ವೀರಾಜಪೇಟೆ ವರದಿ, ಜ. ೬: ನಗರದ ಸ್ವರಾರ್ಣವ ಸಂಗೀತ ಶಾಲೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮನ್ನು ಆಡಳಿತ ಮಂಡಳಿಯ ಅಧ್ಯಕ್ಷೆ ಕಾಮತ್ ಮತ್ತು ವಿದ್ಯಾನಿಕೇತನ ಕಾಲೇಜಿನ ಪ್ರಾಂಶುಪಾಲ ಹರೀಶ್ ತಮನ್‌ಕರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡುತ್ತ ಯುವಪೀಳಿಗೆ ಪಾಶ್ಚಾತ್ಯ ಸಂಸ್ಕೃತಿ ಹಾಗೂ ಸಂಗೀತಕ್ಕೆ ಮಾರುಹೋಗದೆ ದೇಶಿಯ ಸಂಗೀತವನ್ನು ಕಲಿತು ಉಳಿಸಿ ಬೆಳೆಸಬೇಕು ಎಂದರು.

ಸ್ವರಾರ್ಣವ ಸಂಗೀತ ಶಾಲೆಯ ವ್ಯವಸ್ಥಾಪಕರು ಮತ್ತು ಶಿಕ್ಷಕ ದಿಲಿಕುಮಾರ್ ಅವರ ಸಾರತ್ಯದಲ್ಲಿ ಸಂಗೀತ ಶಾಲೆಯ ಶಿಶ್ಯವೃಂದದಿAದ ಕನ್ನಡದ ಖ್ಯಾತ ಕವಿಗಳಾದ ಕುಪೆಂಪು, ದ.ರಾ. ಬೇಂದ್ರೆ, ಡಿ.ವಿ.ಜಿ ,ಕೆ.ಎಸ್. ನಿಸಾರ್ ಅಹಮ್ಮದ್ ವಿರಚಿತ ಕವನಗಳು ಪ್ರಸ್ತುತವಾಯಿತು. ಸುಗಮ ಸಂಗೀತ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.