ಮಡಿಕೇರಿ, ಜ. ೮: ೨೦೨೧ರ ಹೊಸ ವರ್ಷದ ಆರಂಭದಲ್ಲೇ ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು - ಕಾಫಿ ಬೆಳೆಗಾರರು ಆಘಾತಕ್ಕೊಳಗಾಗುವಂತಾಗಿದೆ. ಕಳೆದ ಕೆಲವು ದಿನಗಳಿಂದ ವಾತಾವರಣದಲ್ಲಿ ಉಂಟಾಗಿರುವ ದಿಢೀರ್ ಬದಲಾವಣೆಯಿಂದಾಗಿ ಜಿಲ್ಲೆಯ ಬಹುತೇಕ ಮಳೆಯಿಂದಾಗಿ ಇದು ಹೂಬಿಡುವುದು ಖಚಿತವಾಗಿದೆ. ಆದರೆ ಇನ್ನೂ ಶೇ.೬೦ರಷ್ಟು ಮೊಗ್ಗು ಬರಬೇಕಾಗಿರುವುದರಿಂದ ಒಂದೇ ಗಿಡದಲ್ಲಿ ಮುಂದಿನ ಸಾಲಿಗೆ ಎರಡು ರೀತಿಯ ಫಸಲಿನ ಏರಿಳಿತವಾಗಲಿದೆ. ನೆರಳು ಇಲ್ಲದ ಕಡೆ ಈಗಾಗಲೇ ಶೇ.೪೦ರಷ್ಟು ಹೂ ಅರಳುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಪ್ರಸಕ್ತ ಇರುವ ಫಸಲಿಗೆ ಸಂಬAಧಿಸಿದAತೆ ಕಾಫಿ ಉದುರುವಿಕೆ ಹೆಚ್ಚಾಗುವುದು, ಕಾಯಿ ಒಡೆಯುವುದು, ಕುಯಿಲು ಮಾಡಿರುವ (ಮೊದಲ ಪುಟದಿಂದ) ಕಾಫಿಗೆ ನೀರು ಸೇರಿದಲ್ಲಿ ಶೇ.೧೦ಕ್ಕೂ ಅಧಿಕ ತೂಕ ಕಡಿಮೆ ಬರುವ ಮೂಲಕವೂ ನಷ್ಟ ಎದುರಾಗಲಿದೆ ಎನ್ನುತ್ತಾರೆ ಇಬ್ನಿವಳವಾಡಿಯ ಬೆಳೆಗಾರರಾದ ಸುರೇಶ್ ಸುಬ್ಬಯ್ಯ ಅವರು. ಮಳೆಯಿಂದ ನೆಲಕಚ್ಚಿದ ಹಣ್ಣಾದ ಕಾಫಿಯನ್ನು ತ್ವರಿತವಾಗಿ ಆಯದಿದ್ದಲ್ಲಿ ಬರ‍್ರಿಬೋರರ್ ಹೆಚ್ಚಾಗುವ ಸಂಭವವೂ ಉಂಟಾಗಲಿದೆ. ಇದರೊಂದಿಗೆ ಗಿಡದಲ್ಲಿ ಈಗ ಹಣ್ಣಾಗಿರುವ ಕಾಫಿ ಗಿಡದಲ್ಲೇ ಒಣಗಲಾರಂಭಿಸುತ್ತದೆ. ಇದರಿಂದಲೂ ತೂಕ ಕಡಿಮೆಯಾಗಬಹುದು ಎಂಬುದು ಇವರ ಅನಿಸಿಕೆಯಾಗಿದೆ. ಸಾಧಾರಣವಾಗಿ ಕಾಫಿಗೆ ಜನವರಿ ಅಂತ್ಯದ ಬಳಿಕ ಹೂಮಳೆಯಾದರೆ ಅದು ಪ್ರಯೋಜನಕಾರಿಯಾಗುತ್ತದೆ. ಆದರೆ, ಜನವರಿ ಆರಂಭದಲ್ಲೇ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಕಾಫಿ ಹೂ ಅರಳುವ ಸನ್ನಿವೇಶ ಎದುರಾಗಿರುವುದು ಇದು ಮುಂದಿನ ವರ್ಷದ ಫಸಲಿಗೆ ಧಕ್ಕೆಯಾಗುತ್ತದೆ ಎಂಬುದು ಬೆಳೆಗಾರರ ಅಭಿಪ್ರಾಯವಾಗಿದೆ. ಇದೇ ಮಳೆ ಫೆಬ್ರವರಿ ಮೊದಲ ವಾರದ ನಂತರ ಬಂದಿದ್ದರೆ ಶೇ. ೧೦೦ರಷ್ಟು ಹೂ ಅರಳುತ್ತಿತ್ತು.

