ಮಡಿಕೇರಿ, ಜ. ೩: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಡೆಸುತ್ತಿರುವ ರಾಜ್ಯದ ೮ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿ ಸಂಸ್ಥೆಗಳಲ್ಲಿ ೨೦೨೦ನೇ ಸೆಪ್ಟೆಂಬರ್‌ನಲ್ಲಿ ನಡೆದ ರೆಗ್ಯೂಲರ್ ಡಿಸಿಎಂ ತರಬೇತಿಯ ಅಂತಿಮ ಪರೀಕ್ಷೆಯಲ್ಲಿ ನಗರದ ತರಬೇತಿ ಸಂಸ್ಥೆಗೆ ೫ ರ‍್ಯಾಂಕ್ ಪಡೆದು ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ ಎಂದು ಸಹಕಾರ ಡಿಪ್ಲೊಮಾ ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಡಾ. ರೇಣುಕಾ ಆರ್.ಎಸ್. ಅವರು ತಿಳಿಸಿದ್ದಾರೆ.
ಪವಿತ್ರ ಎಂ.ಬಿ. ೧ನೇ ರ‍್ಯಾಂಕ್, ಇಂದುಶ್ರೀ ಪಿ. ೨ನೇ ರ‍್ಯಾಂಕ್, ಪ್ರಿಯ ಸೋಮಯ್ಯ ೫ನೇ ರ‍್ಯಾಂಕ್, ಜಯಶ್ರೀ ಎಂ.ಸಿ. ೯ನೇ ರ‍್ಯಾಂಕ್, ನಂಜುAಡಸ್ವಾಮಿ ಎಸ್.ಬಿ. ೯ನೇ ರ‍್ಯಾಂಕ್ ಪಡೆದಿದ್ದಾರೆ ಎಂದು ಕೆಐಸಿಎಂ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.