ಮಡಿಕೇರಿ, ಜ. ೭: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ತಾ. ೩ ರಂದು ಗೋಣಿಕೊಪ್ಪ ಸಮೀಪದ ಅರ್ವತೊಕ್ಲು ಗ್ರಾಮದÀ ಕಾಡ್ಳಯಪ್ಪ ಮಂದ್‌ನಲ್ಲಿ ಸಿ.ಎನ್.ಸಿ. ವತಿಯಿಂದ ಜಾಗೃತಿ ಹಮ್ಮಿಕೊಳ್ಳಲಾಯಿತು. ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಮದ ಹಲವಾರು ಮಂದಿ ಪಾಲ್ಗೊಂಡು ಸಿ.ಎನ್.ಸಿ. ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ನಾಚಪ್ಪ ಅವರು ಮಾತನಾಡಿ, ಕೊಡವ ಬುಡಕಟ್ಟು ಕುಲ ಹಾಗೂ ಭೂ ರಾಜಕೀಯ-ಸ್ವಾಯತ್ತತೆಯ ಕುರಿತು ಮಾಹಿತಿ ನೀಡಿದರು. ಕೊಡವ ಜನಾಂಗಗಳ ಇನ್ನಿತರ ಬೇಡಿಕೆಗಳ ಕುರಿತು ಕೂಡ ಈ ಸಂದರ್ಭ ಸರ್ವರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಚಿಮಾಡ ಲವಾ ಗಣಪತಿ ಸ್ವಾಗತಿಸಿದರು. ವಂದನಾರ್ಪಣೆಯನ್ನು ಕಾಡ್ಯಮಾಡ ಅಶೋಕ್ ನೆರವೇರಿಸಿದರು. ವೇದಿಕೆಯಲ್ಲಿ ಕೊಕ್ಕಂಡ ಕಾರ್ಯಪ್ಪ, ಕಾಡ್ಯಮಾಡ ಪ್ರೀತಿ ಪೂಣಚ್ಚ, ಜಮ್ಮಡ ಮೋಹನ್, ಮದ್ರಿರ ಕರುಂಬಯ್ಯ ಹಾಗೂ ಇತರರು ಹಾಜರಿದ್ದರು.