ಕೂಡಿಗೆ, ಜ. ೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಕ್ತಿ ಕೇಂದ್ರದ ಅಭಿನಂದನಾ ಸಭೆಯು ಬಸವನತ್ತೂರು ಗ್ರಾಮದ ಮೂಡ್ಲಿಗೌಡ ಸಭಾಂಗಣದಲ್ಲಿ ನಡೆಯಿತು.
ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ನೂತನವಾಗಿ ಅಯ್ಕೆಯಾದ ಬಿಜೆಪಿ ಬೆಂಬಲಿತ ೧೫ ಸದಸ್ಯರುಗಳಿಗೆ ಅಭಿನಂದ ನೆಗಳನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ಜಿ. ಮನು, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಶಕ್ತಿ ಕೆಂದ್ರದ ಅಧ್ಯಕ್ಷರುಗಳಾದ ಮಂಜುನಾಥ, ಪ್ರವೀಣ್, ತಾಲೂಕು ಬಿಜೆಪಿ ಮಾಜಿ ಉಪಾಧ್ಯಕ್ಷ ಕೆ.ಕೆ. ಭೋಗಪ್ಪ, ತಾಲೂಕು ಮಂಡಲ ಕಾರ್ಯದರ್ಶಿ ಇಂದಿರಾ ರಮೇಶ್ ಮತ್ತಿತರರು ಇದ್ದರು.