ಕೂಡಿಗೆ ಜ ೪: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆ ಹೊಸೂರಿಗೆÀ ಬಾಣವಾರ ಮೀಸಲು ಅರಣ್ಯ ಪ್ರದೇಶದಿಂದ ಬಂದ ನಾಲ್ಕು ಕಾಡಾನೆಗಳು ಇಂದು ಈ ವ್ಯಾಪ್ತಿಯ ಜನರಲ್ಲಿ ಆತಂಕ ಸೃಷ್ಟಿಸಿದವು. ಹಲವು ಮಂದಿಯ ದೈನಂದಿನ ಚಟುವಟಿಕೆ ಗಳಿಗೆ ಆನೆಗಳು ಅಡ್ಡವಾದರೆ ಕುಶಾಲನಗರ - ಹಾಸನ ಹೆದ್ದಾರಿ ಯಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಆದ ಘಟನೆಯೂ ನಡೆಯಿತು. ಇನ್ನು ಕೆಲವರಿಗೆ ಮನೋರಂಜನೆ ನೀಡಿದವು. ಆನೆಗಳ ರಂಪಾಟ ನೋಡಲು ಬಹಳಷ್ಟು ಮಂದಿ ಸೇರಿದರಾದರೂ ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಸೀಗೆಹೊಸೂರು ಮುಖ್ಯ ರಸ್ತೆಯಲ್ಲಿ ಇಂದು ಬೆಳಿಗ್ಗೆ ೭ ಗಂಟೆಗೆ ಕಾಣಿಸಿಕೊಂಡ ಕಾಡಾನೆಗಳು ಅಲ್ಲಿಂದ ಹಾರಂಗಿ (ಮೊದಲ ಪುಟದಿಂದ) ನಾಲೆಯ ಮೂಲಕ ಕಣಿವೆ - ಹಕ್ಕೆ ಗ್ರಾಮದ ಮಧ್ಯ ಭಾಗದಲ್ಲಿರುವ ನಾಲೆಯಲ್ಲಿಯೂ ಕೆಲ ಕಾಲ ಕಳೆದವು. ಹಾಸನ - ಕುಶಾಲನಗರ ಹೆದ್ದಾರಿಯನ್ನು ದಾಟಿಕೊಂಡು ಕಣಿವೆ ಹತ್ತಿರವಿರುವ ಕಾವೇರಿ ನದಿಯನ್ನು ದಾಟಿ ಪಿರಿಯಾಪಟ್ಟಣ ತಾಲೂಕಿನ ನದಿ ತೀರದ ನಾಲ್ಕು ಗ್ರಾಮಗಳಲ್ಲಿಯೂ ಅಡ್ಡಾಡಿದವು.ನಂತರ ಪಿರಿಯಾಪಟ್ಟಣ ತಾಲೂಕಿನ ಕಾವೇರಿ ನದಿ ಸಮೀಪದ ಕಣಿವೆ ತೂಗುಸೇತುವೆ ಮತ್ತು ಹಾರಂಗಿ ಬಲದಂಡೆ ನಾಲೆ ಸಮೀಪದಲ್ಲಿ ರಾಜಾರೋಷವಾಗಿ ಅಡ್ಡಾಡುತ್ತಿದ್ದ ಆನೆಗಳನ್ನು ಪಿರಿಯಾಪಟ್ಟಣ ತಾಲೂಕಿನ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಟಾಕಿ ಸಿಡಿಸಿ ಕಣಿವೆ - ಹುಲುಸೆ ಗ್ರಾಮದ ಕಾವೇರಿ ನದಿಯನ್ನು ದಾಟಿಸಿದರು. ಇಷ್ಟರಲ್ಲಿ ಗ್ರಾಮಸ್ಥರೆಲ್ಲ ಭಯವೇ ಇಲ್ಲವೆಂಬAತೆ ಆನೆಗಳು ಓಡಾಡುವ ದೃಶ್ಯವನ್ನು ನೋಡಲು ಸೇರಿದ್ದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಆನೆಗಳಿಗೆ ಗೊಂದಲ ಉಂಟಾಗಿ ಕಾಡಿನತ್ತ ತೆರಳಲು ಅರಣ್ಯ ಇಲಾಖೆ ಹರಸಾಹಸ ಪಡಬೇಕಾಯಿತು. ೬ ಗಂಟೆಗಳ ಕಾರ್ಯಾಚರಣೆಯ ನಂತರ ಮನೋರಂಜನೆಯೊAದಿಗೆ ಭಯದ ವಾತಾವರಣವನ್ನೂ ಸೃಷ್ಟಿಸಿದ ಕಾಡಾನೆಗಳು ಕಾಡಿಗೆ ತೆರಳಿದವು. ನಾಲ್ಕು ಆನೆಗಳ ಪೈಕಿ ಮೂರು ಗಂಡು ಆನೆ ಮತ್ತು ಒಂದು ಹೆಣ್ಣಾನೆಗಳು ಇದ್ದವು. ಆನೆಗಳು ಕಣಿವೆ - ಹುಲುಸೆ ಕಾವೇರಿ ನದಿಯ ತೀರದಲ್ಲಿ ಎರಡೆರಡು ಬೇರೆ ಗುಂಪುಗಳಾಗಿ ಚಲಿಸತೊಡಗಿದ್ದು ಅರಣ್ಯ ಇಲಾಖೆಯವರಿಗೆ ಕಾರ್ಯಾಚರಣೆ ನಡೆಸಲು ಬಾರಿ ಕಷ್ಟಕರವಾಗಿತ್ತು. ಕೊನೆಗೂ ಆನೆಗಳನ್ನು ಕಾಡಿನತ್ತ ಓಡಿಸುವ ಕಾರ್ಯಾಚರಣೆಯಲ್ಲಿ ಪಿರಿಯಾಪಟ್ಟಣ ತಾಲೂಕು ಅರಣ್ಯ ಇಲಾಖೆ, ಸೋಮವಾರಪೇಟೆ ವಲಯ ಅರಣ್ಯ ಇಲಾಖಾ ಸಿಬ್ಬಂದಿ, ಅಧಿಕಾರಿ ವರ್ಗ, ಹೆಬ್ಬಾಲೆ ಅರಣ್ಯ ಸಿಬ್ಬಂದಿ, ಹುದುಗೂರು ಮತ್ತು ಕುಶಾಲನಗರ-ಬಾಣವಾರ ಅರಣ್ಯ ಸಿಬ್ಬಂದಿ ವರ್ಗದವರು ಸೇರಿದಂತೆ ಅಧಿಕಾರಿ ವರ್ಗದವರು ಮತ್ತು ಕುಶಾಲನಗರ ಗ್ರಾಮಾಂತರ ಪೊಲೀಸರು ಭಾಗವಹಿಸಿ ಯಶಸ್ವಿಗೊಳಿಸಿದರು. -ಕೆ.ಕೆ. ನಾಗರಾಜಶೆಟ್ಟಿ