ಈಗಾಗಲೇ ಜಿಲ್ಲೆಯ ಹಲವಾರು ಭಾಗದಲ್ಲಿ ೫೦ ಸೆಂಟ್‌ನಿAದ ಒಂದು ಇಂಚಿಗೂ ಅಧಿಕ ಮಳೆ ಸುರಿದಿದೆ. ಮಾತ್ರವಲ್ಲ, ಇನ್ನೂ ಕೆಲವು ದಿನಗಳ ಕಾಲ ಮತ್ತೆ ಆಗಾಗ್ಗೆ ಮಳೆಯಾಗುವ ಮುನ್ಸೂಚನೆಯೂ ಇರುವುದು ಬೆಳೆಗಾರರನ್ನು ಕಂಗೆಡಿಸಿದೆ. ಹಲವೆಡೆಗಳಲ್ಲಿ ಈಗಾಗಲೇ ಕಾಫಿ ಹೂ ಅರಳಿದ್ದು, ಗಿಡದಲ್ಲಿರುವ ಕಾಫಿಯನ್ನು ಕುಯಿಲು ಮಾಡುವುದೂ ದುಸ್ತರವಾಗುತ್ತಿದೆ. ಇದರೊಂದಿಗೆ ಅವಧಿಗೆ ಮುನ್ನವೇ ಮೊಗ್ಗು ಮುಂದುವರೆಯುತ್ತಿದ್ದು, ಇದು ನಂತರದಲ್ಲಿ ಉದುರಿ ಹೋಗುವ ಸಾಧ್ಯತೆ ಕೂಡ ಇದೆ ಎನ್ನುತ್ತಾರೆ ಹಲವರು.

ಕಾಫಿ ಬೆಳೆಯ ಪರಿಸ್ಥಿತಿ ಒಂದೆಡೆಯಾದರೆ ಭತ್ತದ ಕೃಷಿಯ ಕೆಲಸವನ್ನು ಪೂರ್ಣಗೊಳಿಸಲು ಕೊನೆಯ ಹಂತದ ಕೆಲಸ ನಿರ್ವಹಿಸುತ್ತಿರುವ ರೈತರಿಗೂ ಈಗಿನ ಮಳೆ ಭಾರೀ ಸಮಸ್ಯೆಯನ್ನು ತಂದೊಡ್ಡಿದೆ. ಭತ್ತವೂ ಸೇರಿದಂತೆ ಹುಲ್ಲು ಕೂಡ ಮಳೆಯಿಂದಾಗಿ ನಾಶವಾಗುವಂತಾಗಿದೆ. ಗದ್ದೆಯಲ್ಲಿ ಕುಯಿಲು ಮಾಡಿರುವ ಭತ್ತ ಮೊಳಕೆ ಬರುವಂತಾಗಲಿದ್ದರೆ, ಹುಲ್ಲು ಕೊಳೆತು ನಷ್ಟವಾಗಲಿದೆ.

