ಮಡಿಕೇರಿ, ಜ. ೮: ಕೋವಿಡ್ - ೧೯ ಸಾಂಕ್ರಾಮಿಕದ ಸಂಬAಧ ಸುಮಾರು ೯ ತಿಂಗಳುಗಳಿAದ ಮುಚ್ಚಲ್ಪಟ್ಟಿದ್ದ ರಾಜ್ಯದ ಶಾಲೆಗಳು ಸರ್ಕಾರಿ ಆದೇಶದಂತೆ ಜನವರಿ ೧ ರಿಂದ ಪುನರಾರಂಭಗೊAಡಿದ್ದು, ಈ ಹಿನ್ನೆಲೆಯಲ್ಲಿ ಸುಂಟಿಕೊಪ್ಪದ ಲಯನ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ಸುಂಟಿಕೊಪ್ಪ ಸಮೀಪದ ಕಾನ್‌ಬೈಲ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿನ ಕಾಡು ಕಡಿದು, ಕಸ ತೆಗೆದು ಸ್ವಚ್ಛಗೊಳಿಸಲಾಯಿತು. ಅಲ್ಲದೆ ಶಾಲೆಯ ಧ್ವಜ ಸ್ತಂಭದ ತಳಭಾಗ ಹಾಗೂ ಶಾಲೆಯ ಗೇಟಿಗೆ ಸಂಸ್ಥೆಯ ವತಿಯಿಂದ ಬಣ್ಣ ಬಳಿಯಲಾಯಿತು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಗ್ಲೆನ್ ಮೆನೇಜಸ್, ಕಾರ್ಯದರ್ಶಿ ಶಶಾಂಕ್ ಎಸ್.ಎಸ್. ಖಜಾಂಚಿ ನಿಕೇಶ್ ಮತ್ತು ಸದಸ್ಯರಾದ ಎಂ.ಕೆ. ಉತ್ತಯ್ಯ, ಶಶಿಕಾಂತ್, ಸತೀಶ್, ಗಣೇಶ್ ಮತ್ತು ಶ್ರೀನಿವಾಸ್ ಪಾಲ್ಗೊಂಡಿದ್ದರು.

ಇದೇ ಸಂದರ್ಭ ಸಂಸ್ಥೆಯ ವತಿಯಿಂದ ಶಾಲೆಗೆ ಒಂದು ಥರ್ಮಲ್ ಸ್ಕಿçÃನಿಂಗ್ ಮಾಪಕವನ್ನು ನೀಡಲಾಗಿದ್ದು, ಅದನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಎಸ್. ಚನ್ನಪ್ಪರವರು ಸಂಸ್ಥೆಯ ಪದಾಧಿಕಾರಿಗಳಿಂದ ಸ್ವೀಕರಿಸಿದರು. ಈ ಸಂದರ್ಭ ಶಾಲೆಯ ಶಿಕ್ಷಕರಾದ ಅಬ್ಬಾಸ್, ಚಂದ್ರಾವತಿ ಡಿ.ಎಂ., ಶಾಂತಿ ಮತ್ತು ವಾಣಿ ಇದ್ದರು.