ಚೆಟ್ಟಳ್ಳಿ, ಜ. ೫: ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಹದಿನೈದು ಸ್ಥಾನಗಳಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆರು ಸ್ಥಾನಗಳನ್ನು ಗೆದ್ದ ಹಿನ್ನೆಲೆ ನಗರದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ವಿಜಯೋತ್ಸವದ ಮೆರವಣಿಗೆಯನ್ನು ಚೆಟ್ಟಳ್ಳಿ ನಗರದಲ್ಲಿ ಆಚರಿಸಿ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿದರು.
ಸ್ಥಾನೀಯ ಸಮಿತಿ ಅಧ್ಯಕ್ಷ ಪುತ್ತರಿರ ಪಪ್ಪು ತಿಮ್ಮಯ್ಯ, ಮೂಡಳ್ಳಿ ತೀರ್ಥಕುಮಾರ್, ಸಿಂಧು ರಾಜನ್, ಶಶಿ ಮಂಜುನಾಥ್, ಮುತ್ತಪ್ಪ, ರಸೀನಾ ಮುಜೀಬ್, ಕೆ.ಬಿ. ಸರಸ್ವತಿ, ಜಿ.ಪಂ. ಸದಸೆÀ್ಯ ಸುನಿತಾ ಮಂಜುನಾಥ್, ಮೊಹಮದ್ ರಫೀಕ್, ಗಫೂರ್ ಪಿ.ಎಂ. ಅಬಿದ್, ಶುಕೂರ್, ಓ.ಎಂ., ಶಂಶು ಕಂಡಕೆರೆ, ಮೊಯ್ದು ಅಬ್ಯಲ್, ಸಲೀಂ ಅಬ್ಯಲ್, ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ್ ಮುಂತಾದವರು ಇದ್ದರು.