ಇನ್ನಿತರ ರೀತಿಯಲ್ಲೂ ಸಮಸ್ಯೆ

ಕೇವಲ ಕಾಫಿ ಬೆಳೆಗಾರರು - ರೈತರಿಗೆ ಮಾತ್ರವಲ್ಲ, ಈಗಿನ ಮಳೆ ಇನ್ನಿತರ ರೀತಿಯಲ್ಲೂ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಅಲ್ಲಲ್ಲಿ ರಸ್ತೆ ಕೆಲಸ, ಡಾಂಬರೀಕರಣ ಮತ್ತಿತರ ಕೆಲಸ -ಕಾರ್ಯಗಳು ಇದೀಗ ತಾನೆ ನಡೆಯುತ್ತಿದ್ದು, ಈ ಕೆಲಸ ಕಾರ್ಯಗಳಿಗೂ ಮಳೆ ಅಡ್ಡಿಯಾಗಿದೆ. ಮಾತ್ರವಲ್ಲದೆ, ನಿರ್ವಹಿಸಲಾಗಿರುವ ಕೆಲಸವೂ ಹಾಳಾಗುತ್ತಿದೆ. ಕೆಲವೆಡೆಗಳಲ್ಲಿ ಚರಂಡಿ ತುಂಬಿ ಸಮಸ್ಯೆ ಯಾಗಿರುವುದು, ತಡೆಗೋಡೆ ಕುಸಿತ ದಂತಹ ಪ್ರಕರಣವೂ ವರದಿಯಾಗಿದೆ.

ಮಡಿಕೇರಿಗೆ ಒಂದು ಇಂಚು ಜಿಲ್ಲಾ ಕೇಂದ್ರ ಮಡಿಕೇರಿಗೆ ತಾ.೬ರಂದು ಒಂದು ಇಂಚಿಗೂ ಅಧಿಕ ಮಳೆ ಸುರಿದಿದೆ. ಭಾರೀ ಮಳೆಯಿಂದಾಗಿ ಕೆಲವೆಡೆ ರಸ್ತೆಗಳಲ್ಲಿ ಜಲ್ಲಿಕಲ್ಲುಗಳು ರಾಶಿಯಾಗಿ ಕೊಚ್ಚಿಬಂದಿವೆ.

ಕೂಡಿಗೆ, ಸುಂಟಿಕೊಪ್ಪ, ಕುಶಾಲನಗರ, ಮೂರ್ನಾಡು, ಬಲ್ಲಮಾವಟಿ, ಬೆಟ್ಟಗೇರಿ ಸೇರಿದಂತೆ ದಕ್ಷಿಣ ಕೊಡಗಿನ ಹಲವೆಡೆಗಳಲ್ಲೂ ಧಾರಾಕಾರ ಮಳೆಯಾಗಿರುವ ಕುರಿತು ವರದಿಯಾಗಿದೆ. ಕರಿಕೆ ವ್ಯಾಪ್ತಿಯಲ್ಲಿಯೂ ತಾ. ೭ರಂದು ಭಾರೀ ಮಳೆ ಸುರಿದಿದೆ. ನೆಲಜಿ, ಕಕ್ಕಬೆ ವಿಭಾಗದಲ್ಲೂ ಕೆಲ ದಿನಗಳಿಂದ ಆಗಾಗ್ಗೆ ಮಳೆ ಬೀಳುತ್ತಿದೆ.

