ಮಡಿಕೇರಿ, ಜ. ೪: ತಾ. ೧ ರಿಂದ ರಾಜ್ಯಾದ್ಯಂತ ೧೦ನೇ ತರಗತಿ ಹಾಗೂ ದ್ವಿತೀಯ ಪಿ.ಯು. ತರಗತಿಗಳು ಪ್ರಾರಂಭವಾಗಿದೆ. ಇದರೊಂದಿಗೆ ೬ ರಿಂದ ೯ನೇ ತರಗತಿಗಳಿಗೆ ವಿದ್ಯಾಗಮ ಪ್ರಾರಂಭವಾಗಿದ್ದು ಕೋವಿಡ್ ಪರೀಕ್ಷೆ ಸಂಬAಧ ಜಿಲ್ಲೆಯ ಹಲವು ಪೋಷಕರಿಗೆ ಗೊಂದಲ ಉಂಟಾಗಿದೆ. ಸರಕಾರದ ನಿಯಮದ ಪ್ರಕಾರ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಿಸುವುದು ಕಡ್ಡಾಯವಲ್ಲವಾದರೂ ಜಿಲ್ಲೆಯ ಹಲವು ಶಾಲೆಗಳು ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಿಸುತ್ತಿರುವು ದಾಗಿ ಪೋಷಕರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.ಕೆಲವು ಖಾಸಗಿ ಶಾಲೆಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಆಗಮಿಸಿ ಶಾಲೆಯ ೭ನೇ ತರಗತಿ ವಿದ್ಯಾರ್ಥಿಗಳ ನ್ನೊಳಗೊಂಡು ಪ್ರತಿ ಯೊಬ್ಬರಿಗೂ ಕೋವಿಡ್ ಪರೀಕ್ಷೆ ನಡೆಸುತ್ತಿದ್ದಾರೆ. ದ್ರವ ಮಾದರಿ ಪರೀಕ್ಷೆ ನಡೆಸುವ ಸಂದರ್ಭ ಓರ್ವ ವಿದ್ಯಾರ್ಥಿಯ ಮೂಗಿನ ಒಳಭಾಗಕ್ಕೆ ಗಾಯವಾಗಿರು ವುದಾಗಿಯೂ ವಿದ್ಯಾರ್ಥಿಯ ಪೋಷಕರು ತಿಳಿಸಿದ್ದಾರೆ. ನಗರದ ಅಶ್ವಿನಿ ಆಸ್ಪತ್ರೆಯಲ್ಲಿಯೂ ೨ ದಿನಗಳಿಂದ ವಿದ್ಯಾರ್ಥಿಗಳ ಸಾಲು (ಮೊದಲ ಪುಟದಿಂದ)À ಕಂಡುಬರುತ್ತಿದ್ದು ಎಲ್ಲರಿಗೂ ಪರೀಕ್ಷೆ ನಡೆಸುವುದು ಕಷ್ಟಸಾಧ್ಯವಾಗಿದೆ.ಈ ಕುರಿತು ‘ಶಕ್ತಿ’ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಸಂಪರ್ಕಿಸಿದಾಗ ಸರಕಾರದ ‘ಎಸ್.ಒ.ಪಿ’ ಪ್ರಕಾರ ಕೋವಿಡ್ ಲಕ್ಷಣಗಳು ಇರುವ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಕಡ್ಡಾಯವಾಗಿದೆ. ಇತರರಿಗೆ ಕಡ್ಡಾಯವಿಲ್ಲ. ಕೆಲ ಶಾಲೆಗಳು ಕಡ್ಡಾಯವಾಗಿ ಎಲರನ್ನೂ ಪರೀಕ್ಷೆಗೆ ಒಳಪಡಿಸುತ್ತಿರುವುದನ್ನು ನಿಲ್ಲಿಸಲಾಗುವುದು. ಶಿಕ್ಷಣ ಇಲಾಖೆಯ ಉಪನಿದೇರ್ಶಕರು ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ಕೋವಿಡ್ ಪರೀಕ್ಷೆ ಮಾಡುತ್ತಿರುವುದನ್ನು ನಿಲ್ಲಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು.