ವೀರಾಜಪೇಟೆ, ಜ. ೫: ವೀರಾಜಪೇಟೆ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಅಯ್ಯಪ್ಪ ಉತ್ಸವವನ್ನು ಕೋವಿಡ್-೧೯ ಹಿನೆÀ್ನಲೆ ಈ ವರ್ಷ ಸರಳ ರೀತಿಯಲ್ಲಿ ಆಚರಿಸಲಾಯಿತು.

ದೇವಾಲಯದಲ್ಲಿ ಗಣಪತಿ ಹೋಮ, ಲಕ್ಷಿö್ಮÃಪೂಜೆ, ಲಕ್ಷಾರ್ಚನೆ ಮಹಾಪೂಜಾ ಸೇವೆ ನೆರವೇರಿತು. ಉತ್ಸವದ ಸಾಂಪ್ರದಾಯದAತೆ.

ಡಿ. ೩೦ ರಂದು ಗುಳಿಗನ ಪೂಜೆ ಹಾಗೂ ೩೧ ರಂದು ದೇವಾಲಯದಲ್ಲಿ ಪೂಜೆ ಪುನಸ್ಕಾರಗಳು ಜರುಗಿದವು. ಅಯ್ಯಪ್ಪ ವೃತಧಾರಿಗಳು ಇಂದು ದೇವಾಲಯದಲ್ಲಿ ಕಂಡು ಬರಲಿಲ್ಲ. ಭಕ್ತಾದಿಗಳು ಹಾಗೂ ದೇವಾಲಯದ ಟ್ರಸ್ಟ್ನ ಪದಾಧಿಕಾರಿಗಳು ಹಾಜರಿದ್ದರು.