ಮಡಿಕೇರಿ, ಜ. ೭: ವೀರಾಜಪೇಟೆ ತಾಲೂಕು ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರಕಾರಿ ವಕೀಲರಾಗಿ ಸರಕಾರದಿಂದ ನೇಮಕಗೊಂಡಿರುವ ಕಂಜಿತAಡ ಅನಿತಾ ದೇವಯ್ಯ ಅವರಿಗೆ ಅವರ ತವರುಮನೆಯಾದ ಬಾಡಗರಕೇರಿಯ ಚೋನೀರ ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು. ಕುಟುಂಬದ ಐನ್ಮನೆಯಲ್ಲಿ ನಡೆದ ಕಾರ್ಯಕ್ರಮ ಚೋನೀರ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು. ಚೋನೀರ ಸುಬ್ರಮಣಿ, ಜೀವನ್, ಸೋಮಯ್ಯ, ಅಚ್ಚಯ್ಯ ಮತ್ತಿತರ ಕುಟುಂಬಸ್ಥರು ಭಾಗಿಗಳಾಗಿದ್ದರು.