*ಗೋಣಿಕೊಪ್ಪ, ಜ. ೭: ತಿತಿಮತಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಬಿಜೆಪಿ ಅಭ್ಯರ್ಥಿಗಳಿಗೆ ತಿತಿಮತಿ ವ್ಯಾಪ್ತಿಯ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು.
ಈ ವ್ಯಾಪ್ತಿಯಲ್ಲಿ ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದರೆ ಪೂಜೆ ಸಲ್ಲಿಸುವುದಾಗಿ ಕಾರ್ಯಕರ್ತರು ಪ್ರಾರ್ಥಿಸಿ ಕೊಂಡಿದ್ದರು. ಅದರಂತೆ ಕಾರ್ಯಕರ್ತರು ಅಭ್ಯರ್ಥಿಗಳೊಂದಿಗೆ ದೇವಸ್ಥಾನಕ್ಕೆ ತೆರಳಿ ಪೂಜಾ ಕಾರ್ಯ ನಡೆಸಿದರು. ನಂತರ ಕಾವೇರಿ ಸಭಾಂಗಣದಲ್ಲಿ ಅಭ್ಯರ್ಥಿಗಳಿಗೆ ಅಭಿನಂದನಾ ಸಭೆ ನಡೆಯಿತು.
*ಗೋಣಿಕೊಪ್ಪ, ಜ. ೭: ತಿತಿಮತಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಬಿಜೆಪಿ ಅಭ್ಯರ್ಥಿಗಳಿಗೆ ತಿತಿಮತಿ ವ್ಯಾಪ್ತಿಯ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು.
ಈ ವ್ಯಾಪ್ತಿಯಲ್ಲಿ ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದರೆ ಪೂಜೆ ಸಲ್ಲಿಸುವುದಾಗಿ ಕಾರ್ಯಕರ್ತರು ಪ್ರಾರ್ಥಿಸಿ ಕೊಂಡಿದ್ದರು. ಅದರಂತೆ ಕಾರ್ಯಕರ್ತರು ಅಭ್ಯರ್ಥಿಗಳೊಂದಿಗೆ ದೇವಸ್ಥಾನಕ್ಕೆ ತೆರಳಿ ಪೂಜಾ ಕಾರ್ಯ ನಡೆಸಿದರು. ನಂತರ ಕಾವೇರಿ ಸಭಾಂಗಣದಲ್ಲಿ ಅಭ್ಯರ್ಥಿಗಳಿಗೆ ಅಭಿನಂದನಾ ಸಭೆ ನಡೆಯಿತು.ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಕೃಷಿ ಮೋರ್ಚಾ ಅಧ್ಯಕ್ಷ ಚೆಪ್ಪುಡಿರ ಕಾರ್ಯಪ್ಪ, ಬೂತ್ ಅಧ್ಯಕ್ಷ ಶಿವು (ಅಪ್ಪಿ) ಚುನಾವಣೆ ಉಸ್ತುವಾರಿ ಸುಬ್ರಮಣಿ, ಬಿಜೆಪಿ ಜಿಲ್ಲಾ ಖಜಾಂಚಿ ಚೆಪ್ಪುಡಿರ ಮಾಚಯ್ಯ, ಮಹಾಶಕ್ತಿ ಕೇಂದ್ರದ ಸಣ್ಣುವಂಡ ಸುರೇಶ್, ಪ್ರಮುಖ ಪಾಲೇಂಗಡ ಮನು ನಂಜಪ್ಪ, ವಿಜೇತರಾದ ಎನ್.ಎನ್. ಅನುಪ್ ಕುಮಾರ್, ಪಿ.ಎಸ್. ಪೋನ್ನಿ, ಹೆಚ್.ಜಿ. ಚಂದ್ರಶೇಖರ್, ಶಾಮಲಾ, ವಿಜಯ, ಸರಸ್ವತಿ, ಅಶಾ, ಪಿ.ಕೆ. ಶಂಕರ, ರಾಜೇಶ್ವರಿ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.
-ಎನ್.ಎನ್. ದಿನೇಶ್