*ಗೋಣಿಕೊಪ್ಪ, ಜ. ೪: ಬಾಳೆಲೆ ಗ್ರಾಮದ ಹಿರಿಯ ಗ್ರಾಮಸ್ಥ ಪೊಡಮಾಡ ಉತ್ತಪ್ಪ ಅವರ ಸಾವಿಗೆ ಕಾರಣರಾದ ಆರೋಪಿಗಳನ್ನು ೪೮ ಗಂಟೆಗಳೊಳಗೆ ಬಂಧಿಸದಿದ್ದಲ್ಲಿ ತಾ. ೧೧ ರಂದು ಬಾಳೆಲೆ ಗ್ರಾಮವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಬಾಳಲೆ ಕೊಡವ ಸಮಾಜ ನಿರ್ಣಯಿಸಿದೆ.

ಕೊಡವ ಸಮಾಜ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಹಂತಹAತವಾಗಿ ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ಕೊಡವ ಸಮಾಜಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಬೆಂಬಲದೊAದಿಗೆ ಪ್ರತಿಭಟನೆ ನಡೆಸಿ ಉತ್ತಪ್ಪ ಅವರ ಸಾವಿಗೆ ನ್ಯಾಯ ಒದಗಿಸಿಕೊಡಲು ಶ್ರಮಿಸುವುದಾಗಿ ಭರವಸೆ ನೀಡಲಾಯಿತು.ಈ ಸಂದರ್ಭ ಮಾತನಾಡಿದ ಮಲ್ಚಿರ ಬೋಸ್ ಚಿಟ್ಟಿಯಪ್ಪ ಅವರು, ಜಾತಿ ನಿಂದನೆಯ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಸಮಾಜ ವನ್ನು ವಂಚಿಸುವ ತಂತ್ರ ನಡೆಯುತ್ತಿದೆ. ಇದು ಸಮಾಜಘಾತುಕ ಬೆಳವಣಿಗೆ ಯಾಗಿದ್ದು,

(ಮೊದಲ ಪುಟದಿಂದ) ಆತಂಕಕಾರಿ. ಇಂತಹ ವಿಷಕಾರಿ ಘಟನೆಗಳನ್ನು ಖಂಡಿಸಬೇಕಾಗಿದೆ ಎಂದರು. ಇಂತಹ ಘಟನೆ ಮರುಕಳಿಸದಂತೆ ಮತ್ತು ಮೃತಪಟ್ಟ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಲು ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇದಕ್ಕೆ ಶಾಸಕರ ಮತ್ತು ಪೊಲೀಸ್ ಅಧಿಕಾರಿಗಳ ಸಹಕಾರ ಮುಖ್ಯ ಎಂದು ಹೇಳಿದರು. ನಮ್ಮಲ್ಲಿ ಒಗ್ಗಟ್ಟು ಇಲ್ಲದೇ ಇರುವುದೇ ನಮ್ಮ ಈ ಸ್ಥಿತಿಗೆ ಕಾರಣ. ನಮ್ಮ ಪರಿಸ್ಥಿತಿಗೆ ನಾವೇ ಹೊಣೆಗಾರರಾಗಿದ್ದೇವೆ. ನಮ್ಮ ಒಗ್ಗಟ್ಟಿನ ಪ್ರದರ್ಶದಿಂದ ಮೃತರ ಆತ್ಮಕ್ಕೆ ಶಾಂತಿ ಸಿಗುವಂತೆ ಮತ್ತು ಕುಟುಂಬಕ್ಕೆ ನ್ಯಾಯ ಸಿಗುವ ಹೋರಾಟ ನಡೆಸಬೇಕಾಗಿದೆ ಎಂದು ಗ್ರಾಮಸ್ಥ ಕಾಟಿಮಾಡ ಶರಿನ್ ಹೇಳಿದರು. ಗ್ರಾಮಸ್ಥ ಮಲ್ಚಿರ ಬೋಸ್ ಮಂದಣ್ಣ ಮಾತನಾಡಿ ಕೊಲೆ ಕೇಸ್ ಎಂದು ದಾಖಲಾಗಿದ್ದರೂ ಆರೋಪಿ ಗಳನ್ನು ಬಂಧಿಸದೆ ಪೊಲೀಸರು ನಿರ್ಲಕ್ಷ÷್ಯ ವಹಿಸುತ್ತಿರುವುದು ಯಾವುದೋ ಷಡ್ಯಂತರ ಅಡಗಿದೆ ಎಂದು ಆರೋಪಿಸಿದರು. ಮಾಚಂಗಡ ಸುಜಾಪೂಣಚ್ಚ (ಮೊದಲ ಪುಟದಿಂದ) ಆತಂಕಕಾರಿ. ಇಂತಹ ವಿಷಕಾರಿ ಘಟನೆಗಳನ್ನು ಖಂಡಿಸಬೇಕಾಗಿದೆ ಎಂದರು. ಇಂತಹ ಘಟನೆ ಮರುಕಳಿಸದಂತೆ ಮತ್ತು ಮೃತಪಟ್ಟ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಲು ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇದಕ್ಕೆ ಶಾಸಕರ ಮತ್ತು ಪೊಲೀಸ್ ಅಧಿಕಾರಿಗಳ ಸಹಕಾರ ಮುಖ್ಯ ಎಂದು ಹೇಳಿದರು.

