ನಾಪೋಕ್ಲು, ಜ. ೭: ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ಯುವಕ ಸಂಘದ ವತಿಯಿಂದ ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕೇಲೇಟಿರ ಪವಿತ್ ಪೂವಯ್ಯ ಹಾಗೂ ಅಪ್ಪಂಡೆರAಡ ಪೆಮ್ಮಯ್ಯ ಪ್ರಥಮ ಸ್ಥಾನ ಪಡೆದುಕೊಂಡರು.
ರಾಹುಲ್ ಅರಂಬೂರ್ ದ್ವಿತೀಯ, ಮಾಳೆಯಂಡ ಅಪ್ಪಣ್ಣ ತೃತೀಯ ಸ್ಥಾನಗಳಿಸಿದರೆ, ೧೨ ಬೋರ್ ವಿಭಾಗದÀಲ್ಲಿ ಗೌತಮ್ ದ್ವಿತೀಯ ಮತ್ತು ಸಿಜು ತೃತೀಯ ಸ್ಥಾನ ಪಡೆದಿದ್ದಾರೆ.
ಶ್ರೀ ಮಕ್ಕಿ ಶಾಸ್ತಾವು ಯುವಕ ಸಂಘದ ಅಧ್ಯಕ್ಷ ಕಾಳೆಯಂಡ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ವಿಜೇತರಿಗೆ ಬಹುಮಾನ ವಿತರಿಸಿದರು.