ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆ

ಗುಡ್ಡೆಹೊಸೂರು, ಜ.೮: ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳ ದುರಸ್ತಿ ಅಥವಾ ಜೀರ್ಣೋದ್ಧಾರ ಕಾರ್ಯಕ್ಕೆ ೨೦೨೦-೨೧ನೇ ಸಾಲಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ದೇವಸ್ಥಾನಗಳಿಗೆ ಅನುದಾನ ಬಿಡುಗಡೆಯಾಗಿದೆ. ಕೊಡಗಿನ ಮೂರು ತಾಲೂಕಿನ ನಾಲ್ಕು ದೇವಸ್ಥಾನಗಳಿಗೆ ರಾಜ್ಯ ಸರಕಾರದ ಹಣ ಬಿಡುಗಡೆಯಾಗಿದೆ. ಈ ಹಣವನ್ನು ಜಿಲ್ಲಾಧಿಕಾರಿಗಳ ಖಾತೆಗೆ ಜಮೆ ಮಾಡಲಾಗಿದೆ.

ಶ್ರೀಭಗವತಿ ದೇವಸ್ಥಾನ, ತ್ಯಾಗತ್ತೂರು ಗ್ರಾಮ, ರೂ. ೫ ಲಕ್ಷ ಶ್ರೀ ಕರವಲೆ ಭಗವತಿ, ಮಹಿಷಿ ಮರ್ದಿನಿ ದೇವಾಲಯ ಕರವಲೆ ಬಾಡಗ ಇಲ್ಲಿಗೆ ಮೂರು ಲಕ್ಷ, ಶ್ರೀ ಚೌಡೇಶ್ವರಿ ದೇವಸ್ಥಾನ ಜೀಣೋದ್ಧಾರ ಸಮಿತಿ ಕಾರ್ಮಾಡು ಗ್ರಾಮ ವೀರಾಜಪೇಟೆ ತಾಲೂಕು ಇಲ್ಲಿಗೆ ಮೂರು ಲಕ್ಷ ಹಣ ಶ್ರೀ ಚೌಡೇಶ್ವರಿ ದೇವಸ್ಥಾನ ಜೀಣೋದ್ಧಾರ ಟ್ರಸ್ಟ್ ದೊಡ್ಡಬೆಟ್ಟಗೇರಿ, ಗುಡ್ಡೆಹೊಸೂರು, ಸೋಮವಾರಪೇಟೆ ಇಲ್ಲಿಗೆ ಮೂರು ಲಕ್ಷಹಣ ಬಿಡುಗಡೆಯಾಗಿದೆ. ಬಿಡುಗಡೆಯಾದ ಹಣದ ಉಲ್ಲೇಖ ಪತ್ರವನ್ನು ಎಲ್ಲಾ ದೇವಸ್ಥಾನಗಳ ಸಮಿತಿಯ ಅಧ್ಯಕ್ಷರಿಗೆ ಮತ್ತು ಮೂರು ತಾಲೂಕಿನ ತಹಶೀಲ್ದಾರ್ ಅವರಿಗೆ ಅಪರ ಜಿಲ್ಲಾಧಿಕಾರಿ ಕಚೇರಿಯಿಂದ ಪತ್ರದ ಪ್ರತಿ ನೀಡಲಾಗಿದೆ. ಗುಡ್ಡೆಹೊಸೂರು ಸಮೀಪದ ದೊಡ್ಡಬೆಟ್ಟಗೇರಿಯಲ್ಲಿ ಸುಮಾರು ರೂ. ೬೦ ಲಕ್ಷ ವೆಚ್ಚದಲ್ಲಿ ಜೀಣೋದ್ಧಾರ ಕಾರ್ಯ ನಡೆಯುತ್ತಿದೆ. ಇಲ್ಲಿನ ದೇವಸ್ಥಾನಕ್ಕೆ ಈ ಹಿಂದೆ ಶಾಸಕ ಅಪ್ಪಚ್ಚುರಂಜನ್ ಅವರು ಶಾಸಕರ ನಿಧಿಯಿಂದ ೫ ಲಕ್ಷ ಹಣ ಬಿಡುಗಡೆ ಮಾಡಿ ಸಹಕರಿಸಿದ್ದಾರೆ.

- ಕುಡೆಕ್ಕಲ್ ಗಣೇಶ್