ಕಣಿವೆ, ಜ. ೬: ರೈತರು ಹೆಚ್ಚಾಗಿ ಬೆಳೆಯುವ ಮರಗೆಣಸು ಫಸಲಿಗೆ ಈ ಬಾರಿ ಬೆಲೆ ಕುಸಿತವಾಗಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದು ನಷ್ಟದ ಭೀತಿಯಲ್ಲಿ ಸಿಲುಕಿದ್ದಾರೆ.

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ, ಹೊಸಕಾಡು, ಅತ್ತೂರು, ಹುಲುಗುಂದ ಮೊದಲಾದ ಕಡೆಗಳಲ್ಲಿ ರೈತರು ಬೆಳೆದಿರುವ ಮರಗೆಣಸು ಫಸಲು ಕಟಾವಿಗೆ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಫಸಲಿಗೆ ಈಗಿರುವ ದರ ಮಾಡಿರುವ ಖರ್ಚಿಗೂ ಸಾಕಾಗುತ್ತಿಲ್ಲ ಎಂದು ಕೊರಗುತ್ತಿದ್ದಾರೆ.

ಎಂಟೂವರೆಯಿAದ ಒಂಭತ್ತು ತಿಂಗಳ ಅವಧಿಯ ಈ ತರಕಾರಿ ಕಾಯಿ ಪಲ್ಯೆ ಬೆಳೆಯಾದ ಈ ಬೆಳೆಯನ್ನು ಬೆಳೆಯಲು ಒಂದು ಎಕರೆಗೆ ೬೦ ಸಾವಿರ ರೂ ಖರ್ಚು ತಗಲುತ್ತಿದೆ ಎಂದು ಬೆಳೆಗಾರ ಬಸವನಹಳ್ಳಿಯ ಮಾದಪ್ಪ ಪಟ್ಟು, ಹೊಸಕಾಡು ರೈತ ಮಹೇಶ್, ಕುಮಾರ್, ಮೊದಲಾದವರು ಹೇಳುತ್ತಾರೆ. ಭೂಮಿಯನ್ನು ಉಳುಮೆ ಮಾಡಿ ಮರಗೆಣಸಿನ ಬಳ್ಳಿಯನ್ನು ಬಿತ್ತನೆ ಮಾಡಲು ಕನಿಷ್ಟ ಎಂದರೂ ೪೦ ಸಾವಿರ ಖರ್ಚಾಗುತ್ತದೆ.

ಭೂಮಿ ಉಳುಮೆಗೆ ೧೨ ಸಾವಿರ ವೆಚ್ಚ ತಗಲುತ್ತದೆ. ಹಾಗೆಯೆ ಒಂದು ಎಕರೆ ಭೂಮಿಯಲ್ಲಿ ಮರಗೆಣಸು ಬಳ್ಳಿ ನಾಟಿ ಮಾಡಲು ಕನಿಷ್ಟ ೪ ಸಾವಿರ ಬಳ್ಳಿಗಳು ಬೇಕು. ಒಂದು ಬಳ್ಳಿಗೆ ರೂ ೫ ರಂತೆ ಒಂದು ಎಕರೆ ಭೂಮಿಯಲ್ಲಿ ನಾಟಿ ಮಾಡಲು ೨೦ ಸಾವಿರ ವೆಚ್ಚ ತಗಲುತ್ತದೆ. ಬೆಳೆಯ ಆರಂಭದಿAದ ಕೊನೆಯವರೆಗೂ ನಾಲ್ಕು ಟ್ರಿಪ್ ಪೊಟ್ಯಾಶ್ ರಸ ಗೊಬ್ಬರಕ್ಕೆ ೧೫ ಸಾವಿರ, ಇನ್ನು ಕಳೆ ತೆಗೆಯುವುದು ಹಾಗೂ ಇತರೇ ಖರ್ಚುಗಳು ೧೫ ಸಾವಿರ ತಗಲುತ್ತದೆ ಎಂದು ಬಸವನಹಳ್ಳಿಯ ಮರಗೆಣಸು ಕೃಷಿಕ ಮಾದಪ್ಪ ಪಟ್ಟು ಹೇಳುತ್ತಾರೆ.

