ನಾಪೋಕ್ಲು, ಜ. ೬: ನಾಪೋಕ್ಲು ಲಯನ್ಸ್ ಕ್ಲಬ್ ವತಿಯಿಂದ ನಾಪೋಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನವನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಬೊಳ್ಳಂಡ ಶ್ಯಾಮ್ ಬಿದ್ದಪ್ಪ, ಉಪಾಧ್ಯಕ್ಷ ಕನ್ನಂಬಿರ ಸುಧಿ ತಿಮ್ಮಯ್ಯ, ಖಜಾಂಚಿ ಕೇಲೇಟಿರ ದೀಪು ದೇವಯ್ಯ, ಪದಾಧಿಕಾರಿ ಗಳಾದ ಮುಕ್ಕಾಟಿರ ವಿನಯ್, ಕೇಟೋಳಿರ ಕುಟ್ಟಪ್ಪ, ಕೋಟೆರ ಡಾ. ಪಂಚಮ್ ತಿಮ್ಮಯ್ಯ, ಕುಂಡ್ಯೋಳAಡ ಗಣೇಶ್‌ಮುತ್ತಪ್ಪ, ಕುಂಚೆಟ್ಟಿರ ಸುಧೀರ್‌ಉತ್ತಪ್ಪ, ಅಪ್ಪಾರಂಡ ಸುಭಾಷ್ ಮತ್ತಿತರರು ಹಾಜರಿದ್ದರು.