ಸೋಮವಾರಪೇಟೆ, ಜ. ೭: ಜೇಸೀ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸಂಕಪ್ಪ ಹಾಲ್‌ನಲ್ಲಿ ನಡೆಯಿತು.
ನೂತನ ಅಧ್ಯಕ್ಷೆ ಮಾಯ ಗಿರೀಶ್, ಕಾರ್ಯದರ್ಶಿ ನೆಲ್ಸನ್ ಡಿಸೋಜ, ಜೇಸಿರೇಟ್ ಅಧ್ಯಕ್ಷೆ ಪವಿತ್ರ ಲಕ್ಷಿö್ಮÃ, ಜೂನಿಯರ್ ಜೇಸಿ ಅಧ್ಯಕ್ಷ ಪ್ರಣವ್ ಎಸ್ ಕಶ್ಯಪ್, ನಿರ್ದೇಶಕರು ಗಳಾದ ಗೀತಾರವಿ, ಪದ್ಮಜಾ ಅಶೋಕ್, ಮಹಾದೇವ್, ಚೇತನ್, ಇಂಪಾ ಅವರುಗಳಿಗೆ ಜೇಸಿ ವಲಯಾಧ್ಯಕ್ಷ ಭರತ್ ಎನ್. ಆಚಾರ್ಯ ಪ್ರತಿಜ್ಞಾವಿಧಿ ಬೋಧಿಸಿದರು.
ನಂತರ ಮಾತನಾಡಿದ ಭರತ್, ೨೦೨೦ಸಾಲಿನ ಅಧ್ಯಕ್ಷೆ ಉಷಾರಾಣಿ ಗುರುಪ್ರಸಾದ್, ಕಾರ್ಯದರ್ಶಿ ವಿದ್ಯಾಸೋಮೇಶ್ ನಾಯಕತ್ವದ ಜೇಸಿ ತಂಡ ವಲಯಮಟ್ಟದಲ್ಲಿ ಹೆಚ್ಚಿನ ಪ್ರಶಸ್ತಿಗಳನ್ನು ಗಳಿಸಿರುವುದು ಶ್ಲಾಘನೀಯ. ಪ್ರಸಕ್ತ ಸಾಲಿನ ಅಧ್ಯಕ್ಷರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
‘ನನ್ನಿಂದ ಮಾತ್ರ ಸಾಧ್ಯ’ ಎಂಬ ಧ್ಯೇಯದೊಂದಿಗೆ ಅಂತಾರಾಷ್ಟಿçÃಯ ಜೇಸಿ ಸಂಸ್ಥೆ ಸಮಾಜಸೇವೆಯಲ್ಲಿ ಕಾರ್ಯೋನ್ಮುಖವಾಗಿದೆ. ಜೇಸಿ ಸದಸ್ಯರು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿದಿನ ಹೊಸದನ್ನೇ ಕಲಿಯಬೇಕು.
ಪರಿಶ್ರಮ ಮತ್ತು ಶಿಸ್ತನ್ನು ಮೈಗೂಡಿಸಿಕೊಂಡರೆ ಸಾಧನೆ ಮಾಡಬಹುದು ಎಂದು ಹೇಳಿದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೇಸಿ ಸದಸ್ಯರಾದ ಮಂಜುಳಾ ಸುಬ್ರಮಣಿ ಹಾಗೂ ಸುದೀಪ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯಲ್ಲಿ ದುಡಿದ ಸಾಧಕರನ್ನು ಈ ಸಂದರ್ಭ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಜೇಸಿ ವಲಯ ೧೪ ಅನುಷ್ಠಾನಾಧಿಕಾರಿ ಎಂ. ಬಾಬು, ನಿಕಟಪೂರ್ವ ಅಧ್ಯಕ್ಷೆ ಉಷಾರಾಣಿ, ಕಾರ್ಯದರ್ಶಿ ಮಂಜುಳಾ ಸುಬ್ರಮಣಿ, ಐಪಿಪಿ ಬಿ.ಜಿ. ಪುರುಷೋತ್ತಮ್, ಬಿ.ಪಿ. ನಿಖಿಲ್ ಮತ್ತಿತರರು ಇದ್ದರು.