ನಮ್ಮಲ್ಲಿ ಒಗ್ಗಟ್ಟು ಇಲ್ಲದೇ ಇರುವುದೇ ನಮ್ಮ ಈ ಸ್ಥಿತಿಗೆ ಕಾರಣ. ನಮ್ಮ ಪರಿಸ್ಥಿತಿಗೆ ನಾವೇ ಹೊಣೆಗಾರರಾಗಿದ್ದೇವೆ. ನಮ್ಮ ಒಗ್ಗಟ್ಟಿನ ಪ್ರದರ್ಶದಿಂದ ಮೃತರ ಆತ್ಮಕ್ಕೆ ಶಾಂತಿ ಸಿಗುವಂತೆ ಮತ್ತು ಕುಟುಂಬಕ್ಕೆ ನ್ಯಾಯ ಸಿಗುವ ಹೋರಾಟ ನಡೆಸಬೇಕಾಗಿದೆ ಎಂದು ಗ್ರಾಮಸ್ಥ ಕಾಟಿಮಾಡ ಶರಿನ್ ಹೇಳಿದರು.

ಗ್ರಾಮಸ್ಥ ಮಲ್ಚಿರ ಬೋಸ್ ಮಂದಣ್ಣ ಮಾತನಾಡಿ ಕೊಲೆ ಕೇಸ್ ಎಂದು ದಾಖಲಾಗಿದ್ದರೂ ಆರೋಪಿ ಗಳನ್ನು ಬಂಧಿಸದೆ ಪೊಲೀಸರು ನಿರ್ಲಕ್ಷ÷್ಯ ವಹಿಸುತ್ತಿರುವುದು ಯಾವುದೋ ಷಡ್ಯಂತರ ಅಡಗಿದೆ ಎಂದು ಆರೋಪಿಸಿದರು. ಮಾಚಂಗಡ ಸುಜಾಪೂಣಚ್ಚ ವಿಷಾಧನೀಯ, ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಶ್ನಿಸುವಂತಾಗಿದೆ ಎಂದು ಬಾಳೆಲೆ ಗ್ರಾ.ಪಂ. ಸದಸ್ಯ ಆದೇಂಗಡ ವಿನು ಉತ್ತಪ್ಪ ವಿಷಾದ ವ್ಯಕ್ತಪಡಿಸಿದರು.

ನಿಟ್ಟೂರು ಗ್ರಾ.ಪಂ. ಸದಸ್ಯ ಚಕ್ಕೇರ ಸೂರ್ಯಅಯ್ಯಪ್ಪ ಅವರು ಜಾತಿಯನ್ನು ಮುಂದೆ ಇಟ್ಟು ಇತರ ಜಾತಿಯವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಬಾಳೆಲೆ ವ್ಯಾಪ್ತಿಯಲ್ಲಿ ಈ ರೀತಿಯಲ್ಲಿ ಹಲವು ಪ್ರಕರಣಗಳು ಕಂಡುಬAದಿದೆ ಇದು ವಿಷಾಧನೀಯ ಎಂದು ಹೇಳಿದರು.

