ಸೋಮವಾರಪೇಟೆ ತಾಲೂಕು ಪತ್ರಕರ್ತರಿಂದ ಪ್ರಶಸ್ತಿಗೆ ವರದಿಗಳ ಆಹ್ವಾನ

ತಾ. ೯ ರಂದು ಕ್ರೀಡಾಕೂಟ - ತಾ. ೨೦ ರಂದು ವಾರ್ಷಿಕ ಮಹಾಸಭೆ

ಸೋಮವಾರಪೇಟೆ, ಜ. ೭: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ತಾ. ೨೦ ರಂದು ಸೋಮವಾರಪೇಟೆಯ ಪತ್ರಿಕಾಭವನದಲ್ಲಿ ನಡೆಯಲಿದ್ದು, ಪತ್ರಕರ್ತರ ಸಂಘದಿAದ ಸ್ಥಾಪಿಸಿರುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ತಾಲೂಕಿನ ಪತ್ರಕರ್ತರಿಂದ ವರದಿಗಳನ್ನು ಆಹ್ವಾನಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್ ತಿಳಿಸಿದ್ದಾರೆ. ತಾ. ೨೦ ರಂದು ಪೂರ್ವಾಹ್ನ ೧೦ ಗಂಟೆಗೆ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್‌ಕುಮಾರ್ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಲಿದೆ. ದತ್ತಿ ನಿಧಿಗೆ ಆಯ್ಕೆಯಾದ ಪತ್ರಕರ್ತರಿಗೆ ಅದೇ ದಿನ ೧೨ ಗಂಟೆಗೆ ಪ್ರಶಸ್ತಿ ವಿತರಣೆ ಮಾಡಲಾಗುವದು ಎಂದು ವಿಜಯ್ ಮಾಹಿತಿ ನೀಡಿದ್ದಾರೆ.

ಸಂಘದ ಮಾಜಿ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಅವರು ತಮ್ಮ ತಂದೆ-ತಾಯಿ ತೇಲಪಂಡ ಸೋಮಣ್ಣ ಮತ್ತು ಶಾರದ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ, ಸಂಘದ ಉಪಾಧ್ಯಕ್ಷ ಲೋಕೇಶ್ ಸಾಗರ್ ಅವರು ತಮ್ಮ ತಂದೆ-ತಾಯಿ ಬಿ.ಕೆ. ಸುಬ್ಬಯ್ಯ ಮತ್ತು ಜಯಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಅರಣ್ಯ ಪರಿಸರ ವನ್ಯಜೀವಿ ವರದಿ, ಕುಶಾಲನಗರದ ಪತ್ರಕರ್ತ, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಅವರು ತಮ್ಮ ತಂದೆ-ತಾಯಿ ಎಂ. ನಾರಾಯಣ ಹಾಗೂ ಎಂ. ಪದ್ಮಾವತಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿಗೆ ಪ್ರಶಸ್ತಿಗಳನ್ನು ಆಹ್ವಾನಿಸಲಾಗಿದೆ.

ಇದರೊಂದಿಗೆ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್‌ಕುಮಾರ್ ಅವರು ತಮ್ಮ ತಂದೆ ಹೆಚ್.ಎಸ್. ರಾಮೇಗೌಡ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಗ್ರಾಮೀಣ ವರದಿ, ಪತ್ರಕರ್ತರ ಸಂಘದ ರಾಷ್ಟಿçÃಯ ಮಂಡಳಿ ಸದಸ್ಯ ಎಸ್.ಎ. ಮುರುಳೀಧರ್ ಅವರು ತಮ್ಮ ಸಹೋದರ ಗಣೇಶ್ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿ, ಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿ ಯಶಸ್ವಿನಿ ಚಂದ್ರಕಾAತ್ ಅವರು, ತಮ್ಮ ತಂದೆ ಕೂಗೂರು ತಿಮ್ಮಪ್ಪ ಹೆಸರಿನಲ್ಲಿ ಸ್ಥಾಪಿಸಿರುವ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾದ ಅತ್ಯುತ್ತಮ ಕೃಷಿ ವರದಿಗೆ ಪ್ರಶಸ್ತಿಗಳನ್ನು ಆಹ್ವಾನಿಸಲಾಗಿದೆ. ತಾಲೂಕು ಪತ್ರಕರ್ತರ ಸಂಘದ ಸದಸ್ಯರಾಗಿರುವವರು ತಾ. ೧೨ ರೊಳಗೆ ಅಧ್ಯಕ್ಷರು-ಪ್ರಧಾನ ಕಾರ್ಯದರ್ಶಿ, ತಾಲೂಕು ಪತ್ರಕರ್ತರ ಸಂಘ, ಪತ್ರಿಕಾ ಭವನ, ಸೋಮವಾರಪೇಟೆ ಇಲ್ಲಿಗೆ ತಮ್ಮ ಇತ್ತೀಚಿನ ೨ ಭಾವಚಿತ್ರದೊಂದಿಗೆ ಮೂರು ಪ್ರತಿಗಳಲ್ಲಿ (ಒಂದು ಮೂಲ ಪ್ರತಿ) ವರದಿಗಳನ್ನು ಕಳುಹಿಸಬಹುದು. (ವರದಿಗಳು ೧.೧.೨೦೧೯ ರಿಂದ ೩೧.೧೨.೨೦೧೯ರ ಒಳಗೆ ಪ್ರಕಟವಾಗಿರಬೇಕು) ಹೆಚ್ಚಿನ ಮಾಹಿತಿಗೆ ಮೊ: ೯೦೦೮೩೪೬೨೩೪ನ್ನು ಸಂಪರ್ಕಿಸಹುದು ಎಂದು ವಿಜಯ್ ಹಾನಗಲ್ ತಿಳಿಸಿದ್ದಾರೆ.

ಕ್ರೀಡಾಕೂಟ: ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಅಂಗವಾಗಿ ತಾ. ೯ ರಂದು ತಾಲೂಕಿನ ಪತ್ರಕರ್ತರು ಹಾಗೂ ಕುಟುಂಬ ಸದಸ್ಯರಿಗೆ ಸೋಮವಾರಪೇಟೆಯ ಪತ್ರಿಕಾಭವನದಲ್ಲಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು, ಹೆಚ್ಚಿನ ಮಾಹಿತಿಗೆ ವಿಶ್ವ ಕುಂಬೂರು ಮೊ: ೯೯೪೫೨೫೯೪೪೦ ಸಂಖ್ಯೆಯನ್ನು ಸಂಪರ್ಕಿಸಬಹುದು.