ಮಡಿಕೇರಿ, ಜ. ೮: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ‘ಸಾಹೇಬ್ರು ಬಂದವೇ!!’ ಅರೆಭಾಷೆ ನಾಟಕ ಪ್ರದರ್ಶನ ತಾ. ೧೦ ರಂದು (ನಾಳೆ) ಸಂಜೆ ೬ ಗಂಟೆಗೆ ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆ ಆವರಣದಲ್ಲಿ ನಡೆಯಲಿದೆ.

ಶಾಸಕರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದಾರೆ. ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಎಂ.ಪಿ. ಸುನಿಲ್ ಸುಬ್ರಮಣಿ, ಶಾಂತೆಯAಡ ವೀಣಾ ಅಚ್ಚಯ್ಯ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್, ಸಂತ ಜೋಸೆಫರ ವಿದ್ಯಾಸಂಸ್ಥೆಯ ಶಾಲಾ ಸಂಚಾಲಕಿ ಸಿಸ್ಟರ್ ಅಂಥೋನಿಯಮ್ಮ, ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ, ಅಕಾಡೆಮಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಹಾಗೂ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

ಸಾಹೇಬ್ರು ಬಂದವೇ ನಾಟಕದ ಮೂಲವು ನಿಖೋಲಾಯ್ ಗೊಗಲ್‌ನ ದಿ ಇನ್ಸ್ಪೆಕ್ಟರ್ ಜನರಲ್’ ಆಗಿದೆ. ಕನ್ನಡಕ್ಕೆ ಕೆ.ವಿ. ಸುಬ್ಬಣ್ಣ ಹಾಗೂ ಕೆ.ವಿ. ಅಕ್ಷರ ಅವರು ತಂದಿದ್ದಾರೆ. ಅರೆಭಾಷೆಗೆ ಜಯಪ್ರಕಾಶ್ ಕುಕ್ಕೇಟಿ ರಚಿಸಿದ್ದಾರೆ. ಜೀವನ್‌ರಾಂ ಸುಳ್ಯ ಅವರು ನಿರ್ದೇಶಿಸಿದ್ದಾರೆ.