ಕರಿಮೆಣಸಿಗೆ ಉತ್ತಮ

ಈಗಿನ ಹವಾಮಾನ ಕರಿಮೆಣಸು (ಮೊದಲ ಪುಟದಿಂದ) ಮತ್ತಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಮಸ್ಯೆಯಿಂದ ಆದಾಯಕ್ಕೆ ಮೀರಿ ನಿವರ್ಹಣೆ ವೆಚ್ಚ ತಗಲುತ್ತಿದ್ದು, ಪ್ರತಿವರ್ಷ ಸಾಲದ ಹೊರೆ ಹೆಚ್ಚಾಗುತ್ತಿದೆ. ಆದ್ದರಿಂದ ಶೂನ್ಯ ಆದಾಯ (ಉಳಿತಾಯ) ಹೊಂದಿರುವ ಬೆಳೆಗಾರರೆಂದು ಘೋಷಿಸಬೇಕು. ವಾಸ್ತವಾಂಶದ ಆದಾಯವನ್ನು ಪರಿಗಣಿಸಿ ಆದಾಯ ಪ್ರಮಾಣ ಪತ್ರ ನೀಡಬೇಕು. ಸಣ್ಣ ಬೆಳೆಗಾರರನ್ನು ಬಿಪಿಎಲ್ ಪಟ್ಟಿಗೆ ಸೇರಿಸಲು ನಿಬಂಧನೆಗಳನ್ನು ಸಡಿಲಿಸಿ ಸೌಲಭ್ಯ ಒದಗಿಸಬೇಕು.

ಕೊಡಗಿನ ಎಲ್ಲಾ ಬೆಳೆಗಾರರು ಎಲ್ಲಾ ಬ್ಯಾಂಕ್‌ಗಳ ಹಣಕಾಸು ಸಂಸ್ಥೆಗಳ, ಖಾಸಗಿಯಾಗಿ ಪಡೆದಿರುವ ಎಲ್ಲಾ ರೀತಿಯ ಸಾಲಗಳನ್ನು ಮನ್ನಾ ಮಾಡಿ ಮುಂದೆ ಬಡ್ಡಿ ರಹಿತವಾಗಿ ವಿಸ್ತರಿಸಬೇಕು. ಸಾಲ ಮರುಪಾವತಿಗೆ ಯಾವುದೇ ಒತ್ತಡವನ್ನು ಹಾಕದಂತೆ ಕ್ರಮ ಕೈಗೊಳ್ಳಬೇಕು.

ಉದ್ಯೋಗ ಖಾತ್ರಿ ಯೋಜನೆ ಯಡಿ ಜಿಲ್ಲೆಯ ಕಾಫಿ ಮತ್ತು ಎಲ್ಲಾ ಕೃಷಿ ಚಟುವಟಿಕೆಗೆ ಅವಕಾಶ ಕಲ್ಪಿಸಬೇಕು. ೨೦೨೦-೨೧ರ ಸಾಲಿನ ಅತಿವೃಷ್ಠಿ ಬೆಳೆ ನಷ್ಟ ಪರಿಹಾರ ವಿತರಣೆ ಬಾಕಿ ಇದ್ದು ಇದನ್ನು ಆದಷ್ಟು ಶೀಘ್ರ ಪಾವತಿ ಮಾಡಬೇಕು. ಫಸಲು ಭೀಮಾ ಯೋಜನೆಯ ಮೂಲಕ ಕಾಳುಮೆಣಸು ಬೆಳೆಗೆ ಕಟ್ಟಿದ್ದ ವಿಮೆಯ ಸೌಲಭ್ಯ ಇನ್ನೂ ಬೆಳೆಗಾರರಿಗೆ ಪಾವತಿಯಾಗಿರುವುದಿಲ್ಲ. ಈ ಬಗ್ಗೆ ಕೂಡಲೇ ವಿಮೆ ಸೌಲಭ್ಯದ ಹಣವನ್ನು ಒದಗಿಸಬೇಕು.

ದಶಕಗಳಿಂದ ಹಲವಾರು ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಕಾಫಿ ಮಂಡಳಿಯಿAದ ಬೆಳೆ ಉತ್ತೇಜನಕ್ಕೆ ನೀಡುವ ವಿವಿಧ ಸಹಾಯ ಧನ ಸ್ಥಗಿತವಾಗಿದ್ದು, ಇದನ್ನು ಮುಂದುವರೆಸಬೇಕು. ಶೇ. ೯೮ ರಷ್ಟು ಸಣ್ಣ ಬೆಳೆಗಾರರಿರುವ ಕಾಫಿ ಉದ್ಯಮದಲ್ಲಿ ಪ್ರಯೋಜನವಾಗುವ ಈ ಸಹಾಯ ಧನ ಮುಂದುª Àರೆಸಬೇಕು.

