ನಾಪೆೆÇÃಕ್ಲು, ಜ. ೬: ಕಾರುಗುಂದ ಮತ್ತು ಕಡಿಯತ್ತೂರು ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲು ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಸುಮಾರು ರೂ. ೫೨ ಲಕ್ಷ ವೆಚ್ಚದ ಕಾಮಗಾರಿಗೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು. ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಂಡು ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಈ ಸಂದರ್ಭ ತಾ.ಪಂ. ಸದಸ್ಯ ಕೆÉÆಡಪಾಲು ಎಸ್. ಗಣಪತಿ. ಗ್ರಾ.ಪಂ. ಸದಸ್ಯರಾದ ನಾಪಂಡ ರ‍್ಯಾಲಿ ಮಾದಯ್ಯ, ಮುತ್ತಪ್ಪ, ಲಿಕಿತಾ ಹಾಗೂ ಗ್ರಾಮದ ಪ್ರಮುಖರು, ಇಂಜಿನಿಯರ್ ಶ್ರೀಕಂಠಯ್ಯ, ಮತ್ತು ಗುತ್ತಿಗೆದಾರ ಮೊಯ್ದು ಮತ್ತಿತರರು ಇದ್ದರು.