ಕಣಿವೆ, ಜ. ೪ : ಕೂಡು ಮಂಗಳೂರು ಗ್ರಾಮ ಪಂಚಾಯಿತಿಗೆ ಚುನಾಯಿತಗೊಂಡ ಬಿಜೆಪಿ ಬೆಂಬಲಿತ ನೂತನ ಸದಸ್ಯರಿಗೆ ಕೂಡಿಗೆಯ ಮೂಡ್ಲಿಗೌಡ ಸಭಾಂಗಣ ದಲ್ಲಿ ಬಿಜೆಪಿ ವತಿಯಿಂದ ಸನ್ಮಾನಿಸ ಲಾಯಿತು.

ತಾಲೂಕು ಬಿಜೆಪಿ ವಕ್ತಾರ ಕೆ.ಜಿ.ಮನು ಮಾತನಾಡಿ, ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತಗೊಂಡಿ ರುವುದರಿಂದ ಆಡಳಿತ ಚುಕ್ಕಾಣಿ ಬಿಜೆಪಿ ಪಾಲಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪಕ್ಷದ ಕಾರ್ಯಕರ್ತರು ಮತ್ತಷ್ಟು ಹುರುಪಿನಿಂದ ಪಕ್ಷದ ಸಂಘಟನೆಗೆ ತೊಡಗುವ ಮೂಲಕ ಮುಂಬರುವ ತಾಲೂಕು ಹಾಗೂ ಜಿ. ಪಂ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು. ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಕೆ.ಭೋಗಪ್ಪ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್.ಮಂಜುಳಾ, ತಾ.ಪಂ. ಸದಸ್ಯ ಗಣೇಶ್, ನೂತನ ಚುನಾಯಿತ ರಾದ ಚಂದ್ರು ಮೂಡ್ಲಿಗೌಡ, ಚಂದ್ರಶೇಖರ್, ಇಂದಿರ ರಮೇಶ್, ಚೈತ್ರ ಮಂಜುನಾಥ್, ಭಾಸ್ಕರ ನಾಯಕ್, ಗಿರೀಶ್, ಶಿವಮ್ಮ, ಶಶಿಕಲಾ, ಕುಮಾರ, ಭಾಗ್ಯ, ಲಕ್ಷ್ಮಿ, ಗೌರಮ್ಮ, ದಿನೇಶ್ ಹಾಗೂ ದೀಪ ಇದ್ದರು.