ಕಾಫಿ ಮಂಡಳಿಯನ್ನು ಮುಚ್ಚುವ ಹಾಗೂ ಶಾಖೆಗಳನ್ನು ಕಡಿತ ಮಾಡುವ ಯಾವುದೇ ನಿರ್ಧಾರದಿಂದ ಸಣ್ಣ ಬೆಳೆಗಾರರಿಗೆ ನಷ್ಟವಾಗುವುದರಿಂದ ಇಂತಹ ಯಾವುದೇ ನಿರ್ಧಾರವನ್ನು ಕೈಗೊಳ್ಳಬಾರದು.

ಕೊಡಗು ಜಿಲ್ಲೆಯಲ್ಲಿ ದಿನೇ ದಿನೇ ವನ್ಯಪ್ರಾಣಿಗಳ ಹಾವಳಿಯಿಂದ ಜನ, ಜಾನುವಾರು ಜೀವ ಹಾನಿ, ಬೆಳೆ ನಷ್ಟ ಹೆಚ್ಚಾಗುತ್ತಿದೆ. ಆದ್ದರಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಬೆಳೆಗಾರರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಮಿತಿ ರಚನೆ ಮಾಡಿ ಸಮಿತಿಯ ಶಿಫಾರಸ್ಸಿನಂತೆ ವನ್ಯ ಪ್ರಾಣಿ ಹಾವಳಿ ತಡೆಗಟ್ಟು ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ಗಮನ ಸೆಳೆಯಲಾಗಿದೆ.

ಸಮಾಲೋಚನೆ ಸಂದರ್ಭ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ೨೦೨೦-೨೧ನೇ ಸಾಲಿನ ಬೆಳೆ ನಷ್ಟ ಪರಿಹಾರ ಅರ್ಜಿಗಳನ್ನು ಅಪ್ಲೋಡ್ ಮಾಡುವುದು ಜಿಲ್ಲಾಡಳಿತವಾಗಿದ್ದು, ಖಾತೆಗೆ ಹಣ ಪಾವತಿಸುವುದು ಬೆಂಗಳೂರಿನಿAದ ಸರಕಾರ ಮಟ್ಟದಲ್ಲಿ ಆಗಲಿದೆ. ಇದು ಹಂತ ಹಂತವಾಗಿ ಬಿಡುಗಡೆ ಯಾಗಲಿದ್ದು, ಪರಿಹಾರ ಅರ್ಜಿ ಸಲ್ಲಿಸಿರುವ ಅರ್ಹ ಗ್ರಾಮಗಳ ಇಂತಹ ಯಾವುದೇ ನಿರ್ಧಾರವನ್ನು ಕೈಗೊಳ್ಳಬಾರದು.

ಕೊಡಗು ಜಿಲ್ಲೆಯಲ್ಲಿ ದಿನೇ ದಿನೇ ವನ್ಯಪ್ರಾಣಿಗಳ ಹಾವಳಿಯಿಂದ ಜನ, ಜಾನುವಾರು ಜೀವ ಹಾನಿ, ಬೆಳೆ ನಷ್ಟ ಹೆಚ್ಚಾಗುತ್ತಿದೆ. ಆದ್ದರಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಬೆಳೆಗಾರರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಮಿತಿ ರಚನೆ ಮಾಡಿ ಸಮಿತಿಯ ಶಿಫಾರಸ್ಸಿನಂತೆ ವನ್ಯ ಪ್ರಾಣಿ ಹಾವಳಿ ತಡೆಗಟ್ಟು ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ಗಮನ ಸೆಳೆಯಲಾಗಿದೆ.