*ಗೋಣಿಕೊಪ್ಪ, ಜ. ೮: ಬಾಳೆಲೆ ಗ್ರಾಮದ ಪೋಡಮಾಡ ಉತ್ತಪ್ಪ ಸಾವಿಗೆ ಕಾರಣರಾದವರನ್ನು ಬಂಧಿಸುವAತೆ ೪೮ ಗಂಟೆ ಗಡುವು ನೀಡಿದರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಸಂಬAಧಿಸಿದ ಇಲಾಖೆ ವಿಫಲತೆಯನ್ನು ಸಾಧಿಸಿದೆ ಎಂದು ಆರೋಪಿಸಿ ತಾ. ೧೧ ರಂದು ಬೆಳಿಗ್ಗೆ ೬ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ಪಟ್ಟಣವನ್ನು ಶಾಂತಿಯುತವಾಗಿ ಬಂದ್ ಮಾಡಲಾಗುವುದು ಎಂದು ಬಾಳೆಲೆ ಕೊಡವ ಸಮಾಜ ಘೋಷಿಸಿದೆ.
ಬಾಳೆಲೆ ಕೊಡವ ಸಮಾಜ ಅಧ್ಯಕ್ಷ ಮಲ್ಚಿರ ಬೋಸ್ ಚಿಟ್ಟಿಯಪ್ಪ ಅಧ್ಯಕ್ಷತೆಯಲ್ಲಿ ಬಾಳೆಲೆ ಕೊಡವ ಸಮಾಜದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ. ಬಾಳೆಲೆ, ನಿಟ್ಟೂರು, ದೇವನೂರು, ಕೊಟ್ಟಗೇರಿ, ಪೊನ್ನಪ್ಪಸಂತೆ ಹಾಗೂ ಸುಳುಗೋಡು ಗ್ರಾಮಸ್ಥರು ಸಭೆಯಲ್ಲಿ ಹಾಜರಿದ್ದು, ಉತ್ತಪ್ಪ ಅವರ ಸಾವಿಗೆ ನ್ಯಾಯ ಸಿಗುವವರೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಸಭೆಯಲ್ಲಿ ಭರವಸೆ ನೀಡಿದರು.
ನ್ಯಾಯಕ್ಕಾಗಿ ಹೋರಾಟ ನಡೆಸುವುದು ನಮ್ಮ ಹಕ್ಕು. ಅಮಾಯಕ ಹಿರಿಯರ ಮೇಲೆ ಕಿಡಿಗೇಡಿಗಳ ಗುಂಪು ದಾಳಿ ಮಾಡಿರುವುದು ಅಮಾನವೀಯತೆಯ ಘಟನೆಯಾಗಿದೆ. ಸಾವಿಗೆ ನ್ಯಾಯ ಸಿಗಬೇಕಾದರೆ ಆರೋಪಿಗಳನ್ನು ಬಂಧಿಸಬೇಕು. ಕೊಲೆ ದೂರು ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಲು ಇಲಾಖೆ ನಿರ್ಲಕ್ಷ÷್ಯ ತಾಳುತ್ತಿದೆ ಎಂದು ಮಲ್ಚೀರ ಬೋಸ್ ಚಿಟ್ಟಿಯಪ್ಪ ಆರೋಪಿಸಿದರು.
ಬಾಳೆಲೆ ಪಟ್ಟಣದ ಬಂದ್‌ನಿAದ ನ್ಯಾಯ ದೊರಕದಿದ್ದಾರೆ ಮುಂದಿನ ದಿನಗಳಲ್ಲಿ ತಾಲೂಕು ಮತ್ತು ಜಿಲ್ಲಾದ್ಯಂತ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಚಿಮ್ಮಣಮಾಡ ಕೃಷ್ಣಗಣಪತಿ, ಅರಮಣಮಾಡ ಸುಗುಣ, ಅಳಮೇಂಗಡ ಬೋಸ್ ಮಂದಣ್ಣ, ಪೊಡಮಾಡ ಮೋಹನ್, ಪೊಡಮಾಡ ಸುಕೇಶ್ ಭೀಮಯ್ಯ, ಮಂದೇಮಾಡ ಬೋಸ್, ಅರಮಣಮಾಡ ರಂಜನ್ ಚಂಗಪ್ಪ ಸೇರಿದಂತೆ ಬಾಳೆಲೆ ಹೋಬಳಿಯ ನಾಲ್ಕು ಗ್ರಾಮದ ಪ್ರಮುಖರು ಹಾಜರಿದ್ದರು.