ಗುಡ್ಡೆಹೊಸೂರು, ಜ. ೫: ಇಲ್ಲಿನ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ೧೮ ಸ್ಥಾನದ ಪೈಕಿ ೧೨ ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ ಹಿನ್ನೆಲೆ ವಿಜಯೋತ್ಸವ ಆಚರಿಸಲಾಯಿತು.
ವಿಜಯೋತ್ಸವದಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಮುಖಂಡರಾದ ಎಂ.ಆರ್. ಉತ್ತಪ್ಪ, ಗಣೇಶ್, ಜಿಲ್ಲಾ ಕಾರ್ಯದರ್ಶಿ ಪುಷ್ಪ, ಬಿ.ಕೆ. ಮೋಹನ್, ಕೆದಂಬಾಡಿ ಅಶೋಕ್ ಇನ್ನಿತರರು ಇದ್ದರು.