ಸುಂಟಿಕೊಪ್ಪ, ಜ. ೭: ಕೊರೊನಾ ಭೀತಿಯಿಂದ ಮುಚ್ಚಲ್ಪಟ್ಟ ಶಾಲಾ-ಕಾಲೇಜುಗಳು ಪುನಾರಂಭಗೊAಡಿದೆ. ಆದರೆ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿರುವುದರಿAದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪದೆ ಪರದಾಡು ವಂತಾಗಿದೆ. ಇದರೊಂದಿಗೆ ಸಾರ್ವಜನಿಕರು ಕೂಡ ದುಬಾರಿ ಹಣ ವ್ಯಯಿಸಿ ತಾಲೂಕು ಕಚೇರಿ ಕೆಲಸ ಕಾರ್ಯಗಳಿಗೆ ತೆರಳುವಂತಾಗಿದೆ. ಕೂಡಲೇ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸುಂಟಿಕೊಪ್ಪ, ಚೆಟ್ಟಳ್ಳಿ, ಕಂಡಕೆರೆ, ಪೊನ್ನತ್ಮೊಟ್ಟೆ, ಮತ್ತಿಕಾಡು, ಗದ್ದೆಹಳ್ಳ ವಿಭಾಗದಿಂದ ಸುಂಟಿಕೊಪ್ಪದ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ೬ ರಿಂದ ೯ನೇ ತರಗತಿಯ ‘ವಿದ್ಯಾಗಮ’ ಶಾಲೆಗೆ ಬರಬೇಕಾದ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ಸಿನ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.
ಗೋಣಿಕೊಪ್ಪದಿಂದ ಶನಿವಾರಸಂತೆಗೆ ಕಳೆದ ೬೦ ವರ್ಷಗಳಿಂದ ಬರುತ್ತಿದ್ದ ಶ್ರೀ ರಾಮ ಮೋಟಾರ್ ಸರ್ವಿಸ್ ಬಸ್ ವಿದ್ಯಾರ್ಥಿಗಳಿಗೆ ಸುಂಟಿಕೊಪ್ಪ ಶಾಲೆಗೆ ಹಾಗೂ ಮಾದಾಪುರ ಡಿ. ಚೆನ್ನಮ್ಮ ಜೂನಿಯರ್ ಕಾಲೇಜಿಗೆ ತೆರಳುವ ಮಕ್ಕಳಿಗೆ ಸಹಕಾರಿಯಾಗಿತ್ತು. ಕೊರೊನಾ ಹಿನ್ನೆಲೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಇನ್ನೂ ಪ್ರಾರಂಭಗೊAಡಿಲ್ಲ.
ಈ ಭಾಗದ ಸಾರ್ವಜನಿಕರು ತಾಲೂಕು ಕಚೇರಿಯ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೆರಳಲು ಸಾಹಸ ಮಾಡುವಂತಾಗಿದೆ. ಖಾಸಗಿ ಬಸ್ ಸ್ಥಗಿತಗೊಂಡಿದ್ದರಿAದ ಇನ್ನೊಂದು ಊರಿನ ಸಂಪರ್ಕ ಪಡೆದು ದುಬಾರಿ ಹಣ ವ್ಯಯಿಸಿ ಇಲ್ಲವೇ ಖಾಸಗಿ ವಾಹನಗಳ ಮೂಲಕ ತೆರಳಬೇಕಾಗಿದೆ. ವಿದ್ಯಾರ್ಥಿಗಳು ವ್ಯಾಸಂಗದ ಹಿತದೃಷ್ಟಿ ಹಾಗೂ ಸಾರ್ವಜನಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಖಾಸಗಿ ಬಸ್ ಅಥವಾ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಡಬೇಕೆÀಂದು ವಿದ್ಯಾರ್ಥಿಗಳು, ಪೋಷಕರು ಪತ್ರಿಕೆಯ ಮೂಲಕ ಒತ್ತಾಯಿಸಿದ್ದಾರೆ.