ವೀರಾಜಪೇಟೆ, ಜ. ೮: ಪೊನ್ನಂಪೇಟೆಗೆ ಸಮೀಪದ ಚೀನಿವಾಡ ಗ್ರಾಮದ ಎಂ.ಎ .ಮುನೀರ್ ಎಂಬವರಿಗೆ ಸೇರಿದ ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಸುಮಾರು ರೂ. ೪ ಲಕ್ಷ ಮೌಲ್ಯದ ಕಾಫಿಯನ್ನು ಕಳವು ಮಾಡಿದ ಆರೋಪದ ಮೇರೆ ಪೊನ್ನಂಪೇಟೆ ಪೊಲೀಸರು ಅದೇ ಗ್ರಾಮದ ೧೮ ಮಂದಿ ವಿರುದ್ಧ ಐ.ಪಿ.ಸಿ ೧೯೬೦, ೪೪೭, ೪೨೭, ೩೭೯, ೧೪೯ ಪ್ರಕಾರ ಕಳವು ಪ್ರಕರಣ ದಾಖಲಿಸಿದ್ದಾರೆ.

ಗ್ರಾಮದ ಮೂವರು ಮಂದಿ, ೧೫ ಮಂದಿ ಕಾರ್ಮಿಕರುಗಳನ್ನು ಸೇರಿಸಿಕೊಂಡು ತಾ. ೫ ರಿಂದ ತಾ. ೮ರ ತನಕ ತೋಟದಲ್ಲಿ ಕಾಫಿ ಕಳವು ಮಾಡಿ ಅಕ್ರಮ ಮಾರಾಟ ಮಾಡಿರುವುದಾಗಿ ಪೊನ್ನಂಪೇಟೆ ಪೊಲೀಸರಿಗೆ ವೀರಾಜಪೇಟೆ ವಿದ್ಯಾನಗರದಲ್ಲಿರುವ ಮುನೀರ್ ಇಂದು ದೂರು ನೀಡಿದ್ದಾರೆ.