ಸೋಮವಾರಪೇಟೆ, ಜ. ೬: ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಬಿಳಿಕಿಕೊಪ್ಪ ಗ್ರಾಮದ ಸಿ.ಕೆ. ಮಲ್ಲಪ್ಪ ಹಾಗೂ ಕಾರ್ಯದರ್ಶಿಯಾಗಿ ಯಡೂರು ಗ್ರಾಮದ ಬಿ.ಎಂ. ಆನಂದ್ ಆಯ್ಕೆಯಾಗಿದ್ದಾರೆ.

ಇಲ್ಲಿನ ನೌಕರರ ಭವನದಲ್ಲಿ ನಡೆದ ಸಭೆಯಲ್ಲಿ ನಿರ್ದೇಶಕರುಗಳಾಗಿ ಬಿ.ಕೆ. ಕುಟ್ಟಪ್ಪ, ಹೆಚ್.ಎನ್. ತಂಗಮ್ಮ, ಎಲ್.ಹೆಚ್. ರಾಜು, ಹೆಚ್.ಹೆಚ್. ಅಣ್ಣಪ್ಪ ಶೆಟ್ಟಿ, ಹೆಚ್.ಜಿ. ಕುಟ್ಟಪ್ಪ, ಬಿ.ಎಸ್. ನಿರ್ಮಲ, ಕೆ.ಟಿ. ಮೇದಪ್ಪ, ಎಸ್.ಜಿ. ಜಯಪ್ಪ, ಬಿ.ಬಿ. ವೀರಭದ್ರಪ್ಪ, ಡಿ.ಎಸ್. ಗಣಪತಿ, ಟಿ.ಕೆ. ಮಾಚಯ್ಯ, ಎಸ್.ಬಿ. ರಾಜಪ್ಪ ಅವರುಗಳನ್ನು ನೇಮಿಸಲಾಯಿತು.

ಗೌರವ ಸಲಹೆಗಾರರಾಗಿ, ಹಾಲೇಬೇಲೂರು ನಿರ್ವಾಣಿಶೆಟ್ಟಿ, ಸಲಹೆಗಾರರಾಗಿ ಬಿ.ಕೆ. ತಿಮ್ಮಯ್ಯ, ಎಂ.ಎ. ವೀರಪ್ಪ, ಎ.ಎಂ. ಗುಂಡೇಗೌಡ ಅವರುಗಳು ಆಯ್ಕೆ ಮಾಡಲಾಯಿತು.