ಸುಂಟಿಕೊಪ್ಪ, ಜ. ೩: ರಾಷ್ಟಿçÃಯ ಹೆದ್ದಾರಿ ೨೭೫ ಅಭಿವೃದ್ಧಿ ಕಾಮಗಾರಿ ಕೇಂದ್ರ ಸರಕಾರದ ರಾಷ್ಟಿçÃಯ ಭೂಸಾರಿಗೆ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಸುಂಟಿಕೊಪ್ಪ ಪಟ್ಟಣದಲ್ಲಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಪಟ್ಟಣದ ಇಕ್ಕೆಲಗಳಲ್ಲಿನ ಅಂಗಡಿ ವರ್ತಕರು ಕಾಮಗಾರಿ ಕೆಲಸಕ್ಕೆ ಸಹಕಾರ ನೀಡುತ್ತಿದ್ದು, ಸುಂಟಿಕೊಪ್ಪ ಪೊಲೀಸ್ ಇಲಾಖೆ ವಾಹನ ಸಂಚಾರವನ್ನು ಸುವ್ಯವಸ್ಥೆಯಾಗಿ ನಡೆಸಲು ಕಾರ್ಯನಿರ್ವಹಿಸುತ್ತಿದ್ದಾರೆ.
ಸುಂಟಿಕೊಪ್ಪ ಪಟ್ಟಣದ ಎರಡು ಬದಿ ಇದ್ದ ಗೂಡಂಗಡಿ ವ್ಯಾಪಾರಸ್ಥರು ಸಹ ರಾಷ್ಟಿçÃಯ ಹೆದ್ದಾರಿಯ ಕಾಮಗಾರಿಗೆ ಸಹಕರಿಸುತ್ತಿದ್ದು, ವಾಹನ ಚಾಲಕರು, ಆಟೋರಿಕ್ಷಾ ಚಾಲಕರು ರಾಷ್ಟಿçÃಯ ಹೆದ್ದಾರಿ ಕಾಮಗಾರಿಗೆ ಸಹಮತ ನೀಡುತ್ತಿದ್ದಾರೆ. ನಗರದಿಂದ ಗದ್ದೆಹಳ್ಳದವರೆಗೆ ಕಾಮಗಾರಿ ಭರದಿಂದ ಸಾಗುತ್ತಿದೆ.