ಮಡಿಕೇರಿ, ಜ. ೩: ಕುಶಾಲನ ಗರವನ್ನು ಕೇಂದ್ರವಾಗಿಸಿಕೊAಡು ತಾಲೂಕು ರಚನೆಗೊಂಡಿರುವ ಬಗ್ಗೆ ಹೋರಾಟಗಾರರು ಸಂತಸ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾವೇರಿ ತಾಲೂಕು ಕೇಂದ್ರಿಯ ಸಮಿತಿ ಅಧ್ಯಕ್ಷ ವಿ.ಪಿ ಶಶಿಧರ್, ದಶಕಗಳ ಹೋರಾಟ ಸಫಲವಾಗಿದೆ. ಪಕ್ಷ, ಧರ್ಮ, ಜಾತಿಯನ್ನು ಮೀರಿ ಕುಶಾಲನಗರ ತಾಲೂಕಿಗೆ ನಿರಂತರ ಹೋರಾಟ ಮಾಡಿದ ಫಲವಾಗಿ ಇಂದು ತಾಲೂಕು ರಚನೆಗೊಂಡಿದೆ. ಇದು ಹೋರಾಟಗಾರರು ಹಾಗೂ

ಜನರಿಗೆ ಸಂತಸ ತಂದಿದೆ.

ವಿಳಂಬವಾದರು ಕೂಡ ತಾಲೂಕು ರಚನೆಯಾಗಿದೆ. ಈ ನಿಟ್ಟಿನಲ್ಲಿ ಸ್ವಯಂ ಪ್ರೇರಿತರಾಗಿ ಜನತೆ ದೇವರಲ್ಲಿ ವಿಶೇಷ ಪೂಜೆ, ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಹೋರಾಟದಲ್ಲಿ ರಾಜಕೀಯ ಸೋಂಕು ತಗುಲದಂತೆ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗಿತ್ತು. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ತಾಲೂಕು ರಚನೆಗೆ ಮುಖ್ಯ ಕಾರಣವಾಗಿದೆ ಎಂದರು. ಮುಂದಿನ ದಿನದಲ್ಲಿ ತಾಲೂಕು ರಚನೆಗೆ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರನ್ನು ಒಂದುಗೂಡಿಸಿ ‘ಕೃತಜ್ಞತ ಸಮರ್ಪಣ, ಧನ್ಯತಾ ಮಿಲನ’ ಕಾರ್ಯಕ್ರಮ ಮಾಡಲಾಗುವುದು ಎಂದರು. ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಚಿಂತನೆ ಇದೆ ಎಂದರು. ಎಲ್ಲ ಸೌಲಭ್ಯ ವಿದ್ದರೂ ಕೂಡ ತಾಲೂಕು ರಚನೆ ಮಾಡಲು ಸರ್ಕಾರ ಮನಸ್ಸು ಮಾಡಿರಲಿಲ್ಲ. ಇದೀಗ ಎಲ್ಲ ಪ್ರಕ್ರಿಯೆ ಮುಗಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ನಿಟ್ಟಿನಲ್ಲಿ ತಾ. ೫ ರಂದು ಕುಶಾಲನಗರದಲ್ಲಿ ಕಾವೇರಿ ತಾಲೂಕು ಕೇಂದ್ರಿಯ ಸಮಿತಿ ವತಿಯಿಂದ ಹೋರಾಟಗಾರರು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸ ಲಾಗುವುದು. ಮುಂದಿನ ರೂಪುರೇಷೆ ಬಗ್ಗೆ ಚರ್ಚಿಸಲಾಗುವುದು ಎಂದರು.

ತಾಲೂಕಿನಿಂದ ಹರದೂರು ಹಾಗೂ ಅಂಜನಗೇರಿ ಬೆಟ್ಟಗೇರಿಯನ್ನು ಕೈಬಿಡಲಾಗಿದ್ದು, ಇದನ್ನು ಸೇರಿಸುವಂತೆ ಮುಂದಿನ ದಿನಗಳಲ್ಲಿ ಸರ್ಕಾರದ ಗಮನ ಸೆಳೆಯಲಾಗುತ್ತದೆ. ಕ್ಷಿಪ್ರಗತಿಯಲ್ಲಿ ಕ್ಷೇತ್ರ ವಿಂಗಡಿಸಿ ಪ್ರತ್ಯೇಕ ತಾ.ಪಂ. ರಚನೆ ಮಾಡಬೇಕು. ತಹಶೀಲ್ದಾರ್ ಹಾಗೂ ಸಮರ್ಪಕ ಸಿಬ್ಬಂದಿಗಳನ್ನು ನೇಮಿಸಬೇಕು, ಕಂದಾಯ ಇಲಾಖೆ ತುರ್ತಾಗಿ ಕಾರ್ಯಾರಂಭವಾಗಬೇಕು. ಇತರ ಇಲಾಖೆಗಳು ಸೇವೆ ಆರಂಭಿಸಬೇಕು ಈ ನಿಟ್ಟಿನಲ್ಲಿ ಶಾಸಕರು ಸರ್ಕಾರಕ್ಕೆ ಒತ್ತಡ ಹಾಕಬೇಕೆಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಅತ್ತೂರು ನಲ್ಲೂರು ಸ್ಥಾನೀಯ ಸಮಿತಿ ಅಧ್ಯಕ್ಷ ಡಾ. ಶಶಿಕಾಂತ್ ರೈ, ತೊರೆನೂರು ಸ್ಥಾನೀಯ ಸಮಿತಿ ಅಧ್ಯಕ್ಷ ಕೃಷ್ಣೇಗೌಡ, ಜಿ.ಪಂ. ಸದಸ್ಯೆ ಚಂದ್ರಕಲಾ, ಸುನಿತಾ ಇದ್ದರು.