ಮಡಿಕೇರಿ, ಜ. ೭: ಜಿಲ್ಲೆಯ ಏಕೈಕ ಶ್ರೀ ಅರ್ಧನಾರೀಶ್ವರ ದೇವಾಲಯವಿರುವ ಬಿಳಿಗೇರಿ ಗ್ರಾಮದಲ್ಲಿ ಅಷ್ಟಬಂಧ ದ್ರವ್ಯ ಕಲಶೋತ್ಸವ ಸಂಭ್ರಮ ಮನೆ ಮಾಡಿದೆ. ಕೊರೊನಾ ಭೀತಿಯ ನಡುವೆಯೂ ಕೊರೊನಾ ನಿಯಮಗಳ ಪಾಲನೆಯೊಂದಿಗೆ ನಿನ್ನೆಯಿಂದ ಉತ್ಸವ ಆರಂಭಗೊAಡಿದೆ. ಇಂದು ಗಣಪತಿ ಹೋಮ, ಬಿಂಭಶುದ್ಧಿ, ಕಲಶ ಪೂಜೆ, ಕಲಶಾಭಿಷೇಕ, ಪ್ರೋಕ್ತ ಹೋಮ, ಪ್ರಾಯಶ್ಚಿತ ಹೋಮ, ಶಾಂತಿ ಹೋಮ, ಮಹಾಪೂಜೆಯೊಂದಿಗೆ ಸಂಜೆ ಕುಂಭೇಶ ಕರ್ಕರಿ ಕಲಶ ಪೂಜೆ, ಅಧಿವಾಸ ಹೋಮ, ದ್ರವ್ಯ ಕಲಶ ಪೂಜೆ ಪರಿಕಲಶ ಪೂಜೆ ಹಾಗೂ ಕಲಶಾಧಿವಾಸ ನೆರವೇರಿತು.

ತಾ. ೮ ರಂದು (ಇಂದು) ಬೆಳಿಗ್ಗೆ ೭ ಗಂಟೆಯಿAದ ಗಣಪತಿ ಹೋಮ, ತತ್ವ ಹೋಮ, ತತ್ವಕಲಶ ಪೂಜೆ, ತತ್ವ ಕಲಶಾಭಿಷೇಕ ನಡೆಯಲಿದ್ದು, ಬೆಳಿಗ್ಗೆ ೯.೪೦ ರಿಂದ ೧೦.೨೪ರ ಕುಂಭ ಲಗ್ನದಲ್ಲಿ ಶ್ರೀ ದೇವರಿಗೆ ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ದ್ರವ್ಯ ಕಲಶಾಭಿಷೇಕ ನೆರವೇರಲಿದೆ. ೧೧.೩೦ ಗಂಟೆಗೆ ಮಹಾಪೂಜೆ, ಶ್ರೀಭೂತ ಬಲಿ, ಬಲಿಉತ್ಸವ, ರಾಜಾಂಗಣ ಪ್ರಸಾದ ಮಂತ್ರಾಕ್ಷತೆ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಗಳು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನೆರವೇರಲಿದೆ. ಉತ್ಸವ ಪ್ರಯುಕ್ತ ಮೂರು ದಿನಗಳ ಕಾಲ ಮೂರು ಹೊತ್ತು ಅನ್ನಪ್ರಸಾದ ವಿತರಣೆ ಮಾಡಲಾಗುತ್ತಿದೆ.

ಆರು ಅಡಿಯ ಶಿವಲಿಂಗ

ಹಿAದೊಮ್ಮೆ ಪ್ರಶ್ನೆಯಲ್ಲಿ ಬಂದAತೆ ಈ ಅರ್ಧನಾರೀಶ್ವರ ಸನ್ನಿಧಿಯಲ್ಲಿ ಸುಮಾರು ೬೦೦ ವರ್ಷಗಳ ಹಿಂದಿನಿAದ ಸಣ್ಣ ಶಿವಲಿಂಗವೊAದು ಆರಾಧಿಸಲ್ಪಡು ತ್ತಿತ್ತು. ಆದರೆ ಇತ್ತೀಚೆಗೆ ಕೆಲ ವರ್ಷಗಳ ಹಿಂದೆ ಆ ಲಿಂಗದ ಆರಾಧನೆ ದೇವರಿಗೆ ತೃಪ್ತಿದಾಯಕವಾಗಿಲ್ಲ ಎಂಬುದಾಗಿ ಪ್ರಶ್ನೆಯಲ್ಲಿ ಕಂಡು ಬಂದ ಪರಿಣಾಮ ಅನಾದಿಕಾಲದಿಂದ ಆರಾಧಿಸಲ್ಪಟ್ಟು ಭಗ್ನಕ್ಕೂ ಒಳಗಾಗಿದ್ದ ಆ ಲಿಂಗವನ್ನು ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು. ನಂತರ ಸುಮಾರು ೧೩ ವರ್ಷಗಳ ಹಿಂದೆ ಕಾರ್ಕಳದ ಕೃಷ್ಣ ಆಚಾರ್ ಎಂಬವ ರಿಂದ ಕೆತ್ತಿಸಲ್ಪಟ್ಟ ಆರು ಅಡಿ ಒಂಭತ್ತು ಇಂಚು ಎತ್ತರದ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಯಿತು. ಇದಾದ ಬಳಿಕ ಕ್ಷೇತ್ರ ವ್ಯಾಪ್ತಿಯಲ್ಲಿ ಸಮೃದ್ಧಿ ನೆಲೆಸಿದ್ದು, ಸರ್ವರಿಗೂ ಅರ್ಧನಾರೀಶ್ವರ ಸನ್ಮಂಗಳವನ್ನು ಉಂಟು ಮಾಡಿದ್ದಾರೆ. ಅರ್ಧನಾರೀಶ್ವರ ಸನ್ನಿಧಿ ವ್ಯಾಪ್ತಿಯಲ್ಲಿ ಸುಬ್ರಹ್ಮಣ್ಯ, ಗಣಪತಿ, ಅನ್ನಪೂರ್ಣೇಶ್ವರಿ ಹಾಗೂ ನಾಗ ದೇವರುಗಳು ಕೂಡ ಆರಾಧಿಸ ಲ್ಪಡುತ್ತಿವೆ ಎಂಬುದಾಗಿ ದೇವಾಲಯ ಸಮಿತಿ ಪ್ರಮುಖರು ‘ಶಕ್ತಿ’ಗೆ ಮಾಹಿತಿ ನೀಡಿದರು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ದಂಬೆಕೋಡಿ ಎಸ್. ಸುಕುಮಾರ್, ಕಾರ್ಯದರ್ಶಿ ಪರ್ಲಕೋಟಿ ಮಾಚಯ್ಯ, ತಕ್ಕರುಗಳಾದ ಮಂಞೆÃರ ಪಿ. ಸಾಬು ತಿಮ್ಮಯ್ಯ, ಬಿ.ಎ. ಪುರುಷೋತ್ತಮ ರೈ, ಸಮಿತಿ ಸದಸ್ಯ ಉಮೇಶ್ ಅಪ್ಪಣ್ಣ ಮತ್ತಿತರರು ಹಾಜರಿದ್ದರು.