ಶನಿವಾರಸಂತೆ, ಜ. ೬: ಸಮೀಪದ ಸುಳುಗಳಲೆ ಗ್ರಾಮದ ಸಮುದಾಯ ಭವನದಲ್ಲಿ ಅಕ್ಷರ ಮಾತೆ ಸಾವಿತ್ರಿ ಬಾಯಿ ಪುಲೆಯವರ ಜನ್ಮ ದಿನಾಚರಣೆ ಸಮಾರಂಭವನ್ನು ಗ್ರಾಮ ಪಂಚಾಯಿತಿ ನೂತನ ಸದಸ್ಯೆ ಭವಾನಿ ಉದ್ಘಾಟಿಸಿದರು.
ವಿಘ್ನೇಶ್ವರ ವಿದ್ಯಾಸಂಸ್ಥೆ ಶಿಕ್ಷಕ ಕೆ.ಪಿ. ಜಯಕುಮಾರ್ ಹಾಗೂ ದ.ಸಂ.ಸ. ಮುಖಂಡ ಫಾಲಾಕ್ಷ ಮಾತನಾಡಿ, ಸಾವಿತ್ರಿ ಬಾಯಿ ಪುಲೆ ಜೀವನ ಚರಿತ್ರೆ, ಶಿಕ್ಷಣ ಕ್ಷೇತ್ರದ ಸಾಧನೆಯ ಬಗ್ಗೆ ತಿಳಿಸಿದರು.
ದ.ಸಂ.ಸ. ಹೋಬಳಿ ಘಟಕದ ಅಧ್ಯಕ್ಷ ಶಿವಲಿಂಗ, ಸದಸ್ಯರಾದ ಮೋಹನ್ ಕುಮಾರ್, ಮಂಜಯ್ಯ, ನಾಗರಾಜ್, ಮಂಜು, ಗುರು, ಗೋವಿಂದ್, ಮಹೇಶ್, ಸೋಮಶೇಖರ್ ಇತರರು ಹಾಜರಿದ್ದರು.