ಮಡಿಕೇರಿ, ಜ. ೪: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಐಚೆಟ್ಟಿರ ಮಾ. ಮುತ್ತಣ್ಣ ಅವರ ೧೦೦ನೇ ಜನ್ಮಶತಮಾನೋತ್ಸವ ಕಾರ್ಯಕ್ರಮವು ತಾ. ೧೦ ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಮಾಜ ಸೇವಕ ಐಚೆಟ್ಟಿರ ಸಿ. ಅಪ್ಪಚ್ಚು ಅವರು ದ್ವಾರದ ಉದ್ಘಾಟನೆ ಮಾಡಲಿದ್ದಾರೆ. ಕಾಫಿ ಬೆಳೆಗಾರ ಚೇಂದAಡ ಚುಮ್ಮಿ ಪೂವಯ್ಯ ಅವರು ಬಿ.ಡಿ. ಗಣಪತಿಯವರ ಪುಸ್ತಕ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ. ಕಾಫಿ ಬೆಳೆಗಾರ ಐಚೆಟ್ಟಿರ ಎಸ್. ಕುಶಾಲಪ್ಪ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಜಾನಪದ ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ, ಹಿರಿಯ ಬರಹಗಾರ್ತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಮತ್ತು ಐಚೆಟ್ಟಿರ ಎಂ. ಗಪ್ಪಣ್ಣ ಅವರು ಭಾಗವಹಿಸಲಿದ್ದಾರೆ. ಚೆಟ್ಟಳ್ಳಿಯ ಸಮಾಜ ಸೇವಕಿ ಐಚೆಟ್ಟಿರ ಮುತ್ತು ನಂಜಪ್ಪ ಇವರು ಶತಮಾನೋತ್ಸವ ಸಂಚಿಕೆಯ ಬಿಡುಗಡೆ ಮಾಡುತ್ತಾರೆ. ಐಚೆಟ್ಟಿರ ಫ್ಯಾಮಿಲಿ ಫಂಡ್ ಅಧ್ಯಕ್ಷ ಐಚೆಟ್ಟಿರ ಮೋಹನ್ ದೇವಯ್ಯ ಐಮಾ ಮುತ್ತಣ್ಣಂಡ ಕವನ ಮಾಲೆ ಎಂಬ ಪುಸ್ತಕ ಬಿಡುಗಡೆ ಮಾಡುತ್ತಾರೆ. ನಂತರ ನಡೆಯುವ ವಿಚಾರಗೋಷ್ಠಿ-೧ ಕಾರ್ಯಕ್ರಮದಲ್ಲಿ “ಐಚೆಟ್ಟಿರ ಮಾ.ಮುತ್ತಣ್ಣ-ಬದ್‌ಕ್ ಪಿಂಞ ಸಾಧನೆ” ಎಂಬ ವಿಷಯದ ಬಗ್ಗೆ ಐಚೆಟ್ಟಿರ ಪುಷ್ಪ ಅಪ್ಪಚ್ಚು ಅವರು ಹಾಗೂ ವಿಚಾರಗೋಷ್ಠಿ-೨ರಲ್ಲಿ “ಐ.ಮಾ. ಮುತ್ತಣ್ಣಂಡ ವೈಚಾರಿಕ ಪ್ರಜ್ಞೆ” ಎಂಬ ವಿಷಯದ ಬಗ್ಗೆ ಅಸೀಮಾ ಮಾಸಪತ್ರಿಕೆ ಸಂಪಾದಕ ಮಾಣಿಪಂಡ ಸಂತೋಷ್ ತಮ್ಮಯ್ಯ ಅವರು ವಿಚಾರ ಮಂಡನೆಯನ್ನು ಮಾಡಲಿದ್ದಾರೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ರಸಪ್ರಶ್ನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ. ಅಕಾಡೆಮಿ ಪ್ರಕಟಿತ ಪುಸ್ತಕ ಮತ್ತು ಸಿ.ಡಿ.ಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ಸರ್ಕಾರದ ಮಾರ್ಗಸೂಚಿಯಂತೆ ಈ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.