ಪಕ್ಷರಹಿತವಾಗಿ, ರಾಜಕೀಯ ರಹಿತವಾಗಿ ಹೋರಾಟ ನಡೆಸ ಬೇಕಾಗಿದೆ. ಇದಕ್ಕೆ ಸ್ಥಳೀಯ ಶಾಸಕ ಸಹಕಾರ ಬಹುಮುಖ್ಯ ವಾಗಿದ್ದು, ಶಾಸಕರು ಈ ಬಗ್ಗೆ ಕಾಳಜಿ ವಹಿಸಿದರೆ ನ್ಯಾಯ ಸಿಗಲಿದೆ ಎಂದು ಕಾಡ್ಯಮಾಡ ಉದಯ ಅಭಿಪ್ರಾಯ ಹಂಚಿ ಕೊಂಡರು.

ಇದೇ ಸಂದರ್ಭದಲ್ಲಿ ತನ್ನ ತಂದೆಯ ಸಾವಿಗೆ ಕಾರಣವಾದ ಘಟನೆಯನ್ನು ನೆನೆದು ಮಗ ಪೊಡಮಾಡ ಪ್ರದೀಪ್ ಕರುಂಬಯ್ಯ ಕಣ್ಣೀರು ಸುರಿಸಿ ತಂದೆಯ ಸಾವಿಗೆ ನ್ಯಾಯ ಒದಗಿಸುವಂತೆ ಕೊಡವ ಸಮಾಜದ ಹಾಗೂ ಸಮುದಾಯದ ಹಿರಿಯರಲ್ಲಿ ಮನವಿ ಮಾಡಿದರು.

ಉಪಾಧ್ಯಕ್ಷ ಮಾಚಂಗಡ ಭೀಮಯ್ಯ, ಗೌರವ ಕಾರ್ಯದರ್ಶಿ ಆದೇಂಗಡ ಕೆ. ಶೇಖರ್, ಕೋಶಾಧಿಕಾರಿ ಆಶೋಕ್, ನಿರ್ದೇಶಕರುಗಳಾದ ಪಾರುವಂಗಡ ಕಾವೇರಪ್ಪ, ಚಿಮ್ಮಣಮಾಡ ಕೃಷ್ಣಗಣಪತಿ, ಕಾಂಡೇರ ಗಯದೇವಯ್ಯ, ಮಾಪಂಗಡ ಅಯ್ಯಪ್ಪ ಸೇರಿದಂತೆ ಉತ್ತಪ್ಪನವರ ಕುಟುಂಬಸ್ಥರು ಬಾಳೆಲೆಯ ಹೋಬಳಿಯ ೫ ಗ್ರಾಮದ ಕೊಡವ ಸಮುದಾಯದ ಪ್ರಮುಖರು ಹಾಜರಿದ್ದರು.

ಕೊಡವ ಸಮಾಜದ ಪದಾಧಿಕಾರಿಗಳು ಪೊನ್ನಂಪೇಟೆ ಶಾಸಕರ ಕಚೇರಿಗೆ ತೆರಳಿ ಶಾಸಕರನ್ನು ಭೇಟಿಯಾಗಿ ಉತ್ತಪ್ಪರವರ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಶಾಸಕರು ಘಟನೆಗೆ ಸಂಬAಧಿಸಿದAತೆ ೩೦೨ ಸೆಕ್ಷನ್ ಹಾಕುವಂತೆ ತಿಳಿಸಲಾಗಿದೆ ಎಂದು ಹೇಳಿದರು. ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಘಟನೆಯ ಬಗ್ಗೆ ಕೈಗೊಂಡ ಕ್ರಮಗಳ ವರದಿ ಸಂಜೆಯೊಳಗೆ ನೀಡುವಂತೆ ಸೂಚಿಸಿದರು. ತಕ್ಷಣವೇ ಆರೋಪಿಗಳ ಮೇಲೆ ಕ್ರಮಕೈಗೊಳ್ಳ ಬೇಕೆಂದು ಆದೇಶಿಸಿದರು.

- ಎನ್.ಎನ್. ದಿನೇಶ್