ಪೊನ್ನಂಪೇಟೆ, ಜ. ೫: ಪೊನ್ನಂಪೇಟೆ ನೂತನ ತಾಲೂಕಿಗಾಗಿ ಶ್ರಮವಹಿಸಿದ ವೀರಾಜಪೇಟೆ ಶಾಸಕರಾದ ಕೆ.ಜಿ. ಬೋಪಯ್ಯ ಅವರನ್ನು ಪೊನ್ನಂಪೇಟೆ ನಾಗರಿಕ ವೇದಿಕೆ ಸನ್ಮಾನಿಸಿ ಗೌರವಿಸಿತು.
ಈ ಸಂದರ್ಭ ನಾಗರಿಕ ಹೋರಾಟ ಸಮಿತಿಯ ಉಪಾಧ್ಯಕ್ಷ ಚೆಪ್ಪುಡಿರ ಸಿ. ಸೋಮಯ್ಯ, ಕಾನೂನು ಸಲಹೆಗಾರ ಎಂ.ಪಿ. ಅಪ್ಪಚ್ಚು, ಸದಸ್ಯರಾದ ಕಳ್ಳೇಂಗಡ ಗಣಪತಿ, ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷ ಗಿರೀಶ್ ಗಣಪತಿ, ಮುದ್ದಿಯಡ ಮಂಜು ಗಣಪತಿ ಹಾಗೂ ಇತರರು ಹಾಜರಿದ್ದರು