ಗೋಣಿಕೊಪ್ಪಲು, ಜ.೫: ಬಾಳೆಲೆ ಗ್ರಾಮ ಪಂಚಾಯ್ತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ನಗರದಲ್ಲಿ ಮೆರವಣಿಗೆ ಸಾಗಿದ ಬಿಜೆಪಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನೂತನ ಸದಸ್ಯರೊಂದಿಗೆ ವಿಜಯೋತ್ಸವ ಆಚರಿಸಿದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಗುಮ್ಮಟ್ಟೀರ ಕಿಲನ್ ಗಣಪತಿ ಚುನಾವಣಾ ಉಸ್ತುವಾರಿ ವಹಿಸಿದ್ದ ಪುಳ್ಳಂಗಡ ಪವನ್, ಶಕ್ತಿಕೇಂದ್ರ ಪ್ರಮುಖರಾದ ಸುಖೇಶ್, ಆರ್ಎಂಸಿ ಮಾಜಿ ಅಧ್ಯಕ್ಷ ಆದೇಂಗಡ ವಿನುಚಂಗಪ್ಪ, ರಾಜ್ಯ ಕೃಷಿ ಮೋರ್ಚ ಕಾರ್ಯದರ್ಶಿ ಯಮುನ ಚಂಗಪ್ಪ, ಮುಂತಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಿಜಯೋತ್ಸವದಲ್ಲಿ ಯುವ ಮೋರ್ಚ ತಾಲೂಕು ಅಧ್ಯಕ್ಷ ಕವನ್ ಕಾರ್ಯಪ್ಪ,ಪ್ರಧಾನ ಕಾರ್ಯದರ್ಶಿ ಭರತ್, ಉಪಾಧ್ಯಕ್ಷ ಪೊನ್ನಣ್ಣ,ಮುತ್ತಪ್ಪ, ಗುಮ್ಮಟ್ಟೀರ ಚಂಗಪ್ಪ, ಅಜೇಯ್ ಕವನ್, ಅಡ್ಡೆಂಗಡ ಅರುಣ್, ಗಜೇಂದ್ರ,ರಘು, ಮುಂತಾದ ಪ್ರಮುಖರು ಹಾಜರಿದ್ದರು. ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಾಧ್ಯಗೋಷ್ಠಿಯೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಮೆರವಣಿಗೆ ಸಾಗಿ ವಿಜಯೋತ್ಸವ ಆಚರಿಸಿದರು.