ವೀರಾಜಪೇಟೆ, ಜ.೮: ಕಾಫಿ ತೋಟದಲ್ಲಿದ್ದ ಶ್ರೀಗಂಧದ ಮರವನ್ನು ಅಕ್ರಮವಾಗಿ ಕಡಿದು ಮಾರಾಟಕ್ಕೆ ಯತ್ನಿಸಿದ ನಾಲ್ವರನ್ನು ವೀರಾಜೇಟೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಅಮ್ಮತ್ತಿ ಗ್ರಾಮದ ನಿವಾಸಿಗಳಾದ ಮುತ್ತಪ್ಪ ಹೆಚ್.ಎಲ್ (೪೧), ಅರ್ಜುನ್ ವೈ.ಅರ್. (೨೩), ಮಹದೇವ ಸ್ವಾಮಿ (೨೪) ಮತ್ತು ಸಿದ್ದಾಪುರ ಗ್ರಾಮದ ಸುಜಯ್ ಎ.ಎಸ್. (೩೪) ಬಂಧಿತ ಆರೋಪಿಗಳು, ನೌಷದ್ ಎಂಬವನು ತಲೆಮರೆಸಿಕೊಂಡಿದ್ದಾನೆ.
ಪೊಲೀಸರು ಗಸ್ತು ತಿರುಗುವ ಸಂದÀರ್ಭ ಅಮ್ಮತ್ತಿ ಅರ್.ಐ.ಹೆಚ್.ಪಿ ಆಸ್ಪತ್ರೆ ಸಮೀಪದ ತೋಟದ ಬಳಿ ವಾಹನ ನಿಂತಿರುವುದು ಕಂಡುಬAದ ಹಿನ್ನೆಲೆಯಲ್ಲಿ ಪೊಲೀಸರು ವಾಹನ ತಪಾಸಣೆಗೆ ಮುಂದಾಗಿದ್ದಾರೆ. ತಪಾಸಣೆ ವೇಳೆಯಲ್ಲಿ ಅಂದಾಜು ೩೫ ಸಾವಿರ ಮೌಲ್ಯದ ೪೦ ಕೆ.ಜಿ.ತೂಕದ ೯ ಶ್ರೀಗಂಧದ ತುಂಡುಗಳು ಕಂಡುಬAದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಕ್ಷಮಾ ಮಿಶ್ರ ಅವರ ಮಾರ್ಗದರ್ಶನ ದಲ್ಲಿ ವೀರಾಜಪೇಟೆ ಉಪವಿಭಾಗ ಡಿ.ವೈ.ಎಸ್ಪಿ ಸಿ.ಟಿ.ಜಯಕುಮಾರ್, ಅವರ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಸಿದ್ಧಲಿಂಗ, ಬಿ.ಬಾಣಸೆ, ಎ.ಎಸ್.ಐ ಶ್ರೀಧರ್, ಶಿವಣ್ಣ, ಸಿಬ್ಬಂದಿಗಳಾದ ತೀರ್ಥಕುಮಾರ್, ನೆಹರು ಕುಮಾರ್, ರಾಮಪ್ಪ, ಚಂದ್ರಶೇಖರ್ ಎಂ., ಜೋಯಪ್ಪ ಇದ್ದರು.