಿದಂತೆ ಶುದ್ಧವಾಗಿ ಹರಿಯುವ ಕಾವೇರಿ ತನ್ನ ಒಡಲಿಗೆ ಕಲ್ಮಶ ಸೇರಿಸಿಕೊಂಡು ಹರಿಯಬೇಕಾದ ದುಸ್ಥಿತಿಗೆ ಒಳಗಾಗುತ್ತಿರುವುದು ಮೂಲಕಾವೇರಿಯಿಂದಲೇ ಸಾಗುತ್ತಿದ್ದರೂ ನೆಲ್ಲಿಹುದಿಕೇರಿ ವ್ಯಾಪ್ತಿಗೆ ಬಂದಾಗಲAತೂ ಇದು ಅತಿಯಾಗಿ ಗೋಚರವಾಗುತ್ತಿದೆ. ಅಲ್ಲಿ ಮೀನು, ಕೋಳಿ, ದನದ ಮಾಂಸದ ತ್ಯಾಜ್ಯಗಳು ಯಥೇಚ್ಚವಾಗಿ ನದಿ ಒಡಲು ಸೇರುತ್ತಿದೆ. ಈ ಬಗ್ಗೆ ಅಲ್ಲಿನ ಜನಪ್ರತಿನಿಧಿಗಳು ಎಷ್ಟೇ ಎಚ್ಚರವಹಿಸಿದರೂ ಫಲಶ್ರುತಿ ದೊರೆಯುತ್ತಿಲ್ಲ ಎನ್ನುವುದು ಆರೋಪ. ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ನದಿ ಒಡಲಿಗೆ ತ್ಯಾಜ್ಯಗಳನ್ನು ಹಾಕುವ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಪಂಚಾಯ್ತಿ ಮೂಲಕ ಕ್ರಮಕ್ಕೆ ಅಲ್ಲಿನ ಮಾಜಿ ಹಾಗೂ ಹಾಲಿ ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳು ತಂಡವೊAದನ್ನು ರಚಿಸಿ ಕಾರ್ಯಾಚರಣೆಗೆ ಮುಂದಾಗಿರು ವುದು ನಿಜಕ್ಕೂ ಶ್ಲಾಘನಾರ್ಹ.

(ಮುಂದುವರಿಯುವುದು)

?ಎA. ಎನ್. ಚಂದ್ರಮೋಹನ್