ಶನಿವಾರಸಂತೆ, ಜ. ೬: ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ ಗದ್ದೆಮನೆ ರಸ್ತೆ ಸಮೀಪದ ಕುಡಿಯುವ ನೀರಿನ ಘಟಕ, ಪೈಪ್‌ಲೈನ್ ಗಾಮಗಾರಿಗೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು.

ತಾ.ಪಂ. ಸದಸ್ಯ ಹೆಚ್.ಬಿ. ಕುಶಾಲಪ್ಪ ಅವರ ಅನುದಾನದಲ್ಲಿ ರೂ. ೧.೫೦ ಲಕ್ಷ ವೆಚ್ಚದ ಕಾಮಗಾರಿ ನಡೆಯಲಿದೆ. ಗ್ರಾ.ಪಂ. ಸದಸ್ಯ ಹೆಚ್.ಎಂ. ವಿನಯ್, ಪ್ರಮುಖರಾದ ಎಸ್.ಕೆ. ವೀರಪ್ಪ, ಡಿ.ಬಿ. ಮಲ್ಲಿಖಾರ್ಜುನ, ಕೆ.ವಿ. ಮಂಜುನಾಥ, ಹೆಚ್.ಎಂ. ಶಾಂತಮಲ್ಲಯ್ಯ, ತೀರ್ಥಪ್ರಸಾದ್, ಎಂ.ಪಿ. ನಾಗೇಶ್, ಮನು, ನಿರಂಜನ್, ಮಧುಕುಶಾಲಪ್ಪ, ಪಂಚಾಯಿತಿ ಕಾರ್ಯದರ್ಶಿ ಎಂ.ಆರ್. ರವಿ ಹಾಗೂ ಗುತ್ತಿಗೆದಾರ ಕೆ.ಎ. ಹಮೀದ್ ಬ್ಯಾಡಗೊಟ್ಟ ಇತರರು ಇದ್ದರು.