ಕಳೆದ ವರ್ಷ ಇದೇ ಮರಗೆಣಸು ಫಸಲಿಗೆ ಕೆಜಿ ಯೊಂದಕ್ಕೆ ೧೫ ರೂ ಇತ್ತು. ಈಗ ಕೇವಲ ೫ ರೂ ಇದೆ. ಜೊತೆಗೆ ನಾವೇ ಕಟಾವು ಮಾಡಿ ಕೊಡಬೇಕು. ಹಾಗಾಗಿ ಕಟಾವು ಮಾಡಲು ತಗಲುವ ಖರ್ಚಿಗೂ ಹಣ ಸಾಕಾಗಲ್ಲ ಎಂದುಕೊAಡು ಬಹಳಷ್ಟು ಬೆಳೆಗಾರರು ಭೂಮಿಯಲ್ಲೇ ಮರಗೆಣಸು ಫಸಲು ಬಿಟ್ಟುಕೊಂಡು ಕಾಯುತ್ತಿದ್ದಾರೆ. ಒಂದು ಎಕರೆಗೆ ಕನಿಷ್ಟ ಒಂದು ಎಕರೆ ಭೂಮಿಯಲ್ಲಿ ಮರಗೆಣಸು ಬಳ್ಳಿ ನಾಟಿ ಮಾಡಲು ಕನಿಷ್ಟ ೪ ಸಾವಿರ ಬಳ್ಳಿಗಳು ಬೇಕು. ಒಂದು ಬಳ್ಳಿಗೆ ರೂ ೫ ರಂತೆ ಒಂದು ಎಕರೆ ಭೂಮಿಯಲ್ಲಿ ನಾಟಿ ಮಾಡಲು ೨೦ ಸಾವಿರ ವೆಚ್ಚ ತಗಲುತ್ತದೆ. ಬೆಳೆಯ ಆರಂಭದಿAದ ಕೊನೆಯವರೆಗೂ ನಾಲ್ಕು ಟ್ರಿಪ್ ಪೊಟ್ಯಾಶ್ ರಸ ಗೊಬ್ಬರಕ್ಕೆ ೧೫ ಸಾವಿರ, ಇನ್ನು ಕಳೆ ತೆಗೆಯುವುದು ಹಾಗೂ ಇತರೇ ಖರ್ಚುಗಳು ೧೫ ಸಾವಿರ ತಗಲುತ್ತದೆ ಎಂದು ಬಸವನಹಳ್ಳಿಯ ಮರಗೆಣಸು ಕೃಷಿಕ ಮಾದಪ್ಪ ಪಟ್ಟು ಹೇಳುತ್ತಾರೆ.

ಕಳೆದ ವರ್ಷ ಇದೇ ಮರಗೆಣಸು ಫಸಲಿಗೆ ಕೆಜಿ ಯೊಂದಕ್ಕೆ ೧೫ ರೂ ಇತ್ತು. ಈಗ ಕೇವಲ ೫ ರೂ ಇದೆ. ಜೊತೆಗೆ ನಾವೇ ಕಟಾವು ಮಾಡಿ ಕೊಡಬೇಕು. ಹಾಗಾಗಿ ಕಟಾವು ಮಾಡಲು ತಗಲುವ ಖರ್ಚಿಗೂ ಹಣ ಸಾಕಾಗಲ್ಲ ಎಂದುಕೊAಡು ಬಹಳಷ್ಟು ಬೆಳೆಗಾರರು ಭೂಮಿಯಲ್ಲೇ ಮರಗೆಣಸು ಫಸಲು ಬಿಟ್ಟುಕೊಂಡು ಕಾಯುತ್ತಿದ್ದಾರೆ. ಒಂದು ಎಕರೆಗೆ ಕನಿಷ್ಟ ಸೇವಿಸುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಭೂಮಿಯ ಮೇಲೆ ಬೆಳೆವಣಿಗೆ ಯಾಗುವ ಎಲ್ಲಾ ಬಗೆಯ ತರಕಾರಿ ಕಾಯಿ ಪಲ್ಯೆಗಳಿಗೆ ಕೃಷಿಕರು ಅತೀ ಹೆಚ್ಚು ಪ್ರಮಾಣದಲ್ಲಿ ರಸಾಯನಿ ಕಗಳನ್ನು ಸಿಂಪಡಿಸುತ್ತಾರೆ. ಅಂದರೆ ಟೊಮ್ಯಾಟೋ, ಬೀನ್ಸ್, ಹಲಸಂದೆ, ಸೌತೆ, ಹೀರೆ, ಸೋರೆಕಾಯಿ, ಹಸಿಮೆಣಸಿನ ಕಾಯಿ, ಎಲೆ ಕೋಸು, ಹೂ ಕೋಸು ಮೊದಲಾದವುಗಳಿಗೆ ರಸಾಯ ನಗಳನ್ನು ಸಿಂಪಡಿಸದೇ ಸಾಧ್ಯವೇ ಇಲ್ಲದ ಸ್ಥಿತಿ ನಿರ್ಮಾಣ ವಾಗಿದೆ. ಇಂತಹ ಸ್ಥಿತಿಯಲ್ಲಿ ಭೂಮಿಯ ಒಳಪದರದಲ್ಲಿ ಬೆಳೆವ ಆಲೂಗೆಡ್ಡೆ, ಮರಗೆಣಸು, ಸಿಹಿಗೆಣಸು ಮೊದಲಾದ ತರಕಾರಿ ಕಾಯಿ ಪಲ್ಯೆಗಳಿಗೆ ಅಷ್ಟೇನು ರಸಾಯನಗಳನ್ನು ಸಿಂಪಡಿಸದ ಕಾರಣ ಕೇರಳಿಗರು ಇವುಗಳನ್ನು ಅತೀ ಹೆಚ್ಚಾಗಿ ಸೇವಿಸುತ್ತಾರೆ. ಮರಗೆಣಸಿ ನಲ್ಲಿ ವಿವಿಧ ರೀತಿಯ ಖಾದ್ಯಗಳನ್ನು ಕೂಡ ತಯಾರಿಸ ಲಾಗುತ್ತದೆ. ಆದರೆ ಇಂತಹ ಆರೋಗ್ಯಕಾರಿ ತರಕಾರಿಗಳನ್ನು ಬೆಳೆವ ನಮ್ಮ ರೈತಾಪಿ ಗಳ ಗೋಳನ್ನು ಜಿಲ್ಲಾಡಳಿತ ಅಥವಾ ಸರ್ಕಾರ ಕೇಳಬೇಕಿದೆ. - ಕೆ.ಎಸ್. ಮೂರ್ತಿ