ಶ್ರೀಮಂಗಲ, ಜ. ೮: ಅಮ್ಮತ್ತಿ ಸಮೀಪ ಒಂಟಿಯAಗಡಿಯ ಪಚ್ಚಾಟ್ ಊರ್ ಮಂದ್‌ನಲ್ಲಿ ತಾ. ೧೨ ರಂದು ನಡೆಯುವ ಯುಕೊ ಕೊಡವ ಮಂದ್ ನಮ್ಮೆಗೆ ಪಚ್ಚಾಟ್ ಗ್ರಾಮದ ಪೊಮ್ಮಕ್ಕಡ ಕೂಟದ ಸದಸ್ಯರೊಂದಿಗೆ ಜಾಗೃತಿ ಸಭೆ ಗುರುವಾರ ನಡೆಯಿತು.

ಸಭೆಯಲ್ಲಿ ಮಾತನಾಡಿದ ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ಅವರು, ಮಂದ್‌ನ ಪ್ರಾಮುಖ್ಯತೆಯು ಬೇರೆ ಜನಾಂಗದಲ್ಲಿ ಮಠ ಸ್ಥಾಪನೆಯಂತೆ ಮಂದ್ ಸಂಸ್ಕೃತಿಯಾಗಿದೆ. ಮಠಾಧೀಶರಂತೆ ತಕ್ಕಾಮೆಗೆ ಪ್ರಾಮುಖ್ಯತೆ ಇದೆ ಎಂದು ವಿವರಿಸಿದರು.

ಯಾವುದೇ ಒಂದು ಜನಾಂಗದ ಸಾಮಾಜಿಕ ಸ್ವಾಸ್ಥö್ಯ ಉತ್ತಮವಾಗಿರ ಬೇಕಾದರೆ ಆಧ್ಯಾತ್ಮಿಕ ಬೇರು ಬಲವಾಗಿ ರಬೇಕು. ಇವೆರಡನ್ನು ಆರೋಗ್ಯ ವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಮಂದ್ ಹಾಗೂ ತಕ್ಕಾಮೆಗೆ ಒತ್ತು ನೀಡು ತ್ತಿರುವುದಾಗಿ ಅವರು ವಿವರಿಸಿದರು.

ಆಧ್ಯಾತ್ಮಿಕ ಸ್ವಾಸ್ಥö್ಯ ಗಟ್ಟಿಮಾಡುವ ಸಲುವಾಗಿ ಮಂದ್ ನಮ್ಮೆಯಂತಹ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದು ಕೊಡವ ಜನಾಂಗದ ಮೇಲೆ ಅತ್ಯಂತ ಸಕರಾತ್ಮಕ ಪ್ರಭಾವವನ್ನು ಬೀರಿದ್ದು, ಕೊಡವಾಮೆ ಅಂಗಳದಲ್ಲಿ ಪರಿವರ್ತನೆಯ ಹೊಳಪು ಮೂಡಿಸಿದೆ ಎಂದು ಮಂಜು ಚಿಣ್ಣಪ್ಪ ಪ್ರತಿಪಾದಿಸಿದರು. ಪಚ್ಚಾಟ್ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮಚ್ಚರಂಡ ರೀನಾ ಗಿರೀಶ್, ಕಾರ್ಯದರ್ಶಿ ಮಂಡೇಪAಡ ಲೀನಾ, ಪೊರ್ಕೋಂಡ ಸವಿತಾ ಬೋಪಣ್ಣ ಹಾಗೂ ಕೂಟದ ಸದಸ್ಯರು ಪಾಲ್ಗೊಂಡಿದ್ದರು.